ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಮಧ್ಯರಾತ್ರಿ ನಡೆದ ಕಾರ್ಯಾಚರಣೆ:
ಕೂತಘಟ್ಟ ಗ್ರಾಮದಿಂದ ತಮಿಳುನಾಡು, ಕೇರಳ ಹಾಗೂ ಬೆಂಗಳೂರಿನ ಶಿವಾಜಿನಗರ ಭಾಗದ ಕಸಾಯಿಖಾನೆಗಳಿಗೆ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಡಿವೈಎಸ್ಪಿ ಉಮಾರಾಣಿ ಅವರು ತಮ್ಮ ಸಿಬ್ಬಂದಿಯೊಂದಿಗೆ ತಡರಾತ್ರಿ 1.30ರ ಸುಮಾರಿಗೆ ದಾಳಿ ನಡೆಸಿ ಎಮ್ಮೆ ಹಾಗೂ ಗೋವುಗಳನ್ನು ರಕ್ಷಿಸಿದ್ದಾರೆ.ಕಸಾಯಿಖಾನೆಗೆ ಸಾಗಾಟವಾಗುತ್ತಿದ್ದ 69 ಎಮ್ಮೆ, 2 ಹಸುಗಳ ರಕ್ಷಣೆ
ದಾಳಿ ನಡೆಸಿದ ಸಂದರ್ಭದಲ್ಲಿ 3 ಅಶೋಕ್ ಲೈಲಾಂಡ್ ಹಾಗೂ 1 ಕ್ಯಾಂಟರ್ ನಲ್ಲಿ 70ಕ್ಕೂ ಹೆಚ್ಚು ಗೋವುಗಳನ್ನು ಸಾಗಿಸಲು ಪ್ಲಾನ್ ನಡೆಸಿ ತುಂಬುವ ಸಂದರ್ಭದಲ್ಲಿಯೇ ದಾಳಿ ನಡೆಸಿದಾಗ ವಾಹನಗಳ ಚಾಲಕರು ವಾಹನಗಳನ್ನು ನಿಲ್ಲಿಸಿ ಪರಾರಿಯಾಗಿದ್ದಾರೆ.
ಇನ್ನೂ ಕೂತಘಟ್ಟ ಗ್ರಾಮದಲ್ಲಿ ಸುಮಾರು 150ಕ್ಕೂ ಹೆಚ್ಚು ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದಾರೆಂಬ ಮಾಹಿತಿ ದೊರೆತ್ತಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಬರುವಷ್ಟರಲ್ಲಿ ಸುಮಾರು 3 ವಾಹನಗಳಲ್ಲಿ 50ಕ್ಕೂ ಹೆಚ್ಚು ಗೋವುಗಳನ್ನು ಬೇರೆಡೆಗೆ ಸಾಗಾಟ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ತನಿಖೆಗೆ ಮುಂದಾಗಿದ್ದಾರೆ.
ಮಧ್ಯರಾತ್ರಿ ಸುಮಾರು 1.30ರ ಸಮಯದಲ್ಲಿ ದಾಳಿ ನಡೆಸಿ 70ಕ್ಕೂ ಹೆಚ್ಚು ಗೋವುಗಳನ್ನು ರಕ್ಷಿಸಿದ ಡಿವೈಎಸ್ ಪಿ ಉಮಾರಾಣಿ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ಧರ್ಮೆಂದ್ರ ಅವರ ಕಾರ್ಯವನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಶ್ಲಾಘಿಸಿದರು.
------
ಉಮಾರಾಣಿ, ಡಿವೈಎಸ್ ಪಿ , ನೆಲಮಂಗಲ