ಶರಣ ಸಾಹಿತ್ಯ ಮನೆಮನೆಗೆ ತಲುಪಬೇಕು

KannadaprabhaNewsNetwork | Published : Oct 31, 2024 12:56 AM

ಸಾರಾಂಶ

ಶರಣರ ಸಾಹಿತ್ಯ ಸಂಸ್ಕೃತಿ, ಮನ ಮನೆಗಳಿಗೆ- ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ತಲುಪಿಸುವಂತಾಗಲಿ ಎಂದು ರಾಮನಾಥಪುರ ಜೆ.ಎಸ್.ಪಿ. ಶಾಲೆಯ ಮುಖ್ಯ ಶಿಕ್ಷಕ ವಿ.ಬಿ. ರವಿ ತಿಳಿಸಿದರು. ರಾಮನಾಥಪುರ ಐ.ಬಿ. ಸರ್ಕಲ್‌ನಲ್ಲಿರುವ ಜೆ.ಎಸ್.ಪಿ. ಶಾಲೆಯಲ್ಲಿ ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಹಾಗೂ ಜೆ.ಎಸ್.ಪಿ. ಶಾಲೆಯ ಸಂಯುಕ್ತಾಶ್ರಯದಲ್ಲಿ ನಡೆದ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ವಚನ ಕಂಠ ಪಾಠ ಸ್ಪರ್ಧೆಯಲ್ಲಿ ಉತ್ತಮವಾಗಿ ವಚನ ಹೇಳಿದ ವಿದ್ಯಾರ್ಥಿಗಳಿಗೆ ಉಚಿತ ವಚನ ಬುಕ್ಸ್‌ಗಳನ್ನು ನೀಡಿದ ನಂತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಶರಣರ ಸಾಹಿತ್ಯ ಸಂಸ್ಕೃತಿ, ಮನ ಮನೆಗಳಿಗೆ- ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ತಲುಪಿಸುವಂತಾಗಲಿ ಎಂದು ರಾಮನಾಥಪುರ ಜೆ.ಎಸ್.ಪಿ. ಶಾಲೆಯ ಮುಖ್ಯ ಶಿಕ್ಷಕ ವಿ.ಬಿ. ರವಿ ತಿಳಿಸಿದರು.

ರಾಮನಾಥಪುರ ಐ.ಬಿ. ಸರ್ಕಲ್‌ನಲ್ಲಿರುವ ಜೆ.ಎಸ್.ಪಿ. ಶಾಲೆಯಲ್ಲಿ ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಹಾಗೂ ಜೆ.ಎಸ್.ಪಿ. ಶಾಲೆಯ ಸಂಯುಕ್ತಾಶ್ರಯದಲ್ಲಿ ನಡೆದ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ವಚನ ಕಂಠ ಪಾಠ ಸ್ಪರ್ಧೆಯಲ್ಲಿ ಉತ್ತಮವಾಗಿ ವಚನ ಹೇಳಿದ ವಿದ್ಯಾರ್ಥಿಗಳಿಗೆ ಉಚಿತ ವಚನ ಬುಕ್ಸ್‌ಗಳನ್ನು ನೀಡಿದ ನಂತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಸುಮಾರು 15 ವರ್ಷಗಳಿಂದ ನಮ್ಮ ಶಾಲೆಯಲ್ಲಿ ವಚನ ಕಂಠ ಪಾಠ ಮಾಡಿ ಉತ್ತಮ ರೀತಿಯಲ್ಲಿ ವಚನ ಹೇಳಿದ ವಿದ್ಯಾರ್ಥಿಗಳಿಗೆ ಉಚಿತವಾಗಿ ಬುಕ್ಸ್ ಕೊಡುತ್ತಾ ಬಂದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಎಂ.ಎನ್. ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ಶರಣ ಸಾಹಿತ್ಯ ಪರಿಷತ್ತು ಬೆಳೆದು ಬಂದ ಬಗ್ಗೆ ಸುತ್ತೂರು ಶ್ರೀಗಳ ಸಮಾಜಿಕ ಕಾಳಜಿ ಹಾಗೂ ಅವರ ಶರಣ ಸಾಹಿತ್ಯದ ಬಗ್ಗೆ ಅಗಾಧ ಆಸಕ್ತಿಯು ಶರಣ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ನಾಂದಿಯಾಯಿತು. ಇಂತಹ ಶ್ರೇಷ್ಠ ಸಾಹಿತ್ಯದ ಮೌಲ್ಯಗಳನ್ನು ಇಂದಿನ ದಿನಮಾನಗಳಲ್ಲಿ ಮಾನವೀಯ ಮೌಲ್ಯಗಳ ಕೊರತೆ ಎದ್ದು ಕಾಣುತ್ತಿದೆ. ಅವುಗಳನ್ನು ಉಳಿಸಿ ಬೆಳಸುವ ಏಕೈಕ ಮಾರ್ಗವೆಂದರೆ ಶರಣ ಸಾಹಿತ್ಯದ ಮೊರೆ ಹೋಗುವುದು, ಅದನ್ನ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಸಿದ್ದರಾಜು, ವಿಜಯ್, ಚಂದ್ರಕಲಾ, ಶೃತಿ, ಶ್ವೇತ, ರುಮಾನಾ ಬಾನು, ಸುಮಾ ಮುಂತಾದವರಿದ್ದರು.

Share this article