ಕನ್ನಡಪ್ರಭ ವಾರ್ತೆ ಪಾವಗಡ
ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ನಶಾಮುಕ್ತ ತುಮಕೂರು ಕಾಲೇಜು ವಿದ್ಯಾರ್ಥಿಗಳ ಜಾಗೃತಿ ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು.
ಮದ್ಯಪಾನ, ಡ್ರಗ್ಸ್‌ನಿಂದ ಎಷ್ಟು ಯುವ ಪೀಳಿಗೆ ಹಾಳಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ವಿದ್ಯಾರ್ಥಿಗಳು ಮುಂದೆ ಬರಬೇಕು. ಅಲ್ಲದೇ ದುಶ್ಚಟ್ಟಗಳಿಂದ ದೂರವಿರಬೇಕು. ಮಾದಕ ವಸ್ತುಗಳ ಸೇವನೆಗಿಂದ ಮೊಬೈಲ್ ಬಳಕೆ ಹೆಚ್ಚು ಅಪಾಯಕಾರಿಯಾಗಿದ್ದು, ಇದರಿಂದ ಸಮಯ ಹಾಳು ಎಂದು ಎಚ್ಚರಿಸಿದರು.ಗ್ರಾಮಾಂತರ ಸಿಪಿಐ ಗಿರೀಶ್ ಮಾತನಾಡಿ, ದುಶ್ಚಟಗಳನ್ನು ಅಭ್ಯಾಸ ಮಾಡಿಕೊಂಡರೆ ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ. ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ ಹೊರತು ಕಡಿಮೆಯಾಗುವುದಿಲ್ಲ. ಪೋಷಕರು ಸಹ ನಿಗಾ ವಹಿಸಿ ತಮ್ಮ ಮಕ್ಕಳ ಚಲನವಲನಗಳ ಕುರಿತು ಹೆಚ್ಚು ಗಮನಿಸಬೇಕು. ಮಾದಕ ವ್ಯಸನದಿಂದ ನಿಮ್ಮ ಬಹುಮುಖ್ಯ ಈ ದೇಶಕ್ಕೆ ಬೇಕಾದರ ಅತ್ಯುತ್ತಮ ಸಾಧನೆಗೆ ಹಿನ್ನಡೆಯಾಗಲಿದೆ ಎಂದ ಅವರು, ವಿವಿಧ ಸಂದರ್ಭದಲ್ಲಿ ಯಾವ ರೀತಿ ವರ್ತಿಸುವ ಮೂಲಕ ಸಮಾಜದಲ್ಲಿ ಅಪರಾಧಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು. ಈ ವೇಳೆ ಬೊಮ್ಮಣ್ಣ , ರಾಮಕೃಷ್ಣಪ್ಪ, ಮನೋಜ್ ಕುಮಾರ್, ದೊಡ್ಡಯ್ಯ,ಪಳವಳ್ಳಿ ಬೊಮ್ಮಯ್ಯ, ಶಾಂತರಾಜು, ಹರೀಶ್, ಎಸ್‌ಐ ಶಿವಪ್ಪ ಇತರರಿದ್ದರು.