ಶಿಕ್ಷಣದಲ್ಲಿ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಿ: ಡಾ. ನಿಂಗು

KannadaprabhaNewsNetwork |  
Published : Sep 26, 2026, 01:30 AM IST
ಕಾರ್ಯಕ್ರಮವನ್ನ ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಇಂದಿನ ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಸವಾಲಾಗಿ ಕಾಣದೆ, ಅದರಲ್ಲಿರುವ ಸಾಧ್ಯತೆಗಳ ಸಮರ್ಪಕ ಬಳಕೆ ಮಾಡಿಕೊಳ್ಳುವಲ್ಲಿ ನಾವು ಮುಂದಾಗಬೇಕು.

ಕನ್ನಡಪ್ರಭ ವಾರ್ತೆ ಗದಗ

ಇಂದಿನ ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಸವಾಲಾಗಿ ಕಾಣದೆ, ಅದರಲ್ಲಿರುವ ಸಾಧ್ಯತೆಗಳ ಸಮರ್ಪಕ ಬಳಕೆ ಮಾಡಿಕೊಳ್ಳುವಲ್ಲಿ ನಾವು ಮುಂದಾಗಬೇಕು ಎಂದು ಸಾಹಿತಿ ಡಾ. ನಿಂಗು ಸೊಲಗಿ ಹೇಳಿದರು.

ನಗರದ ವಿದ್ಯಾದಾನ ಶಿಕ್ಷಣ ಸಮಿತಿಯ ಶಾಲಾ ಸಭಾಂಗಣದಲ್ಲಿ ಕಪ್ಪತ್ತಗಿರಿ ಫೌಂಡೇಶನ್, ಸಾಹಿತ್ಯ, ಶಿಕ್ಷಣ ಹಾಗೂ ಸಾಂಸ್ಕೃತಿಕ ಕಲಾ ವೇದಿಕೆಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕರ ಸಮ್ಮೇಳನ, ರಾಜ್ಯಮಟ್ಟದ ವಿಚಾರ ಸಂಕಿರಣ ಹಾಗೂ ವಿವಿಧ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಸಚಿವ ಸೋಮಲಿಂಗ ಗೆಣ್ಣೂರು ಮಾತನಾಡಿ, ಶಿಕ್ಷಕರ ಜವಾಬ್ದಾರಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ, ಅಧಿಕಾರಿಗಳ ದಕ್ಷತೆ ಹಾಗೂ ಮೂಢನಂಬಿಕೆಗಳ ನಿರ್ಮೂಲನೆಯ ಕುರಿತು ಮನಮುಟ್ಟುವಂತೆ ತಿಳಿಸಿದರು.

ಈ ವೇಳೆ ರವೀಂದ್ರನಾಥ ದೊಡ್ಡಮೇಟಿ ಅಂದಪ್ಪ ಆದಿ ಅವರ ಸ್ವರಚಿತ ಕವನ ಸಂಕಲನ ಕುಳಿಗೆನ್ನ ಸುಂದರಿ ಕೃತಿ ಬಿಡುಗಡೆ ಮಾಡಿದರು. ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪುತ್ತೂರಿನ ಪ್ರಗತಿ ಸ್ಟಡಿ ಸೆಂಟರ್‌ನ ಸಂಸ್ಥಾಪಕ ಅಧ್ಯಕ್ಷ ಗೋಕುಲ್‌ನಾಥ್, ಶರದ್ ರಾವ್ ಹುಯಿಲಗೋಳ, ಚಂದ್ರಕಲಾ ಇಟಗಿಮಠ, ಶಿಲ್ಪಾ ಮ್ಯಾಗೇರಿ, ಡಾ. ವಿನಾಯಕ ಕಮತದ, ಡಾ. ಬಿ.ಎಲ್. ಚವಾಣ, ಪ್ರೊ. ಪ್ರಿಯಾಂಕ ನಡುವಿನಮನಿ, ವಿಜಯ ಕಿರೇಸೂರ, ಸಿದ್ದಲಿಂಗ ಸಜ್ಜನಶೆಟ್ಟರ, ಚಂದ್ರಪ್ಪ ಬಾರಂಗಿ, ಪ್ರೊ. ಬಸವರಾಜ ಗಾಣಿಗೇರ, ಕುಮಾರಸ್ವಾಮಿ ಹಿರೇಮಠ, ಸಿ.ಬಿ.ಪಲ್ಯದ, ಮಲ್ಲಿಕಾರ್ಜುನ ಕಂಡಮ್ಮನವರ, ಡಾ. ವಿಜಯಲಕ್ಷ್ಮೀ ಗೇಟಿ, ಡಾ. ಪ್ರವೀಣ ಕರಿಯಪ್ಪನವರ, ಪಿ.ಎಚ್. ಕಡಿವಾಲ, ಪ್ರವೀಣ ಕನ್ಯಾಳ ಸೇರಿ ಗಣ್ಯರು ಇದ್ದರು. ಸೌಮ್ಯ ಹಿರೇಮಠ ಪ್ರಾರ್ಥಿಸಿದರು. ರಮೇಶ ನಾಯಕ ಸ್ವಾಗತಿಸಿದರು. ಈಶ್ವರ ಕುರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಹುಲ್ ಗಿಡ್ನಂದಿ ಹಾಗೂ ರಕ್ಷಿತ ಗಿಡ್ನಂದಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಂಡಿತ್ ಮತ್ತು ಮುಖರ್ಜಿ ಕನಸು ನನಸಾಗಿದೆ : ಕುತ್ಯಾರು ನವೀನ್ ಶೆಟ್ಟಿ
ಮಹಿಳಾ ಕುಸ್ತಿಯಲ್ಲಿ ಮೂರು ಪದಕ