ತಂತ್ರಜ್ಞಾನವನ್ನು ಕಲಾತ್ಮಕವಾಗಿ ದುಡಿಸಿಕೊಳ್ಳಿ

KannadaprabhaNewsNetwork |  
Published : Apr 10, 2026, 01:45 AM IST
8ಎಚ್ಎಸ್ಎನ್18:  | Kannada Prabha

ಸಾರಾಂಶ

‘ದಿ ಆರ್ಟ್‍ ಅಂಡ್ ಸೈನ್ಸ್ ಆಫ್ ಫೋಟೋಗ್ರಫಿ’ ಒಂದು ದಿನದ ಕೌಶಲ್ಯಾಭಿವೃದ್ಧಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಅವರು ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಕ್ಯಾಮರಾ ಮತ್ತು ಛಾಯಾಗ್ರಹಣದ ಬಗ್ಗೆ ಪ್ರಾಯೋಗಿಕ ಮಾಹಿತಿಯನ್ನು ನೀಡಿದರು, ತಂತ್ರಜ್ಞಾನವನ್ನು ಕಲಾತ್ಮಕ ರೀತಿಯಲ್ಲಿ ದುಡಿಸಿಕೊಳ್ಳುವುದರಿಂದ ಹೆಚ್ಚೆಚ್ಚು ಕ್ರಿಯಾಶೀಲರಾಗುತ್ತೇವೆ. ತೆರೆದ ಅವಕಾಶಗಳು ನಮ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದೂ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ ಜಗತ್ತನ್ನು ಗಮನಿಸುವ ಅರಿವು ನಮ್ಮನ್ನು ಹೊಸ ಆಲೋಚನೆ, ಹೊಸ ಚಿಂತನೆಗಳಿಗೆ ತೆರೆಯುತ್ತದೆ. ಛಾಯಾಚಿತ್ರ ಪತ್ರಕರ್ತರಾಗಿ ಸುತ್ತಲಿನ ವಿದ್ಯಮಾನಗಳನ್ನು ಅನುಭವಿಸಿದಾಗ ಮಾತ್ರ ನೈಜ ಮತ್ತು ವಸ್ತುನಿಷ್ಠ ಸುದ್ದಿಗಳನ್ನು ತಲುಪಿಸಲು ಸಾಧ್ಯ ಎಂದು ಚಿಂತಕ, ಹವ್ಯಾಸಿ ಛಾಯಾಗ್ರಾಹಕ ಎಚ್. ಆರ್‌. ನವೀನ್ ಕುಮಾರ್‌ ಅಭಿಪ್ರಾಯಪಟ್ಟರು.ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ‘ದಿ ಆರ್ಟ್‍ ಅಂಡ್ ಸೈನ್ಸ್ ಆಫ್ ಫೋಟೋಗ್ರಫಿ’ ಒಂದು ದಿನದ ಕೌಶಲ್ಯಾಭಿವೃದ್ಧಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಅವರು ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಕ್ಯಾಮರಾ ಮತ್ತು ಛಾಯಾಗ್ರಹಣದ ಬಗ್ಗೆ ಪ್ರಾಯೋಗಿಕ ಮಾಹಿತಿಯನ್ನು ನೀಡಿದರು, ತಂತ್ರಜ್ಞಾನವನ್ನು ಕಲಾತ್ಮಕ ರೀತಿಯಲ್ಲಿ ದುಡಿಸಿಕೊಳ್ಳುವುದರಿಂದ ಹೆಚ್ಚೆಚ್ಚು ಕ್ರಿಯಾಶೀಲರಾಗುತ್ತೇವೆ. ತೆರೆದ ಅವಕಾಶಗಳು ನಮ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದೂ ಕಿವಿಮಾತು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ರಾಜು ಡಿ.ಎಸ್. ಮಾತನಾಡಿ, ಪತ್ರಕರ್ತರು ಪ್ರಚಲಿತ ವಿದ್ಯಮಾನಗಳ ನಿರ್ವಾಹಕರು. ಜಗತ್ತಿನಾದ್ಯಂತ ಕ್ಷಣ ಕ್ಷಣ ಮಾಹಿತಿಗಳನ್ನು ವಿವರಿಸುವ ಹಂತದಲ್ಲಿ ಛಾಯಾಚಿತ್ರ ಪತ್ರಕರ್ತರ ಪಾತ್ರ ದೊಡ್ಡದಿದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಕೌಶಲ್ಯ ಕಾರ್ಯಾಗಾರಗಳ ಮೂಲಕ ನೈತಿಕತೆ ಮತ್ತು ಸೃಜನಶೀಲತೆ ಕಲಿಸುವ ಕೆಲಸವಾಗಬೇಕು ಎಂದರು. ಕಾಲೇಜಿನ ಶೈಕ್ಷಣಿಕ ಡೀನ್ ಹರೀಶ್ ಎಂ.ಕೆ. ಅವರು ಮಾತನಾಡುತ್ತ, ಸಮಾಜವನ್ನು ಸೂಕ್ಷ್ಮವಾಗಿ ಗ್ರಹಿಸುವ ಶಕ್ತಿ ಉತ್ತಮ ಪತ್ರಿಕೋದ್ಯಮಿಯನ್ನು ರೂಪಿಸುತ್ತದೆ. ಮಾನವೀಯತೆ ಮತ್ತು ಪ್ರೇರಣೆಯಿಂದ ಉಂಟಾದ ಅಕ್ಷರ ಮತ್ತು ಚಿತ್ರಗಳು ಉತ್ತಮ ಸಮಾಜವನ್ನು ಕಟ್ಟಿಕೊಡುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ತಯಾರಾಗಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಇಳಿಯುವಂತಾಗಬೇಕು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ವಿಭಾಗದ ಮುಖ್ಯಸ್ಥರಾದ ಡಾ. ಪ್ರಮೀಳಾ, ಶೈಕ್ಷಣಿಕ ಜ್ಞಾನವನ್ನು ಸಮರ್ಪಕವಾಗಿ ಬದುಕಿಗೆ ಅನ್ವಯಿಸಲು ಕೌಶಲ್ಯ ಅತ್ಯಂತ ಅಗತ್ಯ. ಅದರಲ್ಲೂ ಪತ್ರಿಕೋದ್ಯಮವು ಸೃಜನಶೀಲತೆಯನ್ನು ನಿರೀಕ್ಷಿಸುವ ಕ್ಷೇತ್ರ. ಪ್ರಾಯೋಗಿಕ ಕಲಿಕೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಛಾಯಾಚಿತ್ರ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಮುಂದಿನ ದಿನಗಳಲ್ಲೂ ಪ್ರಾಯೋಗಿಕ ಕಲಿಕೆಗೆ ಹೆಚ್ಚು ಒತ್ತು ಕೊಡಬೇಕಿದೆ ಎಂದು ಹೇಳಿದರು.ಪತ್ರಾಂಕಿತ ವ್ಯವಸ್ಥಾಪಕರಾದ ಸತ್ಯಮೂರ್ತಿ ಅವರು, ಸಮಾಜ ದಿಕ್ಕು ತಪ್ಪದಂತೆ ನಿರ್ವಹಿಸುವಲ್ಲಿ ಪತ್ರಿಕೋದ್ಯಮದ ಜವಾಬ್ದಾರಿ ಹೆಚ್ಚು. ಮುಖ್ಯವಾಗಿ ಛಾಯಾಚಿತ್ರ ಪತ್ರಿಕೋದ್ಯಮದಲ್ಲಿ ಅಂತಹ ಎಚ್ಚರಿಕೆಯ ಅಗತ್ಯವಿದೆ. ಕುಶಲತೆಯ ಜೊತೆಗೆ ನೈತಿಕತೆಯನ್ನು ಕಲಿಸುವ ಈ ಕಾರ್ಯಾಗಾರ ಅತ್ಯಂತ ಪ್ರಸ್ತುತವಾಗಿದೆ ಎಂದು ಅಭಿಪ್ರಾಯಪಟ್ಟರು.ಕಾರ್ಯಾಗಾರದಲ್ಲಿ ಪತ್ರಿಕೋದ್ಯಮ ವಿಭಾಗದ ಡಾ. ಭವ್ಯ, ಸಚಿನ್ ಎನ್. ಜೆ, ಸತೀಶ್‍ ಎ.ಜಿ ಮತ್ತು ಕಾಲೇಜಿನ ವಿವಿಧ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಲ ಬಿಚ್ಚಿದರೆ ಹುಷಾರು!
ವಾಣಿಜ್ಯ ವಿಭಾಗಕ್ಕೆ ಮೂವರು ಫಸ್ಟ್‌ ರ್‍ಯಾಂಕ್‌