₹61 ಲಕ್ಷ ನೀಡಿ ಒಂಟಿ ಎತ್ತು ಖರೀದಿಸಿದ ರಾಜ್ಯದ ರೈತ!

Published : Oct 24, 2026, 09:14 AM IST
Money

ಸಾರಾಂಶ

ರೈತನೊಬ್ಬ ₹61 ಲಕ್ಷ ನೀಡಿ ಒಂಟಿ ಎತ್ತನ್ನು ಮಹಾರಾಷ್ಟ್ರದಿಂದ ಖರೀದಿಸಿ ಅಚ್ಚರಿ ಮೂಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಿರೂರು ಗ್ರಾಮದ ರೈತ ಬಾಳು ಹಜಾರೆ ಎತ್ತು ಖರೀದಿಸಿದ ಕನ್ನಡಿಗ ರೈತ.

 ಕಾಗವಾಡ: ರೈತನೊಬ್ಬ ₹61 ಲಕ್ಷ ನೀಡಿ ಒಂಟಿ ಎತ್ತನ್ನು ಮಹಾರಾಷ್ಟ್ರದಿಂದ ಖರೀದಿಸಿ ಅಚ್ಚರಿ ಮೂಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಿರೂರು ಗ್ರಾಮದ ರೈತ ಬಾಳು ಹಜಾರೆ ಎತ್ತು ಖರೀದಿಸಿದ ಕನ್ನಡಿಗ ರೈತ.

ಎತ್ತುಗಳ ಓಟದ ಮೂಲಕವೇ ತಮ್ಮದೇ ಆದ ಖ್ಯಾತಿ ಗಳಿಸಿರುವ ಬಾಳು ಹಜಾರೆ

ಎತ್ತುಗಳ ಓಟದ ಮೂಲಕವೇ ತಮ್ಮದೇ ಆದ ಖ್ಯಾತಿ ಗಳಿಸಿರುವ ಬಾಳು ಹಜಾರೆ, ಇದೀಗ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಪಲುಸ್ ತಾಲೂಕಿನ ಭೀಲವಡಿ ಗ್ರಾಮದ ರೈತ ರಾಜು ಪಾಟೀಲ ಅವರಿಂದ ₹61 ಲಕ್ಷಕ್ಕೆ ‘ಬ್ರೇಕ್ ಫೇಲ್ ಬೈಜಾ’ ಹೆಸರಿನ ಎತ್ತನ್ನು ಖರೀದಿಸಿದ್ದಾರೆ. ಅವರ ಮನೆಯಲ್ಲಿ ದುಬಾರಿ ಕಾರುಗಳಷ್ಟೇ ಅಲ್ಲ, ಲಕ್ಷಾಂತರ ರೂಪಾಯಿ ಬೆಲೆಬಾಳುವ ಎತ್ತುಗಳ ಸಾಲೇ ಇದೆ.

, ‘ಹೆಲಿಕ್ಯಾಪ್ಟರ್ ಬೈಜಾ’ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.

ಎತ್ತಿನ ಓಟದ ಮೈದಾನದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರು, ‘ಹೆಲಿಕ್ಯಾಪ್ಟರ್ ಬೈಜಾ’ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಈಗಾಗಲೇ ಹಲವು ಎತ್ತಿನ ಓಟದ ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಪಡೆದು ಗಮನ ಸೆಳೆದಿರುವ ‘ಬ್ರೇಕ್ ಫೇಲ್ ಬೈಜಾ’, ಇನ್ಮುಂದೆ ಕನ್ನಡಿಗ ಬಾಳು ಹಜಾರೆ ಅವರ ಪರವಾಗಿ ಓಟದ ಮೈದಾನಕ್ಕಿಳಿಯಲಿದೆ.

PREV
Get the latest news, developments and stories from Uttara Kannada district (ಉತ್ತರ ಕನ್ನಡ ಸುದ್ದಿ) — covering local politics, environment, coastal community, infrastructure, tourism, disasters, culture and social issues on Kannada Prabha News.
Read more Articles on

Recommended Stories

ದೊಡ್ಡ ಗೋಷ್ಠಿಗಳು, ಭಾಷಣ ಮಾತ್ರ ಭಾಷೆ ಬೆಳೆಸುವುದಿಲ್ಲ: ಪತ್ರಕರ್ತ ಜಿ.ಯು. ಭಟ್‌
ಇಂದು ಭಟ್ಕಳದಲ್ಲಿ ಟಿಸಿಎಸ್‌ನಿಂದ ಉದ್ಯೋಗ ಮೇಳ