)
- ನಿವೃತ್ತ ನ್ಯಾಯಾಧೀಶ ಮಲ್ಲೇಶಪ್ಪನವರ ಸುಧೀರ್ ಬೆಂಗಳೂರಲ್ಲಿ ವೃತ್ತಿ- - -
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಕಚೇರಿ ಹೊಂದಿರುವ, ನಾಗರಬಾವಿಯಲ್ಲಿ ಮನೆ ಹೊಂದಿರುವ ಮೂಲತಃ ದಾವಣಗೆರೆ ಜಿಲ್ಲೆ ಚನ್ನಗಿರಿ ತಾ. ತ್ಯಾವಣಿಗೆ ಗ್ರಾಮದವರಾದ ಹಿರಿಯ ವಕೀಲ ಸುಧೀರ್ (48) ಮೃತಪಟ್ಟ ದುರ್ದೈವಿ. ತ್ಯಾವಣಿಗೆ ಗ್ರಾಮದ ವಾಸಿಯಾದ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಮಲ್ಲೇಶಪ್ಪನವರ ಪುತ್ರನಾಗಿದ್ದಾರೆ.
ಗೋಕಾಕ್ ಮತ್ತು ಹುಬ್ಬಳ್ಳಿಯಲ್ಲಿ ಪ್ರಾಥಮಿಕ ಹಾಗೂ ಕಾಲೇಜು ಶಿಕ್ಷಣ ಪಡೆದಿದ್ದರು. ಮೃತ ಸುಧೀರ್ ಪತ್ನಿ, ಇಬ್ಬರು ಹೆಣ್ಣು ಮಕ್ಕಳು, ಹೆತ್ತವರು ಹಾಗೂ ಬಂಧು-ಬಳಗ ಸ್ನೇಹಿತರನ್ನು ಅಗಲಿದ್ದಾರೆ. ಸ್ನೇಹಿತರ ಜೊತೆಗೆ ಚಾರ್ ಧಾಮ್ ಯಾತ್ರೆಗೆ ಹೋಗಿದ್ದ ವೇಳೆ ಹೆಲಿಕಾಫ್ಟರ್ ದುರಂತ ಸಂಭವಿಸಿದೆ. ಮೃತರ ಪಾರ್ಥೀವ ಶರೀರಗಳು ಪತ್ತೆಯಾಗಿದ್ದು, ಡಿಎನ್‌ಎ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ. ಮೃತರ ಕುಟುಂಬ ಸದಸ್ಯರು ಸಂಜೆಯೇ ಬೆಂಗಳೂರಿಗೆ ತೆರಳಿದ್ದಾರೆ. ಶನಿವಾರ ಬೆಳಗಿನ ಜಾವ ಉತ್ತರಾಖಂಡವನ್ನು ಕುಟುಂಬ ಸದಸ್ಯರು ತಲುಪಲಿದ್ದು, ಅಲ್ಲಿಂದ ಪಾರ್ಥೀವ ಶರೀರವನ್ನು ಸ್ವಗ್ರಾಮಕ್ಕೆ ತರಲು ಕುಟುಂಬ ಸದಸ್ಯರು ಮುಂದಾಗಿದ್ದಾರೆ. ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ಮನೆ ಮಾಡಿದೆ.