ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೊಲಿಯೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ತಾಲೂಕಿನ ಪ್ರತಿ ಗ್ರಾಮಗಳಲ್ಲಿ ತೆರೆಯಲಾಗಿರುವ ಪೊಲಿಯೋ ಬೂತ್‌ಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಪೊಲಿಯೋ ಮುಕ್ತ ಭಾರತಕ್ಕೆ ಎಲ್ಲರೂ ಬೆಂಬಲಿಸುವಂತೆ ಮನವಿ ಮಾಡಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಆರ್.ವಿ.ನಾಯಕ ಮಾತನಾಡಿ, ಸುರಪುರ ಮತ್ತು ಹುಣಸಗಿ ತಾಲೂಕಿನಲ್ಲಿ ಒಟ್ಟು 248 ತಂಡಗಳ ಮೂಲಕ 496 ವ್ಯಾಕ್ಸಿನೇಟರ್‌ಗಳು 47 ಜನ ಮೇಲ್ವಿಚಾರಕರು ಹಾಗೂ ಹನ್ನೊಂದು ಟ್ರಾಂಜೆಟ್ ಪಾಯಿಂಟ್‌ಗಳನ್ನು ತೆರೆಯುವ ಮೂಲಕ ತಾಲೂಕಿನ 57,801 ಮಕ್ಕಳಿಗೆ ಪೋಲಿಯೋ ಹಾಕುವ ಗುರಿ ಹೊಂದಲಾಗಿದೆ. ಹಿಂದೆ ಪ್ರತಿಶತ ನೂರರಷ್ಟು ಪೊಲಿಯೋ ಹಾಕುವ ಗುರಿ ಹೊಂದಲಾಗಿದೆ, ಐದು ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಪೋಷಕರು ಪೊಲಿಯೋ ಲಸಿಕೆ ಹನಿ ಹಾಕಿಸುವಂತೆ ತಿಳಿಸಿದರು.ಕಾರ್ಯಕ್ರಮವನ್ನು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ್ ಉದ್ಘಾಟಿಸಿದರು. ವೇದಿಕೆಯಲ್ಲಿ ಪಬ್ಲಿಕ್ ಹೆಲ್ತ್ ಇನ್ಸ್ಟಿಟ್ಯೂಟ್ ಬೆಂಗಳೂರಿನ ಉಪ ನಿರ್ದೇಶಕರು ಹಾಗೂ ರಾಜ್ಯ ನೋಡಲ್ ಅಧಿಕಾರಿ ಡಾ.ರಮೇಶ್, ಜಿಲ್ಲಾ ನೋಡಲ್ ಅಧಿಕಾರಿ ಡಾ.ಸಾಜಿದ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಮಹಿಳಾ ಮೇಲ್ವಿಚಾರಕಿ ಚಂದ್ರಲೀಲಾ ಉಪಸ್ಥಿತರಿದ್ದರು.
ಪದ್ಮಾವತಿ ನಾಯಕ, ವೈದ್ಯರಾದ ಡಾ. ಹರ್ಷವರ್ಧನ್ ರಫಗಾರ ಸೇರಿದಂತೆ ಆರೋಗ್ಯ ಇಲಾಖೆಯ ಜೆ.ಕೆ ಪವರ್, ರಾಜಶೇಖರ , ನಿಂಗಮ್ಮ , ಹಣಮಂತ ಅನವಾರ ಸೇರಿ ಎಲ್ಲ ಸಿಬ್ಬಂದಿಗಳು ಭಾಗವಹಿಸಿದ್ದರು.ಮರೆಪ್ಪ ನಾಯಕ ಗುಡ್ಡಕಾಯಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸುರಪುರ ಮತ್ತು ಹುಣಸಗಿ ತಾಲೂಕಿನಲ್ಲಿ ಮೊದಲ ದಿನವೇ ಶೇ. 90ರಷ್ಟು ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗಿದೆ.