ರೈತರಿಗೆ ಉಪಯುಕ್ತ ಮೇಘದೂತ್,ಮೌಸಮ್ ಆ್ಯಪ್: ಡಾ.ಮಹೇಶ್

KannadaprabhaNewsNetwork | Published : Mar 5, 2024 1:35 AM

ಸಾರಾಂಶ

ಮೊಬೈಲ್ ಆ್ಯಪ್ ಗಳಾದ ಮೇಘದೂತ್ ಆ್ಯಪ್ ನಲ್ಲಿ ಹವಾಮಾನದ ಮಾಹಿತಿ ಹಾಗೂ ಬೆಳೆಗಳು ಸಂಯೋಜಿತ ಸಲಹೆ ಸಿಗಲಿದೆ. ಈ ಆ್ಯಪ್ ಹಿಂದಿನ ಮತ್ತು ಮುಂದಿನ ಐದು ದಿನದ ಹವಾಮಾನದ ಮೂನ್ಸೂಚನೆಯ ಜೊತೆಗೆ ಬೆಳೆಗಳ ಮಾಹಿತಿ ಯನ್ನು ರೈತರಿಗೆ ತಲುಪಿಸುತ್ತಿದೆ ಎಂದು ಶಿವಮೊಗ್ಗ ಹವಾಮಾನ ಸಂಶೋಧನಾ ಕೇಂದ್ರದ ಡಾ.ಮಹೇಶ್ ತಿಳಿಸಿದರು.

ಕರಕುಚ್ಚಿ ಗ್ರಾಮದಲ್ಲಿ ಹವಾಮಾನ ಆಧಾರಿತ ನಿಖರ ಕೃಷಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಮೊಬೈಲ್ ಆ್ಯಪ್ ಗಳಾದ ಮೇಘದೂತ್ ಆ್ಯಪ್ ನಲ್ಲಿ ಹವಾಮಾನದ ಮಾಹಿತಿ ಹಾಗೂ ಬೆಳೆಗಳು ಸಂಯೋಜಿತ ಸಲಹೆ ಸಿಗಲಿದೆ. ಈ ಆ್ಯಪ್ ಹಿಂದಿನ ಮತ್ತು ಮುಂದಿನ ಐದು ದಿನದ ಹವಾಮಾನದ ಮೂನ್ಸೂಚನೆಯ ಜೊತೆಗೆ ಬೆಳೆಗಳ ಮಾಹಿತಿ ಯನ್ನು ರೈತರಿಗೆ ತಲುಪಿಸುತ್ತಿದೆ ಎಂದು ಶಿವಮೊಗ್ಗ ಹವಾಮಾನ ಸಂಶೋಧನಾ ಕೇಂದ್ರದ ಡಾ.ಮಹೇಶ್ ತಿಳಿಸಿದರು.

ಶಿವಮೊಗ್ಗ ಕೃಷಿ ವಿವಿ ರೈತಮಿತ್ರ ವಿದ್ಯಾರ್ಥಿಗಳ ತಂಡ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಪ್ರಯುಕ್ತ ಕರಕುಚ್ಚಿ ಗ್ರಾಮದಲ್ಲಿ ಆಯೋಜಿಸಿದ್ದ ಹವಾಮಾನ ಆಧಾರಿತ ನಿಖರ ಕೃಷಿ ಎಂಬ ಕ್ರಾಯಕ್ರಮದಲ್ಲಿ ಮಳೆ ಮಾಪನದ ಬಗ್ಗೆ ವಿವರಿಸಿದ ಅವರು, ಈ ಆ್ಯಪ್ ಉಪಯೋಗಿಸುವುದು ತುಂಬಾ ಸುಲಭ. ಬಳಕೆದಾರರ ಸ್ನೇಹಿ ಈ ಆ್ಯಪ್‌ ನ್ನು ಭಾರತ ಸರ್ಕಾರದ ಭೂವಿಜ್ಞಾನ , ಕೃಷಿ ಸಚಿವರು ಜೊತೆಯಲ್ಲಿ 2019 ಆಗಸ್ಟ್ ನಲ್ಲಿ ಬಿಡುಗಡೆಗೊಳಿಸಿದ್ದಾರೆ. ಮೊದಲ ಹಂತದಲ್ಲಿ ದೇಶದ ವಿವಿಧ ಭಾಗದ 150 ಜಿಲ್ಲೆಗಳನ್ನು ಆಯ್ಕೆಮಾಡಿ ಕೃಷಿ -ಕೃಷಿ ಸಂಬಂಧಿತ ವಲಯಗಳಲ್ಲಿ ತಲುಪಿಸುತ್ತಿದ್ದಾರೆ ಎಂದರು.

ಮೌಸಮ್ ಆ್ಯಪ್ ಹವಾಮಾನದ ತತ್‌ಕ್ಷಣದ ಮಾಹಿತಿಗೆ ಭಾರತೀಯ ಹವಾಮಾನ ಇಲಾಖೆ ಈ ಆ್ಯಪ್ ಅಭಿವೃದ್ಧಿ ಪಡಿಸಿದ್ದು ಇದರ ಮುಖಾಂತರ ಆಯಾ ಕಾಲದ ಹವಾಮಾನದ ಮಾಹಿತಿ, ಮುನ್ಸೂಚನೆ ಮತ್ತು ಎಚ್ಚರಿಕೆ ಮಾಹಿತಿ ಪಡೆಯ ಬಹುದಾಗಿದೆ. ದಾಮಿನಿ (ಗುಡುಗು ಮತ್ತು ಮಿಂಚಿನ ಮಾರ್ಗದರ್ಶಿ)

ಇದು ಐಐಟಿಎಮ್ ಪುಣೆ ಮತ್ತು ಇಎಸ್ಎಸ್ಒ ನವದೆಹಲಿ ಸೇರಿ ತಯಾರಿಸಿರುವ ಆ್ಯಪ್ . ಈ ಆ್ಯಪ್ ಅನ್ನು ನೋಡಿದರೆ ಗುಡುಗು ಮತ್ತು ಮಿಂಚು ಬರುವುದು ತಿಳಿಯಲಿದೆ. ನೀವಿರುವ ಸ್ಥಳದ 20-40 ಕಿ.ಮೀ ಸುತ್ತ 0 - 15 ನಿಮಿಷಗಳ ಮುಂಚೆ ಬರುವ ಗುಡುಗು. ಮಿಂಚಿನ ಮಾಹಿತಿ ಲಭಿಸುತ್ತದೆ. ಮಿಂಚು ಹೊಡೆ ಯುವ ಮುನ್ನ ಸೇರಬೇಕಾದ ಸುರಕ್ಷಿತ ಸ್ಥಳಗಳು ಯಾವುವು, ಮಿಂಚು ಹೊಡೆದರೆ ಯಾವ ರೀತಿ ವೈದ್ಯಕೀಯ ಸಲಹೆ ಪಾಲಿಸಬೇಕು ಎಂದು ತಿಳಿಸುತ್ತದೆ ಎಂದರು.

ಕರಕುಚ್ಚಿ ಗ್ರಾಮಸ್ಥರು ಹಾಗೂ ರೈತಮಿತ್ರ ತಂಡದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

4ಕೆಟಿಆರ್.ಕೆ.08ಃ

ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ಏರ್ಪಡಿಸಿದ್ದ ಹವಾಮಾನ ಆಧಾರಿತ ನಿಖರ ಕೃಷಿ ಕಾರ್ಯಕ್ರಮದಲ್ಲಿ ಶಿವಮೊಗ್ಗ ಹವಾಮಾನ ಸಂಶೋಧನಾ ಕೇಂದ್ರದ ಡಾ.ಮಹೇಶ್ ಮಾತನಾಡಿದರು.

Share this article