ಮುಳಬಾಗಿಲು: ಕಾಗಿನೆಲೆ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ಸಿದ್ಧರಾಮಾನಂದ ಮಹಾಸ್ವಾಮೀಜಿಯವರು ಸಾಮಾಜಿಕ ಮೌಲ್ಯ ಮೈಗೂಡಿಸಿಕೊಂಡು ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದರು ಎಂದು ಬೆಂಗಳೂರು ಉತ್ತರ ವಿವಿ ಉಪಕುಲಪತಿ ಬಿ.ಕೆ.ರವಿ ತಿಳಿಸಿದರು. ನಗರದ ಕನಕ ಭವನದಲ್ಲಿ ತಾಲೂಕು ಕುರುಬರ ಸಂಘದಿಂದ ಕಾಗಿನೆಲೆ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ಸಿದ್ಧರಾಮಾನಂದ ಸ್ವಾಮೀಜಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ರಾಜ್ಯ ಕುರುಬರ ಸಂಘದ ಮಾಜಿ ನಿರ್ದೇಶಕ ಚನ್ನಾಪುರ ಎನ್.ವೆಂಕಟೇಶ್ ಗೌಡ ಮಾತನಾಡಿ, ಕಳೆದ ನವೆಂಬರ್ ತಿಂಗಳಲ್ಲಿ ಆಂಧ್ರಪ್ರದೇಶದ ತಿರುಪತಿಯಲ್ಲಿ ಕನಕದಾಸರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಅವರೂ ಸಹ ನಮ್ಮ ಜೊತೆ ಬಂದಿದ್ದರು. ಅವರ ಸಮಾಜಮುಖಿ ಕಾರ್ಯಗಳು ಇತರರಿಗೆ ಪ್ರೇರಣೆಯಾಗಿವೆ ಎಂದರು. ತಾಲೂಕು ಕುರುಬರ ಸಂಘದ ಅಧ್ಯಕ್ಷ ಸುಬ್ರಮಣಿ, ಯಡಹಳ್ಳಿ ಸೋಮಶೇಖರ್ ಗೌಡ, ಕೋಳಿ ನಾಗರಾಜ್, ಸಿದ್ದಗಟ್ಟ ಮುನಿಸ್ವಾಮಿಗೌಡ, ಗುಜ್ಜನಹಳ್ಳಿ ಸೋಮಣ್ಣ, ಸಿದ್ದನಹಳ್ಳಿ ಸುರೇಶ್ ಗೌಡ, ಪುರಸಭೆ ಮಾಜಿ ಸದಸ್ಯ ಚಂದ್ರಣ್ಣ, ಕದ್ರಿಪುರ ಮಣಿ, ಶೆಟ್ಟಿ ಬಣಕಣಹಳ್ಳಿ ಜಗದೀಶ್, ಶಂಕರ್ ಇದ್ದರು.