ಹಳ್ಳಿಗುಗ್ಗು ಪದಪ್ರಯೋಗ ಗ್ರಾಮೀಣರಿಗೆ ಮಾಡಿದ ಅವಮಾನ: ಶಾಸಕಿ ಕರೆಮ್ಮ ಜಿ.

KannadaprabhaNewsNetwork |  
Published : Nov 10, 2026, 12:15 AM IST
09ಕೆಪಿಡಿವಿಡಿ01: | Kannada Prabha

ಸಾರಾಂಶ

ರಾಜ್ಯದ ಗೃಹ ಸಚಿವ ಪ್ರಿಯಾಂಕ ಖರ್ಗೆ, ಕೇಂದ್ರದ ಸಚಿವರು,ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಹಳ್ಳಿ ಗುಗ್ಗು ಎಂದು ಕರೆದಿರುವುದು ಖಂಡನೀಯ ಸಂಗತಿಯಾಗಿದ್ದು, ಈ ಪದ ಬಳಕೆಯು ಗ್ರಾಮೀಣ ಜನತೆಗೆ ಮಾಡಿದ ಅವಮಾನ ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಎಂದು ಒತ್ತಾಯಿಸಿ ಜೆಡಿಎಸ್ ತಾಲೂಕಿ ಸಮಿತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆಯನ್ನು ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ದೇವದುರ್ಗ

ರಾಜ್ಯದ ಗೃಹ ಸಚಿವ ಪ್ರಿಯಾಂಕ ಖರ್ಗೆ, ಕೇಂದ್ರದ ಸಚಿವರು,ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಹಳ್ಳಿ ಗುಗ್ಗು ಎಂದು ಕರೆದಿರುವುದು ಖಂಡನೀಯ ಸಂಗತಿಯಾಗಿದ್ದು, ಈ ಪದ ಬಳಕೆಯು ಗ್ರಾಮೀಣ ಜನತೆಗೆ ಮಾಡಿದ ಅವಮಾನ ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಎಂದು ಒತ್ತಾಯಿಸಿ ಜೆಡಿಎಸ್ ತಾಲೂಕಿ ಸಮಿತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆಯನ್ನು ನಡೆಸಲಾಯಿತು.

ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮ ಜಿ. ನಾಯಕ ನೇತೃತ್ವದಲ್ಲಿ ಪಕ್ಷದ ಮುಖಂಡರು,ಕಾರ್ಯಕರ್ತರು ಪಟ್ಟಣದ ಸಾರ್ವಜನಿಕ ಕ್ಲಬ್‌ನಿಂದ ಮಿನಿವಿಧಾನ ಸೌಧದವರೆಗೆ ರ್‍ಯಾಲಿ ನಡೆಸಿ, ತಹಸೀಲ್ದಾರರಿಗೆ ರಾಜ್ಯ ಪಾಲರಿಗೆ ಬರೆದ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಶಾಸಕಿ, ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ರಾಜ್ಯದ ಜನರ ಅಪಾರ ಗೌರವವಿದೆ. ಅಂಥವರ ಪುತ್ರರಾಗಿರುವ ಪ್ರಿಯಾಂಕ್‌ ಖರ್ಗೆಯವರು ಉನ್ನತ ಹುದ್ದೆಯಲ್ಲಿದ್ದು, ಹಳ್ಳಿ ಜನರ ಕುರಿತು ಮಾಡಿರುವ ಹೇಳಿಕೆ ತೀವ್ರ ನೋವು ತಂದಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರ ಆಡಳಿತಾವಧಿಯಲ್ಲಿ ಕೊಟ್ಟ ಕೊಡುಗೆ ಇಡೀ ರಾಜ್ಯ ಮತ್ತು ದೇಶಕ್ಕೆ ಕೊಟ್ಟಿದೆ. 27 ಸಾವಿರ ಕೋಟಿ ಸಾಲಮನ್ನಾ ಮಾಡಿ ನಾವು ರೈತರ ಪರ ಎಂದು ಸಾಬೀತು ಪಡಿಸಿದ್ದಾರೆ.

ತಮ್ಮ ಹಳ್ಳಿ ಗುಗ್ಗು ಎಂದಿದ್ದಕ್ಕೆ ಕುಮಾರಣ್ಣನಿಗೇನೂ ಬೇಸರವಿಲ್ಲ. ಅವರು ಹಳ್ಳಿ ಮಗ ಎಂದು ಒಪ್ಪಿಕೊಂಡೇ ರಾಜಕೀಯ ಸೇವೆ ಮಾಡುವ ಕುಟುಂಬದಿಂದ ಬಂದವರು. ತಂದೆಯವರ ಪ್ರಭಾವದಿಂದ ಮಂತ್ರಿ ಸ್ಥಾನ ಪಡೆದಿರುವ ಪ್ರಿಯಾಂಕ ಖರ್ಗೆ, ಪಂಚಾಯತ್‌ ರಾಜ್ಯ ಇಲಾಖೆಯಲ್ಲಿ ಗ್ರಾಮೀಣ ಜನತೆಗೆ ಸ್ಪಂದಿಸಲಿಲ್ಲ. ಇದೀಗ ಗೃಹ ಸಚಿವರಾಗಿದ್ದು ರಾಜ್ಯದಲ್ಲಿ ಶಾಂತಿ-ಸೌಹಾರ್ದತೆ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ.

ಜಿಲ್ಲೆಯಲ್ಲಿ ಕೊಲೆ, ಅತ್ಯಾಚಾರದಂತಹ ಘಟನೆಗಳು ಜರುಗಿದ್ದು, ಕನಿಷ್ಠ ದಲಿತರಿಗೆ ಸಾಂತ್ವನ ಹೇಳುವ ಸೌಜನ್ಯವನ್ನು ಮರೆತಿದ್ದಾರೆ. ರಾಜ್ಯ ಸರಕಾರ ಸಂಪೂರ್ಣ ದಿವಾಳಿಯಾಗಿದೆ. ಬರಗಾಲಕ್ಕೆ ಸ್ಪಂದಿಸಲಿಲ್ಲ. ಸರಕಾರದ ಬಳಿ ಹಣವೇ ಇಲ್ಲಾ ಎಂದು ಸ್ವತಃ ಮುಖ್ಯಮಂತ್ರಿಯವರೇ ಒಪ್ಪಿಕೊಂಡಿದ್ದಾರೆ. ಪೆಟ್ರೋಲ್, ಡೀಸೆಲ್, ಹಾಲು,ಮೊಸರು ಇದೀಗ ಬಸ್ ದರ ಏರಿಕೆ ಮಾಡಿದ್ದಾರೆ. ಸರ್ಕಾರದ ಪ್ರಮುಖರ ಹೇಳಿಕೆಗಳನ್ನು ಮತ್ತು ಆಡಳಿತ ವೈಖರಿಯನ್ನು ರಾಜ್ಯದ ಮತದಾರರ 2028ರಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಶಾಸಕಿ ಕರೆಮ್ಮ ಜಿ.ನಾಯಕ ತಿಳಿಸಿದರು.

ರ್ಯಾಲಿಯನ್ನು ಉದ್ದೇಶಿಸಿ ಜೆಡಿಎಸ್ ಕೋರ್ ಕಮೀಟಿ ಅಧ್ಯಕ್ಷ ಶರಣಪ್ಪ ಬಳೆ, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಅಮರೇಶ ಪಾಟೀಲ್ ಪರ್ತಪೂರ, ದೇವದುರ್ಗ ತಾಲೂಕು ಜೆಡಿಎಸ್ ಅಧ್ಯಕ್ಷ ಬಸನಗೌಡ ದೇಸಾಯಿ,ಅರಕೇರಾ ತಾಲೂಕು ಅಧ್ಯಕ್ಷ ಸಿದ್ದಣ್ಣ ಬಿ.ಗಣೇಲ್,ಮುಖಂಡರಾದ ಹನುಮಂತ್ರಾಯ ಚಿಂತಲಕುಂಟಿ, ಮಯೂರ ಸ್ವಾಮಿ, ಗೌರಿ ಜಿ.ನಾಯಕ, ಶಿವನಗೌಡ ಕಕ್ಕಲದೊಡ್ಡಿ, ರಂಗಮ್ಮ ಇರಬಗೇರಾ, ರೇಣುಕಾ ಎಂ.ಸ್ವಾಮಿ, ತಮ್ಮಣ್ಣ ಬೊಮ್ಮನಾಳ, ಶರಣಗೌಡ ಸುಂಕೇಶ್ವರಹಾಳ, ರಮೇಶ ರಾಮನಾಳ, ಶಿವು ಕಾಳೆ, ಮಹೇಶ ಕಾಕರಗಲ್, ಶಾಲಂ ಉದ್ದಾರ ಮಾತನಾಡಿದರು. ದೇವದುರ್ಗ ಮತ್ತು ಅರಕೇರಾ ತಾಲೂಕು ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭದ್ರಾವತಿಗೆ ಎನ್‌ಡಿಎ ಪ್ರಥಮ ರ್‍ಯಾಂಕ್ ವಿಜೇತೆ ಶ್ರೇಯ
ಕನ್ನಡಪ್ರಭ ದೀಪಾವಳಿ ವಿಶೇಷಾಂಕ ಸಂಗ್ರಹ ಯೋಗ್ಯ