ಒಕ್ಕಲಿಗ ವೇದಿಕೆ ಅಧ್ಯಕ್ಷರಾಗಿ ವಿ.ಎಂ.ಕುಮಾರ್ ಗೌಡ ಆಯ್ಕೆ

KannadaprabhaNewsNetwork |  
Published : Nov 03, 2025, 01:45 AM IST
2ಕೆಎಂಎನ್ ಡಿ16 | Kannada Prabha

ಸಾರಾಂಶ

ಕೃಷಿಯನ್ನು ನಂಬಿ ಬದುಕುತ್ತಿರುವ ಜನಾಂಗ ಒಕ್ಕಲಿಗರು. ನಾಡಿನ ಅನ್ನದಾತರಾದ ಒಕ್ಕಲಿಗ ಸಮುದಾಯ ಆರ್ಥಿಕವಾಗಿ ಸಂಕಷ್ಠದಲ್ಲಿದೆ. ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಕೃಷಿ ಲಾಭದಾಯಕವಲ್ಲದಿದ್ದರೂ ಸಾ ಮಾಡಿಯಾದರೂ ಬೆಳೆ ಬೆಳೆದು ನಾಡಿಗೆ ಅನ್ನ ನೀಡಿ ಒಕ್ಕಲಿಗರು ಸಾಲದ ಸುಳಿಯಲ್ಲಿಯೇ ಬದುಕು ನೂಕುತ್ತಿದ್ದಾರೆ.

ಕೆ.ಆರ್.ಪೇಟೆ:

ತಾಲೂಕು ಒಕ್ಕಲಿಗ ವೇದಿಕೆ ಅಧ್ಯಕ್ಷರಾಗಿ ವಳಗೆರೆಮೆಣಸ ಗ್ರಾಮದ ವಿ.ಎಂ.ಕುಮಾರ್ ಗೌಡ ಆಯ್ಕೆಯಾಗಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ತಿಮ್ಮೇಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವೇದಿಕೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದು ಗೌರವಾಧ್ಯಕ್ಷರಾಗಿ ಟಿ.ವೈ.ಆನಂದ್, ಪ್ರಧಾನ ಕಾರ್ಯದರ್ಶಿಯಾಗಿ ಹಿರಿಕಳಲೆ ಗೌರೀಶ್ ಅವರನ್ನು ಆಯ್ಕೆ ಮಾಡಿದರು.

ಈ ವೇಳೆ ನಿವೃತ್ತ ಉಪನ್ಯಾಸಕ ಕೆ.ಕಾಳೇಗೌಡ ಮಾಕನಾಡಿ, ಕೃಷಿಯನ್ನು ನಂಬಿ ಬದುಕುತ್ತಿರುವ ಜನಾಂಗ ಒಕ್ಕಲಿಗರು. ನಾಡಿನ ಅನ್ನದಾತರಾದ ಒಕ್ಕಲಿಗ ಸಮುದಾಯ ಆರ್ಥಿಕವಾಗಿ ಸಂಕಷ್ಠದಲ್ಲಿದೆ. ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಕೃಷಿ ಲಾಭದಾಯಕವಲ್ಲದಿದ್ದರೂ ಸಾ ಮಾಡಿಯಾದರೂ ಬೆಳೆ ಬೆಳೆದು ನಾಡಿಗೆ ಅನ್ನ ನೀಡಿ ಒಕ್ಕಲಿಗರು ಸಾಲದ ಸುಳಿಯಲ್ಲಿಯೇ ಬದುಕು ನೂಕುತ್ತಿದ್ದಾರೆ ಎಂದು ವಿಷಾದಿಸಿದರು.

ಶೋಷಿತ ಸಮುದಾಯದಲ್ಲಿ ಒಬ್ಬರಾದ ಒಕ್ಕಲಿಗರು ಅಸಂಘಟಿತರಾಗಿದ್ದು ಇತರರ ಶೋಷಣೆ ಮತ್ತು ದಬ್ಬಾಳಿಕೆಗೆ ಒಳಗಾಗುತ್ತಿದ್ದಾರೆ. ಸಮುದಾಯವನ್ನು ಸಂಘಟಿಸುವ ಕೆಲಸವನ್ನು ಎಲ್ಲರೂ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ಅಭಿವೃದ್ದಿ ಸಾಧ್ಯ ಎಂದರು.

ಒಕ್ಕಲಿಗ ಸಮುದಾಯವನ್ನು ಜಾಗೃತಗೊಳಿಸಿ ಕೃಷಿಯೇತರ ಉದ್ದಿಮೆಗಳ ಕಡೆಗೆ ಬೇಕಾದ ಅಗತ್ಯ ವೃತ್ತಿ ಕೌಶಲ್ಯ ಮತ್ತು ಮಾರ್ಗದರ್ಶನ ಕೊಡಿಸಬೇಕು. ಮಕ್ಕಳನ್ನು ವಿದ್ಯಾವಂತರಾಗಿ ಮಾಡಬೇಕು ಎಂದು ಕೋರಿದರು.

ಈ ವೇಳೆ ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಮಹದೇವ್, ಹರಿಹರಪುರ ನಿಂಗರಾಜ್ ಮತ್ತು ಶ್ರೀಧರ್, ಕೊರಟಿಕೆರೆ ಸಂತೋಷ ಮತ್ತು ಕಿರಣ್, ಚಿಕ್ಕೋನಹಳ್ಳಿ ನಾಗರಾಜ್, ವಡಕಳ್ಳಿ ಮಂಜಣ್ಣ, ಕಾಂತರಾಜ್, ಅಗ್ರಹಾರಬಾಚಹಳ್ಳಿ ಲೋಕೇಶ್ ಮತ್ತು ಎ.ಬಿ.ಕುಮಾರ್, ಪತ್ರಕರ್ತರಾದ ರೋಷನ್ ಕುಮಾರ್ ಜಿ.ಕೆ.ಪ್ರದೀಪ್ ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ