ಗುಂಡ್ಲುಪೇಟೆ: ನೇಹಾ ಹಿರೇಮಠ್ ಹತ್ಯೆಗೈದಿರುವುದು ಅಕ್ಷಮ್ಯ ಅಪರಾಧ ಈ ಘಟನೆಯನ್ನು ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಘಟಕ ತೀವ್ರವಾಗಿ ಖಂಡಿಸುತ್ತದೆ. ರಾಜ್ಯ ಸರ್ಕಾರ ಕೂಡ ಸಿಐಡಿ ತನಿಖೆಗೆ ಆದೇಶ ನೀಡಿದ್ದರೂ ನೇಹಾ ಘಟನೆಯನ್ನು ಚುನಾವಣಾ ವಸ್ತುವಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂದು ತಾಲೂಕು ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ ಹೇಳಿದರು.
ಕಾಂಗ್ರೆಸ್ ಬೆಂಬಲಿಸಲಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸಮ ಸಮಾಜದ ಕನಸು ಕಂಡು ಬಸವಣ್ಣನಿಗೆ ಸಾಂಸ್ಕೃತಿಕ ನಾಯಕ ಎಂದು ಸರ್ಕಾರದ ಮೂಲಕವೇ ಘೋಷಿಸಿದ್ದಾರೆ, ಅಲ್ಲದೆ ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಕಡ್ಡಾಯವಾಗಿ ಹಾಕಬೇಕು ಎಂದು ಆದೇಶ ಹೊರಡಿಸಿದ್ದಾರೆ ಇದು ವೀರಶೈವ-ಲಿಂಗಾಯಿತರಿಗೆ ಹೆಮ್ಮೆಯ ವಿಷಯ ಹಾಗಾಗಿ ವೀರಶೈವರು ಸೇರಿದಂತೆ ಎಲ್ಲಾ ಜಾತೀಯವರು ಕಾಂಗ್ರೆಸ್ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದಲ್ಲೂ ವೀರಶೈವ ಸಮಾಜದಲ್ಲಿ ಶ್ಯಾಮನೂರು, ಈಶ್ವರ್ ಖಂಡ್ರೆ, ಎಂ.ಬಿ.ಪಾಟೀಲ್ ರಂತ ಘಟಾನುಘಟಿ ನಾಯಕರು ಇದ್ದಾರೆ. ವೀರಶೈವರು ಬಿಜೆಪಿ ಜೊತೆ ಇದ್ದಾರೆ ಎನ್ನುವುದು ಸುಳ್ಳು. ಕಾಂಗ್ರೆಸ್‌ಗೆ ಹೆಚ್ಚು ಮತ ನೀಡಬೇಕು ಎಂದರು.20 ಎಂಪಿ ಗೆಲ್ತೇವೆ: