ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ: ಜಿಲ್ಲಾಧಿಕಾರಿ

KannadaprabhaNewsNetwork | Published : Mar 1, 2024 2:17 AM

ಸಾರಾಂಶ

ಮಾ.3ರಂದು ಪೋಲಿಯೋ ಬೂತ್‌ ಮುಖಾಂತರ 0-5 ವರ್ಷದ ಮಕ್ಕಳಿಗೆ 2 ಹನಿ ಪೋಲಿಯೋ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಯಾವುದೇ 0-5 ವರ್ಷದೊಳಗಿನ ಮಕ್ಕಳು ಪಲ್ಸ್ ಪೋಲಿಯೋ ಲಸಿಕೆ ವಂಚಿತರಾಗದಂತೆ ಅಧಿಕಾರಿಗಳು ಕಡ್ಡಾಯವಾಗಿ ಮಕ್ಕಳಿಗೆ ಲಸಿಕೆ ಹಾಕಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಎರಡನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ 2024ರ ಜಿಲ್ಲಾಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆರ್.ಸಿ.ಎಚ್. ಅಧಿಕಾರಿ ಡಾ. ಶರಣಬಸಪ್ಪ ಖ್ಯಾತನಾಳ ಅವರು ಮಾತನಾಡಿ, ಈಗಾಗಲೇ ತಾಲ್ಲೂಕುಗಲ್ಲಿ ಟಾಸ್ಕಪೋರ್ಸ ಸಭೆಗಳನ್ನು ಅಧಿಕಾರಿಗಳು ಮಾಡಿದ್ದಾರೆ. ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಸಿಬ್ಬಂದಿ ವರ್ಗದವರಿಗೆ ಸೂಚನೆ ನೀಡಲಾಗಿದೆ 100 ರಷ್ಟು ಗುರಿ ಸಾಧಿಸುವ ಗುರಿಹೊಂದಲಾಗಿದೆ.

ಮಾ.3ರಂದು ಪೋಲಿಯೋ ಬೂತ್‌ ಮುಖಾಂತರ 0-5 ವರ್ಷದ ಮಕ್ಕಳಿಗೆ 2 ಹನಿ ಪೋಲಿಯೋ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ ಎಂದರು.

ಉಳಿದ 3 ದಿನಗಳು ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಮಕ್ಕಳಿಗೆ ಲಸಿಕೆಯನ್ನ ನೀಡಲಾಗುವುದು ಎಂದರು.

ಈ ಪೋಲಿಯೋ ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆಯಲ್ಲಿನ ಒಟ್ಟು ಗುರಿ 341961 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಮನೆಗಳು 572864 ಭೇಟಿ ನೀಡುವ ಗುರಿಹೊಂದಿದೆ ಪೋಲಿಯೋ ಭೂತಗಳು 1517, ಮನೆಗೆ ಭೇಟಿ ನೀಡುವ ತಂಡಗಳು 1517 ಟ್ರಾಂಸಿಟ್ ತಂಡಗಳು (ಬಸ್ ನಿಲ್ದಾಣ/ ರೈಲು ನಿಲ್ದಾಣ) 135, ಸಂಚಾರಿ ತಂಡಗಳು -32 ಈ ಕಾರ್ಯಕ್ರಮದಲ್ಲಿ ಒಟ್ಟು 330 ಪೋಲಿಯೋ ಕಾರ್ಯಕ್ರಮದ ಮೇಲ್ವಿಚಾರಕರು ಹಾಗೂ 3368 ಲಸಿಕೆ ನೀಡುವ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಫೋಸ್ಟರ್‌ಗಳನ್ನು ಬಿಡುಗಡೆಗೊಳಿಸಿದರು.

ಡಿಹೆಚ್ಓ ಡಾ.ರತಿಕಾಂತ ಸ್ವಾಮಿ ,ಜಿಲ್ಲಾ ಶಸ್ತ್ರಜ್ಞರು ಮತ್ತು ಅಧಿಕ್ಷಕರು ಜಿಮ್ಸ್ ಆಸ್ಪತ್ರೆ ಡಾ. ಅಂಬಾರಾಯ ರುದ್ರವಾಡಿ, ಜಿಲ್ಲಾ ಸಿ ಸಿ ಟಿ ಅಧಿಕಾರಿಗಳು ಡಾ. ವಿವೇಕಾನಂದ ರೆಡ್ಡಿ, ಜಿಲ್ಲಾ ಡಿ ಎಲ್ ಓ ಅಧಿಕಾರಿಗಳು ಡಾ. ರಾಜಕುಮಾರ ಕುಲಕರ್ಣಿ, ಜಿಲ್ಲಾ ಎನ್ ವಿ ಡಿ ಬಿಸಿ ಅಧಿಕಾರಿಗಳು ಡಾ. ಬಸವರಾಜ ಗುಳಗಿ, ಕಲಬುರಗಿ ತಾಲೂಕಿನ ತಾಲೂಕ ಆರೋಗ್ಯ ಅಧಿಕಾರಿಗಳು ಡಾ. ಮಾರುತಿ ಕಾಂಬಳೆ , ಜಿಲ್ಲಾ ಆಕುಕ ತರಬೇತಿ ಕೇಂದ್ರದ ಪ್ರಾಂಶುಪಾಲರು ಡಾ. ರವಿಕಾಂತಿ ಕ್ಯಾತನಾಳ, ಉಪ ನಿರ್ದೇಶಕರು ಮ ಮ ಕ ಇ ನವೀನ ಕುಮಾರ, ಜಿಲ್ಲಾ ಅಯುಷ ಅಧಿಕಾರಿಗಳು ಡಾ. ಗಿರಿಜಾ , ಮತ್ತು ಡಿಪಿಸಿ ವಿರೇಶ ಜವಳಕರ್, ಜಿಲ್ಲಾ ಸಂಯೋಜಕ ರವೀಂದ್ರ ಠಾಕೂರ್, ಜಿಲ್ಲಾ ಸಂಯೋಜಕರು ಆರ್ ಕೆ ಎಸ್ ಕೆ. ಶಿವಕುಮಾರ್ ಕಾಂಬಳೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Share this article