- ತರೀಕೆರೆಯಲ್ಲಿ ವಿಶ್ವ ಪೋಲಿಯೋ ದಿನಾಚರಣೆ । ಪೋಲಿಯೋವನ್ನು ಕೊನೆಗೊಳಿಸಿ ಪ್ರತಿ ಮಗು, ಪ್ರತಿ ಲಸಿಕೆ, ಎಲ್ಲೆಡೆ,
ಕನ್ನಡಪ್ರಭ ವಾರ್ತೆ, ತರೀಕೆರೆಈ ಲಸಿಕೆಯಿಂದಾಗಿ ಲಕ್ಷಾಂತರ ಮಕ್ಕಳ ಪ್ರಾಣ ಉಳಿಸುವುದಲ್ಲದೆ, ಅನೇಕ ಮಕ್ಕಳು ಅಂಗಾಂಗ ವೈಕಲ್ಯದಿಂದ ಬಳಲುವುದನ್ನು ತಪ್ಪಿಸ ಬಹುದಾಗಿದೆ ಈ ಕಾರಣಕ್ಕಾಗಿ ಡಾ. ಜೋನಾಸ್ ಸಾಲ್ಕ್ ಅವರ ಜನ್ಮದಿನವನ್ನು ವಿಶ್ವ ಪೋಲಿಯೊ ದಿನವಾಗಿ ಆಚರಿಸ ಲಾಗುತ್ತದೆ ಎಂದು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಚೆನ್ನಬಸಪ್ಪ ಎಂ.ಜೆ. ತಿಳಿಸಿದರು . ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ತಾಲೂಕು ಸಾರ್ವಜನಿಕ ಆಸ್ಪತ್ರೆ, ರೋಟರಿ ಕ್ಲಬ್ ಸಹಯೋಗದಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ವಿಶ್ವ ಪೋಲಿಯೋ ದಿನಾಚರಣೆ ಯಲ್ಲಿ ಮಾತನಾಡಿದರು.ಪೊಲಿಯೊ ಲಸಿಕೆ ಕಂಡು ಹಿಡಿದ ಖ್ಯಾತ ವಿಜ್ಞಾನಿ ಡಾ. ಜೋನಾಸ್ ಸಾಲ್ಕ್ ಅವರ ಜನ್ಮದಿನದಂದು ಪ್ರತಿ ಬಾರಿ ಎರಡು ಹನಿ ಎಂಬ ಅಭಿಯಾನ ಭಾರತ ಮಾತ್ರವಲ್ಲದೆ ಜಾಗತಿಕವಾಗಿ ಆರೋಗ್ಯ ಜಾಗೃತಿ ಸಂಕೇತವಾಗಿ ಹೊರಹೊಮ್ಮಿದೆ. ಈ ಎರಡು ಹನಿಗಳಲ್ಲಿ ಕೇವಲ ಔಷಧಿ ಮಾತ್ರವಲ್ಲ, ಪ್ರತಿಯೊಂದು ಮಗುವಿನ ಸುರಕ್ಷತೆ ಮತ್ತು ಉಜ್ವಲ ಭವಿಷ್ಯದ ಆಶಾಕಿರಣವೂ ಆಗಿದೆ. ಪೋಲಿಯೋದಂತಹ ಮಾರಣಾಂತಿಕ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು, ಪ್ರತಿಯೊಬ್ಬ ಪೋಷಕರು ಮತ್ತು ನಾಗರಿಕರು ತಮ್ಮ ಜವಾಬ್ದಾರಿ ಅರ್ಥಮಾಡಿಕೊಳ್ಳುವುದು ಅವಶ್ಯಕ. ತಮ್ಮ ಸುತ್ತಮುತ್ತಲಿನವರನ್ನೂ ಸಹ ಈ ಬಗ್ಗೆ ಜಾಗೃತಗೊಳಿಸುವುದು ಅತಿಮುಖ್ಯ ಎಂದು ಹೇಳಿದರು.ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್ ಬಿ.ಜಿ. ಮಾತನಾಡಿ ಅ.24ರಂದು ವಿಶ್ವ ಪೊಲಿಯೊ ದಿನ ನ್ನು ಆಚರಿಸಲಾಗುತ್ತದೆ. ಪೊಲಿಯೊ ಕೊನೆಗೊಳಿಸುವ ಉದ್ದೇಶದಿಂದಾಗಿ ಈ ದಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ಡಬ್ಲು ಎಚ್.ಒ, ಯೂನಿಸೆಫ್, ರೋಟರಿ ಸಂಸ್ಥೆಗಳು ಸಂಸ್ಥೆಗಳು ಪೊಲಿಯೊ ನಿರ್ಮೂಲನೆಗೆ ಇಂದಿಗೂ ಶ್ರಮಿಸುತ್ತಿವೆ
ಎಂದು ತಿಳಿಸಿದರು.ರೋಟರಿ ಕ್ಲಬ್ ಅಧ್ಯಕ್ಷ ಬಿ.ಪಿ.ರವಿಕುಮಾರ್ ಮಾತನಾಡಿ 1985 ರಲ್ಲಿ ರೋಟರಿ ಅಂತಾರಾಷ್ಟ್ರೀಯ ಸಂಸ್ಥೆ ''''''''''''''''ಪೋಲಿಯೊ ಪ್ಲಸ್'''''''''''''''' ಕಾರ್ಯಕ್ರಮ ಪ್ರಾರಂಭಿಸಿತು. ಇಂದು ಪೋಲಿಯೊ ಮುಕ್ತ ಜಗತ್ತನ್ನು ನಿರ್ಮಿಸಲು ರೋಟರಿ ಕ್ಲಬ್ ಎಲ್ಲಾ ರೀತಿ ಪ್ರಯತ್ನ ಮಾಡುತ್ತಿದೆ. ಪೋಲಿಯೊ ವಿರುದ್ಧದ ಹೋರಾಟಕ್ಕೆ ಅಗತ್ಯವಾದ ನಿಧಿ ಸಂಗ್ರಹಿಸುವಲ್ಲಿ ರೋಟರಿ ಕ್ಲಬ್ ಪ್ರಮುಖ ಪಾತ್ರ ವಹಿಸುತ್ತಿದೆ, ಸದಸ್ಯರು ಮತ್ತು ಇತರ ದಾನಿಗಳಿಂದ $2.1 ಶತಕೋಟಿಗಿಂತ ಹೆಚ್ಚು ಹಣವನ್ನು ಸಂಗ್ರಹಿಸಿದೆ, ಪೋಲಿಯೊ ಕುರಿತು ಅರಿವು ಮೂಡಿಸಲು ರೋಟರಿ ಕ್ಲಬ್ ಸಾರ್ವಜನಿಕ ಪ್ರಚಾರಗಳನ್ನು ಹಮ್ಮಿಕೊಳ್ಳುತ್ತಿದೆ. ವ್ಯಾಕ್ಸಿನ್ ಕುರಿತ ತಪ್ಪು ಕಲ್ಪನೆಗಳನ್ನು ನಿವಾರಿಸಿ, ಜನರಲ್ಲಿ ವಿಶ್ವಾಸ ಮೂಡಿಸುತ್ತಿದೆ ಎಂದು ತಿಳಿಸಿದರು.ದಂತ ವೈದ್ಯ ಡಾ.ಶರತ್ , ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ.ಸಿಂಧು, ರೋಟರಿ ಜೋನ್ -7 ನ ಅಸಿಸ್ಟೆಂಟ್ ಗವರ್ನರ್ ಪ್ರವೀಣ್ ನಹಾರ್, ರೋಟರಿ ಕ್ಲಬ್ ಕಾರ್ಯದರ್ಶಿ ಪ್ರವೀಣ್, ಹಿರಿಯ ರೋಟರಿ ಸದಸ್ಯರಾದ ಬಿ.ರಾಜಪ್ಪ, ಮಂಜುನಾಥ್ ಬಿ,ಕೆ, ಶುಶ್ರುಷಕ ಅಧೀಕ್ಷಕಿ ಶಾಂತಿ ಡಿಸೋಜಾ, ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಭಾಗವಹಿಸಿದ್ದರು.-25ಕೆಟಿಆರ್.ಕೆ.1ಃ ತರೀಕೆರೆಯ ವಿಶ್ವ ಪೋಲಿಯೋ ದಿನಾಚರಣೆ ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಚೆನ್ನಬಸಪ್ಪ ಎಂ.ಜೆ, ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್ ಬಿ.ಜಿ., ರೋಟರಿ ಕ್ಲಬ್ ಅಧ್ಯಕ್ಷ ಬಿ.ಪಿ.ರವಿಕುಮಾರ್ ಮತ್ತಿತರರು ಭಾಗವಹಿಸಿದ್ದರು.