ಪ್ರಸಕ್ತ ಬಾರಿ ಕಲಬುರಗಿ ತಾಲೂಕು ಕಸಾಪದವರು ಪ್ರಕಾಶಕ, ಕನ್ನಡ ಪ್ರೇಮಿ ಡಾ.ಬಸವರಾಜ ಕೊನಕ್ ಅವರಿಗೆ 10ನೇ ತಾಲೂಕು ಸಾಹಿತ್ಯ ಸಮ್ಮಳನಾಧ್ಯಕ್ಷರನ್ನಾಗಿ ಆಹ್ವಾನಿಸಿ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಪ್ರಸಕ್ತ ಬಾರಿ ಕಲಬುರಗಿ ತಾಲೂಕು ಕಸಾಪದವರು ಪ್ರಕಾಶಕ, ಕನ್ನಡ ಪ್ರೇಮಿ ಡಾ.ಬಸವರಾಜ ಕೊನಕ್ ಅವರಿಗೆ 10ನೇ ತಾಲೂಕು ಸಾಹಿತ್ಯ ಸಮ್ಮಳನಾಧ್ಯಕ್ಷರನ್ನಾಗಿ ಆಹ್ವಾನಿಸಿ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದಾರೆ.ತಾಲೂಕು ಕನ್ನಡ ಸಾಹಿತ್ಯ ಪರಿಷತ್ನಿಂದ ನಗರದ ಕನ್ನಡ ಭವನದ ಅಂಗಳದಲ್ಲಿ ನ.15 ರಂದು ನಡೆಯಲಿರುವ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಿದ್ಧಲಿಂಗೇಶ್ವರ ಪ್ರಕಾಶನದ ಪ್ರಕಾಶಕ, ಪುಸ್ತಕೋದ್ಯಮಿ ಡಾ. ಬಸವರಾಜ ಕೊನೇಕ ಅವರನ್ನು ಮೈಸೂರು ಪೇಟ ತೊಡಿಸಿ ಹಾರ, ಶಾಲು ಹಾಕಿ ಅವರ ನಿವಾಸದಲ್ಲಿ ಕಸಾಪದಿಂದ ಅಧಿಕೃತ ಆಹ್ವಾನ ನೀಡಿ ಸತ್ಕರಿಸಲಾಯಿತು.ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ಭಾಷೆ ಮತ್ತು ಪ್ರಕಾಶನ ಲೋಕಕ್ಕೆ ಡಾ.ಬಸವರಾಜ ಕೊನೇಕ ನೀಡಿರುವ ಕೊಡುಗೆ ಅಪಾರ. ಸಾಹಿತ್ಯದಲ್ಲಿನ ಜ್ಞಾನ ಸಂಪತ್ತು ಎಲ್ಲರಿಗೂ ತಲುಪಬೇಕಾದರೆ ಪುಸ್ತಕಗಳ ಪ್ರಕಟಣೆ ಬಹಳ ಮುಖ್ಯ. ಆ ಮೂಲಕ ಜನರಲ್ಲಿ ಓದುವ ಹವ್ಯಾಸ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಕೊನೇಕ ಸಾವಿರಾರು ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಹೊಸ ಬರಹಗಾರರ ಸಾಹಿತ್ಯಕ್ಕೆ ಉತ್ತಮ ಬೆಳಕು ಕೊಟ್ಟಿದ್ದಾರೆ. ಸಮ್ಮೇಳನಗಳು ಸಾಮಾಜಿಕ ಜಾಗೃತಿಯನ್ನುಂಟು ಮಾಡುತ್ತವೆ ಎಂದರು.ಆಹ್ವಾನ ಸ್ವೀಕರಿಸಿ ಮಾತನಾಡಿದ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷ ಡಾ.ಬಸವರಾಜ ಕೊನೇಕ, ನಾಡಿನ ನೆಲ ಜಲ ಕಟ್ಟಿ ಬೆಳೆಸುವ ದಿಸೆಯಲ್ಲಿ ನಮ್ಮ ಭಾಷೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸೋಣ. ಮಕ್ಕಳಿಗೆ ಮಾತೃ ಭಾಷೆಯ ಕಲಿಕೆ ಮುಖ್ಯ. ಆ ಮೂಲಕ ಕನ್ನಡದ ಅಭಿವೃದ್ಧಿ ಹೊಂದಲು ಸಾಧ್ಯ. ಓದುವ ಸಂಸ್ಕೃತಿ ಬೆಳೆಸಲು ನವು 1974 ರಲ್ಲಿ ಸಿದ್ಧಲಿಂಗೇಶ್ವರ ಪುಸ್ತಕ ಮಳಿಗೆ ಹಾಕಿ ನಂತರ 2002 ರಲ್ಲಿ ಪ್ರಕಾಶನ ಹುಟ್ಟು ಹಾಕಿರುವೆ. ಈ ಭಾಗದ ಯುವ ಬರಹಗಾರರಿಗೆ ಪ್ರೋತ್ಸಾಹಿಸಿ ಅವರ ಸಾಹಿತ್ಯ ಕೃತಿಗಳನ್ನು ಪ್ರಕಟಿಸಲಾಗಿದೆ. ಸಾಹಿತ್ಯದ ಬೆಳವಣಿಗೆಗೆ ಇಂದು ಪ್ರಕಾಶಕರ ಕೊಡುಗೆ ಅಮೋಘ. ನಾಡು ನುಡಿಗಾಗಹಿ ಸಲ್ಲಿಸುತ್ತಿರುವ ಸೇವೆ ನಮಗೆ ತೃಪ್ತಿ ತಂದಿದೆ. ಹೊಸ ಆಲೋಚನೆಗಳೊಂದಿಗೆ, ವಿಭಿನ್ನ ಪ್ರಯೋಗದೊಂದಿಗೆ ಪರಿಷತ್ ಜಿಲ್ಲೆಯಲ್ಲಿ ಹೊಸ ದಿಕ್ಕಿನೆಡೆಗೆ ಕೊಂಡೊಯ್ಯುತ್ತಿದ್ದಾರೆ. ಪ್ರತಿಭೆಗಳಿಗೆ ಪ್ರೋತ್ಸಾಹಿಸಿ ಬೆಳೆಸುತ್ತಿದ್ದಾರೆ. ಪುಸ್ತಕ ಪ್ರಕಟಣೆಯಲ್ಲಿ ತೊಡಗಿಸಿಕೊಂಡಿರುವ ನನ್ನನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಪರಿಷತ್ನ ಸಂತಸ ತಂದಿದೆ ಎಂದರು.ತಾಲೂಕಾಧ್ಯಕ್ಷೆ ಶಿವಲೀಲಾ ಕಲಗುರ್ಕಿ, ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಪ್ರಮುಖರಾದ ಮುಡುಬಿ ಗುಂಡೇರಾವ, ಡಾ. ಶ್ರೀಶೈಲ್ ನಾಗರಾಳ, ಡಾ. ಚಿ.ಸಿ. ನಿಂಗಣ್ಣ, ಡಾ. ಗವಿಸಿದ್ದ ಪಾಟೀಲ, ಡಾ. ಜಯದೇವಿ ಗಾಯಕವಾಡ, ಅಮೃತಪ್ಪ ಅಣೂರ, ರವೀಂದ್ರಕುಮಾರ ಭಂಟನಳ್ಳಿ, ಜಗದೀಶ ಮರಪಳ್ಳಿ, ರಾಜೇಂದ್ರ ಮಾಡಬೂಳ, ಪರಮಾನಂದ ಸರಸಂಬಿ, ಮಹಾಲಿಂಗಯ್ಯ ಸ್ವಾಮಿ, ಪ್ರಭವ ಪಟ್ಟಣಕರ್, ಸಂಗಣ್ಣ ಚೋರಗಸ್ತಿ, ಪತ್ರಕರ್ತರಾದ ಪ್ರಭಾಕರ ಜೋಶಿ, ಶೇಷಮೂರ್ತಿ ಅವಧಾನಿ, ಮನೋಜಕುಮಾರ ಗುದ್ದಿ, ಡಾ. ಶಿವರಂಜನ ಸತ್ಯಂಪೇಟೆ, ಲಲಿತಾ ಪಾಟೀಲ, ಮಹಾನಂದಾ ಹುಲಿ, ಭುವನೇಶ್ವರಿ ಹಳ್ಳಿಖೇಡ, ಶಾರದಾ, ಸುನೀತಾ, ರವಿ ಶಹಾಪೂಕರ್, ಹಣಮಂತ ಪೆಂಚನಪಳ್ಳಿ, ಅನೀಲಕುಮಾರ ಪಾಟೀಲ, ಸಿದ್ಧಲಿಂಗ ಬಾಳಿ, ಈರಣ್ಣ ಸೋನಾರ, ರಾಜಶೇಖರ ಚಿಂಚೋಳಿ, ವಿನೋದಕುಮಾರ ಜೇನವೇರಿ, ಗಣೇಶ ಚಿನ್ನಾಕಾರ, ರೇಣುಕಾ ಎನ್ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.