ಶ್ರೀಮದ್ ಶ್ರೀಶೈಲ ಜಗದ್ಗುರು ಲಿಂ.ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ 40ನೇ ವಾರ್ಷಿಕ ಸ್ಮರಣೋತ್ಸವ ಹಾಗೂ ಶ್ರೀಮದ್ ಲಿಂ.ಉಮಾಪತಿ ಪಂಡಿತಾರಾದ್ಯ ಶ್ರೀಗಳ 15ನೇ ವರ್ಷದ ಪುಣ್ಯಾರಾಧನೆ ಮತ್ತು ಜನಜಾಗೃತಿ ಧರ್ಮ ಸಮ್ಮೇಳನ ನ.12 ಮತ್ತು 13ರಂದು ನಗರದ ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಜರುಗಲಿದೆ.
- ನಗರದ ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜನೆ । ಶ್ರೀಶೈಲ ಪೀಠದ ಶ್ರೀ ಡಾ. ಚನ್ನಸಿದ್ದರಾಮ ಶ್ರೀಗಳ ದಿವ್ಯ ಸಾನ್ನಿಧ್ಯ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಶ್ರೀಮದ್ ಶ್ರೀಶೈಲ ಜಗದ್ಗುರು ಲಿಂ.ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ 40ನೇ ವಾರ್ಷಿಕ ಸ್ಮರಣೋತ್ಸವ ಹಾಗೂ ಶ್ರೀಮದ್ ಲಿಂ.ಉಮಾಪತಿ ಪಂಡಿತಾರಾದ್ಯ ಶ್ರೀಗಳ 15ನೇ ವರ್ಷದ ಪುಣ್ಯಾರಾಧನೆ ಮತ್ತು ಜನಜಾಗೃತಿ ಧರ್ಮ ಸಮ್ಮೇಳನ ನ.12 ಮತ್ತು 13ರಂದು ನಗರದ ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಜರುಗಲಿದೆ.ನ.12ರಂದು ಬೆಳಗ್ಗೆ 8 ಗಂಟೆಗೆ ಶ್ರೀಶೈಲ ಮಠದಲ್ಲಿ ನ್ಯಾಯವಾದಿ ಜಗದೀಶ್ ಹಿರೇಮಠ ಜಗದ್ಗುರು ಪಂಚಾಚಾರ್ಯರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಂಜೆ 6 ಗಂಟೆಗೆ ನಡೆಯುವ ಧರ್ಮ ಜಾಗೃತಿ ಸಮಾರಂಭವು ಶ್ರೀಶೈಲಂನ ಶ್ರೀಶೈಲ ಪೀಠದ ಶ್ರೀ ಡಾ. ಚನ್ನಸಿದ್ದರಾಮ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಮತ್ತು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ್ ಮಲ್ಲಿಕಾರ್ಜುನ ಶ್ರೀ, ಶ್ರೀಗಂಗೆಯ ಮಲಯ ಶಾಂತಮುನಿ ಶ್ರೀ, ರಂಭಾಪುರಿ ಶಾಖಾಮಠದ ರಾಚೋಟೇಶ್ವರ ಶಿವಾಚಾರ್ಯ ಶ್ರೀ, ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ಜರುಗಲಿದೆ.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಲಿದ್ದು, ಸಚಿವ ಕೆ.ಎಸ್. ಬಸವಂತಪ್ಪ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಬ್ಯಾಡಗಿ ಶಾಸಕ ಬಸವರಾಜ್ ಎನ್. ಶಿವಣ್ಣನವರ್, ದಕ್ಷಿಣ ಶಾಸಕ ಸಮರ್ಥ್ ಎಂ. ಶಾಮನೂರು, ಲೆಕ್ಕ ಪರಿಶೋಧಕ ಡಾ. ಅಥಣಿ ವೀರಣ್ಣ, ಪತ್ರಕರ್ತ ಬಾ.ಮ. ಬಸವರಾಜಯ್ಯ, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ರೈತ ಮುಖಂಡ ತೇಜಸ್ವಿ ವಿ. ಪಾಟೀಲ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.ಕಾರ್ಯಕ್ರಮದಲ್ಲಿ ಡಾ. ಮೀನಾಕ್ಷಿ ಕಂದಿಮಲ್ ಅವರು ''''ವೀರಶೈವ ಧರ್ಮಕ್ಕೆ ಶ್ರೀಶೈಲ ಪೀಠದ ಕೊಡುಗೆ'''' ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ದಾವಣಗೆರೆಯ ಸಾಧನಾ ವೃದ್ಧಾಶ್ರಮ ಮತ್ತು ಅನಾಥಾಶ್ರಮದ ಪುಷ್ಪಲತಾ ಪವಿತ್ರರಾಜ್ ಅವರಿಗೆ ''''ವೃದ್ಧಜನಪೋಷಕ ಸೇವಾ ಪ್ರಶಸ್ತಿ'''' ನೀಡಿ ಗೌರವಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ರಾಯಚೂರು ವಿವಿ ಸಿಂಡಿಕೇಟ್ ಸದಸ್ಯೆ ಡಾ. ಮೀನಾಕ್ಷಿ ಕಂಡಿಮಠ್ ''''''''ವೀರಶೈವ ಧರ್ಮಕ್ಕೆ ಶ್ರೀಶೈಲ ಪೀಠದ ಕೊಡುಗೆ'''''''' ಕುರಿತು ಮಾತನಾಡಲಿದ್ದಾರೆ. ಸಾಧನಾ ವೃದ್ಧಾಶ್ರಮ ಹಾಗೂ ಅನಾಥಾಶ್ರಮ, ದಾವಣಗೆರೆಯ ಪುಷ್ಪಲತಾ ಪವಿತ್ರರಾಜ್ ಅವರಿಗೆ ''''''''ವೃದ್ಧಜನಪೋಷಕ ಸೇವಾ ಪ್ರಶಸ್ತಿ'''''''' ನೀಡಲಾಗುತ್ತದೆ. ಅಲ್ಲದೆ, ವೇದಮೂರ್ತಿ ವೀರಭದ್ರಯ್ಯ ಮಠದ, ಖ್ಯಾತ ವೈದ್ಯರಾದ ಡಾ.ಎಸ್.ಎಂ. ಎಲಿ ಸೇರಿದಂತೆ ಮತ್ತಿತರ ಸಾಧಕರಿಗೆ ಸನ್ಮಾನಿಸಲಾಗುತ್ತದೆ.ನ. 13ರಂದು ಸಂಜೆ 6 ಕ್ಕೆ ನಡೆಯುವ ಭಾವೈಕ್ಯ, ಜನಜಾಗೃತಿ ಮತ್ತು ಧರ್ಮ ಸಮಾರೋಪ ಸಮಾರಂಭವು ಶ್ರೀಶೈಲ ಮಹಾಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನೆರವೇರಲಿದೆ. ಕೇಂದ್ರದ ಮಾಜಿ ಸಚಿವ ಡಾ. ಜಿ.ಎಂ. ಸಿದ್ದೇಶ್ವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಅಮೆರಿಕದ ಚಿಕಾಗೋ ಬರಹಗಾರ ರವಿ ಹಂಜ್ ಅವರು ‘ವೀರಶೈವ ಧರ್ಮ ಅಂದು-ಇಂದು-ಮುಂದು’ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ದಾವಣಗೆರೆ- ಹರಿಹರ ಅರ್ಬನ್ ಸಹಕಾರಿ ಬ್ಯಾಂಕ್ ಅಧ್ಯಕ್ಷ ಹಾಗೂ ಪುಣ್ಯಾರಾಧನೆ ಸಮಿತಿ ಕಾರ್ಯಾಧ್ಯಕ್ಷ ಎನ್.ಎ. ಮುರುಗೇಶ, ಹರಿಹರ ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ವಿಧಾನ ಪರಿಷತ್ ಸದಸ್ಯ ಕೆ.ಎಂ. ಸುರೇಶ್, ಮಾಜಿ ಮುಖ್ಯಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ಮಲೇಬೆನ್ನೂರಿನ ಎಂ.ಚಿದಾನಂದಪ್ಪ, ದೂಡಾ ಮಾಜಿ ಅಧ್ಯಕ್ಷರಾದ ದೇವರಮನಿ ಶಿವಕುಮಾರ್, ಯಶವಂತ ರಾವ್ ಜಾದವ್ ಹಾಗೂ ಬಿಜೆಪಿ ಮುಖಂಡ ಶ್ರೀನಿವಾಸ ದಾಸಕರಿಯಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಗುರುರಕ್ಷೆಯಲ್ಲಿ ವ್ಯಂಗ್ಯ ಚಿತ್ರಕಾರ ಡಾ.ಎಚ್.ಬಿ. ಮಂಜುನಾಥ್, ಎಂ.ಕೊಟ್ಟೂರೇಶಪ್ಪ, ಕೆ.ಎಂ. ಮೂರ್ತಯ್ಯ, ಎಂ.ಎಸ್. ಸಿದ್ದಯ್ಯ, ಹೊಸಕೆರೆ ಸುರೇಶ್, ಎಚ್.ಎ. ಭಕ್ತವತ್ಸಮೂರ್ತಿ, ಡಾ. ಡಿ.ಎಂ.ಯಶೋಧ, ಮಂಜುನಾಥ ಬಿರಾದಾರ್, ಶಿವಯೋಗಿ ಸ್ವಾಮಿ ಉಪಸ್ಥಿತರಿರಲಿದ್ದಾರೆ.- - -
(ಬಾಕ್ಸ್)* ಚಂದ್ರಿಕಾ, ಶೋಭಾಗೆ ಪ್ರಶಸ್ತಿ
ಸಮಾರಂಭದಲ್ಲಿ ದಾವಣಗೆರೆ ಶ್ರೀ ಗುರು ಕೊಟ್ಟೂರೇಶ್ವರ ರೈಸ್ ಮಿಲ್ನ ಚಂದ್ರಿಕಾ ಕೆ.ಎಂ. ಪರಮೇಶ್ವರಯ್ಯ ಅವರಿಗೆ ‘ಗುರುಸೇವಾ ಧುರಂಧರ ಪ್ರಶಸ್ತಿ’ ಹಾಗೂ ದಾವಣಗೆರೆ ಸಹಸ್ ಸಂಸ್ಥೆಯ ಕಿವುಡ-ಮೂಕ ಮಕ್ಕಳ ಶಾಲೆಯ ಆರ್. ಶೋಭಾ ಸಿ.ಕೆ. ಅವರಿಗೆ ‘ವಾಗ್ಗೈತನ್ಯದಾಯಿನಿ ಸೇವಾ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತದೆ.- - -
