ಕನ್ನಡಪ್ರಭ ವಾರ್ತೆ ನಂಜನಗೂಡು
ಪಟ್ಟಣದ ನಂದಿ ಕನ್ವೆನ್ಷನ್ ಹಾಲ್ ನಲ್ಲಿ ಗುರುವಾರ ಬಿಜೆಪಿ ನಗರ ಮತ್ತು ಗ್ರಾಮಾಂತರ ಮಂಡಲದಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಚಾಮರಾಜನಗರವನ್ನು ಕರ್ಮ ಭೂಮಿಯನ್ನಾಗಿಸಿಕೊಂಡು 50 ವರ್ಷಗಳ ರಾಜಕೀಯ ಜೀವನ ನಡೆಸಿದ ವಿ. ಶ್ರೀನಿವಾಸ ಪ್ರಸಾದ್ ಅವರ ನಿಧನದ ಬಳಿಕ ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಸೇರಿದಂತೆ ಇತರೆ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಅಭಿಮಾನಿಗಳು ಅಂತಿಮ ದರ್ಶನ ಪಡೆದುಕೊಂಡು ಅವರ ಸಾಧನೆಗಳನ್ನು ಸ್ಮರಿಸಿದ್ದರು. ಇನ್ನು ರಾಜ್ಯ ಸರ್ಕಾರ ಹಾಗೂ ಮೈಸೂರು ಜಿಲ್ಲಾಡಳಿತದವರು ವ ಅಂತ್ಯಸಂಸ್ಕಾರಕ್ಕೆ ಸಂಪೂರ್ಣ ಸಹಕಾರ ಹಾಗೂ ಅಗತ್ಯ ಭದ್ರತೆಯನ್ನು ನೀಡಿ ವ್ಯವಸ್ಥಿತವಾಗಿ ಅಂತಿಮ ವಿಧಿವಿಧಾನಗಳು ನಡೆಯಲು ಸಹಕಾರ ನೀಡಿದ್ದಾರೆ ಅವರಿಗೆ ನಮ್ಮ ಕುಟುಂಬದ ಪರವಾಗಿ ಧನ್ಯವಾದಗಳನ್ನು ತಿಳಿಸಿದ್ದೇವೆ ಎಂದರು.ಸಕ್ರಿಯ ರಾಜಕೀಯ ಜೀವನದಿಂದ ನಿವೃತ್ತಿ ಬಳಿಕ ಶ್ರೀನಿವಾಸಪ್ರಸಾದ್ ಅವರು ಸಂಸದರಾಗಿದ್ದ ಸಂದರ್ಭದಲ್ಲಿನ 7 ಮಂದಿ ಪ್ರಧಾನಮಂತ್ರಿಗಳ ಒಡನಾಟದ ಬಗ್ಗೆ ಪುಸ್ತಕ ಬರೆಯುವ ಹಂಬಲವನ್ನು ಹೊಂದಿದ್ದರು, ಆದರೆ ದುರಾದೃಷ್ಠವಶಾತ್ ಅದು ನೆರವೇರಲಿಲ್ಲ. ಇನ್ನು 2023ರ ವಿಧಾನಸಭಾ ಚುನಾವಣೆಯಲ್ಲಿ ನನಗೆ ಸೋಲುಂಟಾದಾಗ ತೀವ್ರ ನೊಂದಿದ್ದರು. ಕೆಲ ದಿನಗಳ ಬಳಿಕ ನನಗೆ ಸಮಾಧಾನ ಹೇಳಿದ್ದಲ್ಲದೆ ಮುಂಬರುವ ದಿನಗಳಲ್ಲಿ ಖಂಡಿತ ಕ್ಷೇತ್ರದ ಜನರು ನಿನ್ನನ್ನು ಮತ್ತೊಮ್ಮೆ ಬೆಂಬಲಿಸಲಿದ್ದಾರೆ. ಧೃತಿಗೆಡವುದು ಬೇಡ ಎಂದು ಧೈರ್ಯವನ್ನು ತುಂಬಿದ್ದರು, ಅವರೊಂದಿಗಿನ ಸುದೀರ್ಘ ಒಡನಾಟ ಹಾಗೂ ಮಾರ್ಗದರ್ಶನದಿಂದಾಗಿ ಪಕ್ಷದ ಕಾರ್ಯಕರ್ತರು ಹಾಗೂ ಪ್ರಸಾದ್ ಅವರ ಬೆಂಬಲಿಗರನ್ನು ಒಟ್ಟಿಗೆ ಕರೆದೊಯ್ಯುವ ಸಾಮರ್ಥ್ಯ ಪಡೆದಿದ್ದೇನೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಎನ್. ನರಸಿಂಹಸ್ವಾಮಿ ಮಾತನಾಡಿ, ವಿ. ಶ್ರೀನಿವಾಸಪ್ರಸಾದ್ ಪಕ್ಷಾತೀತವಾಗಿ ಜನಮನ್ನಣೆಯನ್ನು ಪಡೆದಿದ್ದರು, ಅವರ ತತ್ವಾದರ್ಶಗಳನ್ನು ರೂಢಿಸಿಕೊಂಡು ಅವರ ಆಶಯದಂತೆ ರಾಜಕೀಯವಾಗಿ ಮುನ್ನಡೆಯಲು ಪ್ರಸಾದ್ ಅಳಿಯ ಮಾಜಿ ಶಾಸಕ ಬಿ. ಹರ್ಷವರ್ಧನ್ ಅವರಿಗೆ ಅಗತ್ಯ ಶಕ್ತಿಯನ್ನು ಕಾರ್ಯಕರ್ತರು ನೀಡಬೇಕಿದೆ ಎಂದರು.
ಸಭೆಯನ್ನು ದ್ದೇಶಿಸಿ ಪ್ರಥಮ ದರ್ಜೆ ಗುತ್ತಿಗೆದಾರ ಯು.ಎನ್. ಪದ್ಮನಾಭರಾವ್, ಜಿಪಂ ಮಾಜಿ ಸದಸ್ಯರಾದ ಸಿ. ಚಿಕ್ಕರಂಗನಾಯಕ, ಮಂಗಳಾ ಸೋಮಶೇಖರ್, ಎಸ್.ಎಂ. ಕೆಂಪಣ್ಣ, ಬಿಜೆಪಿ ರಾಜ್ಯ ಮುಖಂಡ ಕುಂಬ್ರಳ್ಳಿ ಸುಬ್ಬಣ್ಣ, ಹೊರಳವಾಡಿ ಪಿ. ಮಹೇಶ್, ಬಾಲಚಂದ್ರು, ಖಾದಿ ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಎನ್.ಆರ್. ಕೃಷ್ಣಪ್ಪಗೌಡ, ಹೆಮ್ಮರಗಾಲ ಸೋಮಣ್ಣ, ಬಿಜೆಪಿ ಮಂಡಲ ಅಧ್ಯಕ್ಷ ಕೆಂಡಗಣ್ಣಪ್ಪ ಮಾತನಾಡಿದರು.