ತೋಟಕ್ಕೆ ಕುಡಿಯುವ ನೀರು ಬಳಕೆ: ಗ್ರಾ ಪಂ ಕಾರ್ಯದರ್ಶಿ ವಿರುದ್ಧ ಪ್ರತಿಭಟನೆ

KannadaprabhaNewsNetwork |  
Published : Mar 26, 2024, 01:18 AM ISTUpdated : Mar 26, 2024, 01:19 AM IST
ಕುಡಿಯುವ ನೀರನ್ನು ತೋಟಕ್ಕೆ ಬಳಕೆ ಗ್ರಾ ಪಂ ಕಾರ್ಯದರ್ಶಿ ವಿರುದ್ಧ ಪ್ರತಿಭಟನೆ  | Kannada Prabha

ಸಾರಾಂಶ

ಲಿಂಗದಹಳ್ಳಿ ಗ್ರಾಮ ಪಂಚಾಯಿತಿಯಿಂದ ಕೆಮ್ಮಣ್ಣಗುಂಡಿ ಸಮೀಪದ ಶಾಂತಿ ಫಾಲ್ಸ್ ಚಲಪಾತದಿಂದ ಲಿಂಗದಹಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಲೈನ್‌ನಿಂದ ಅನಧಿಕೃತವಾಗಿ ಪೈಪ್‌ಲೈನ್ ಅಳವಡಿಸಿಕೊಂಡು ಗೊಣಗಿಲ ಕಟ್ಟೆ ಸರ್ವೆ ನಂಬರ್ ೨೩ರ ಲ್ಲಿರುವ ೫ ಎಕರೆ ಅಡಿಕೆ ತೋಟಕ್ಕೆ ನೀರು ಸರಬರಾಜು ಮಾಡಿಕೊಳ್ಳುತ್ತಾರೆ ಎಂದು ಆರೋಪಿಸಿ ಲಿಂಗದಹಳ್ಳಿ ಗ್ರಾಮಸ್ಥರು ಸೋಮವಾರ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಲಿಂಗದಹಳ್ಳಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಅಧಿಕಾರ ದುರ್ಬಳಕೆ: ಆರೋಪ

ಕನ್ನಡಪ್ರಭ ವಾರ್ತೆ, ತರೀಕೆರೆ

ಲಿಂಗದಹಳ್ಳಿ ಗ್ರಾಮ ಪಂಚಾಯಿತಿಯಿಂದ ಕೆಮ್ಮಣ್ಣಗುಂಡಿ ಸಮೀಪದ ಶಾಂತಿ ಫಾಲ್ಸ್ ಚಲಪಾತದಿಂದ ಲಿಂಗದಹಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಲೈನ್‌ನಿಂದ ಅನಧಿಕೃತವಾಗಿ ಪೈಪ್‌ಲೈನ್ ಅಳವಡಿಸಿಕೊಂಡು ಗೊಣಗಿಲ ಕಟ್ಟೆ ಸರ್ವೆ ನಂಬರ್ ೨೩ರ ಲ್ಲಿರುವ ೫ ಎಕರೆ ಅಡಿಕೆ ತೋಟಕ್ಕೆ ನೀರು ಸರಬರಾಜು ಮಾಡಿಕೊಳ್ಳುತ್ತಾರೆ ಎಂದು ಆರೋಪಿಸಿ ಲಿಂಗದಹಳ್ಳಿ ಗ್ರಾಮಸ್ಥರು ಸೋಮವಾರ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಲಿಂಗದಹಳ್ಳಿ ಗ್ರಾಮ ಪಂಚಾಯಿತಿ ಗ್ರೇಡ್ -೨ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಯಾರಿಗೂ ತಿಳಿಯದಂತೆ ಅನೇಕ ವರ್ಷಗಳಿಂದ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಅನಧಿಕೃತ ವಾಗಿ ಪೈಪ್ ಲೈನನ್ನು ಅಳವಡಿಸಿಕೊಂಡು ಕುಡಿಯುವ ನೀರನ್ನು ಅಡಕೆ ತೋಟಕ್ಕೆ ಬಳಸಿಕೊಳ್ಳುತ್ತಿರುವುದು ಅಕ್ಷಮ್ಯ ಅಪರಾಧ. ತಕ್ಷಣವೇ ಸಂಬಂಧ ಪಟ್ಟ ಅಧಿಕಾರಿಯನ್ನು ಅಧಿಕಾರದಿಂದ ಅಮಾನತುಪಡಿಸಿ ಅವರ ವಿರುದ್ಧ ದೂರು ದಾಖಲು ಮಾಡುವಂತೆ ಲಿಂಗದಹಳ್ಳಿ ಗ್ರಾಮಸ್ಥರು ಒತ್ತಾಯಪಡಿಸಿದರು.

ವಿಷಯ ತಿಳಿದ ತಕ್ಷಣ ಸ್ಥಳ ಆಮಿಸಿದ ತರೀಕೆರೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಗಣೇಶ್ ಹಾಗೂ ನರೇಗಾ ಎ.ಡಿ.ಯೋಗೇಶ್ ಮತ್ತು ಲಿಂಗದಹಳ್ಳಿ ಆರಕ್ಷಕ ಠಾಣಾಧಿಕಾರಿ ಶಶಿಕುಮಾರ್ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಗ್ರಾಮಸ್ಥರ ದೂರಿನ ಮೇರೆಗೆ ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಲ್ಲದೇ ತಮ್ಮ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು.

ಈ ಸಂದರ್ಭಧಲ್ಲಿ ಕುಡಿಯುವ ನೀರಿಗೆ ಹಾಹಕಾರ ಪಡುತ್ತಿರುವ ಲಿಂಗದಹಳ್ಳಿ ಗ್ರಾಮಸ್ಥರು ಮತ್ತು ಮಹಿಳೆಯರು ಖಾಲಿ ಕೊಡ ಮತ್ತು ಬಕೇಟ್‌ಗಳನ್ನು ಹಿಡಿದು ಲಿಂಗದಹಳ್ಳಿ ಗ್ರಾಪಂ ಎದುರಿಗೆ ಪ್ರತಿಭಟನೆ ನಡೆಸಿ ಗ್ರಾಮಸ್ಥರಿಗೆ ಕುಡಿಯುವ ನೀರನ್ನು ತಿಂಗಳಿಗೆ ಎರಡು ಭಾರಿ ಮಾತ್ರ ಬಿಡುತ್ತಿರುವ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜೀವ ಜಲವನ್ನು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಅಡಿಕೆ ತೋಟಕ್ಕೆ ಬಳಸಿಕೊಳ್ಳುತ್ತಿರುವವರನ್ನು ಬಂಧಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯ ಪಡಿಸಿದರು.

ಈ ಸಂದರ್ಭದಲ್ಲಿ ಲಿಂಗದಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎನ್.ಎಸ್. ನಾಗರಾಜಪ್ಪ, ಅಧ್ಯಕ್ಷ ರತ್ನಮ್ಮ ಮೈಲಾರಪ್ಪ, ಸದಸ್ಯರಾದ ಎಂ.ಕೆ ಚಂದ್ರಪ್ಪ, ಎಂ.ಆರ್.ಧನಂಜಯ, ಸತೀಶ್, ಎಲ್.ಎಂ. ಮದು, ಮುಂತಾದವರು ಹಾಜರಿದ್ದು, ಗ್ರಾಮಪಂಚಾಯಿತಿ ಅಧಿಕಾರದಲ್ಲಿದ್ದುಕೊಂಡು ಈ ಕೃತ್ಯವೆಸಗಿರುವ ಕಾರ್ಯದರ್ಶಿ ಮೇಲೆ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯ ಪಡಿಸಿದರು.

25ಕೆಟಿಆರ್.ಕೆ.14ಃ

ಲಿಂಗದಹಳ್ಳಿ ಗ್ರಾಮಸ್ಥರು ಕುಡಿಯುವ ನೀರಿನ ಪೈಪ್ ಲೈನ್‌ಗೆ ಅನಧಿಕೃತವಾಗಿ ವಾಲ್ವ್ ಅಳಡಿಸಿಕೊಂಡು ಅಡಿಕೆ ತೋಟಕ್ಕೆ ಬಳಸಿಕೊಳ್ಳುತ್ತಿರುವ ಲಿಂಗದಹಳ್ಳಿ ಗ್ರಾ.ಪಂ ಕಾರ್ಯದರ್ಶಿ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. -------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಕಿತ್ತಾಟ ರಾಜ್ಯದವರೇ ಬಗೆಹರಿಸಿಕೊಳ್ಳಬೇಕು: ಖರ್ಗೆ
ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ