- ಲೇಹ್, ಲಡಾಖ್‌ನಲ್ಲಿ 12ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ
- ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಉಪಸ್ಥಿತಿ
- - -ಹರಿಹರ: “ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ” ಎಂಬ ಈ ವರ್ಷದ ಧ್ಯೇಯವಾಕ್ಯದೊಂದಿಗೆ ಆರೋಗ್ಯ, ಸಾಮರಸ್ಯ ಹಾಗೂ ಆಂತರಿಕ ಜಾಗೃತಿಯ ಸಂದೇಶವನ್ನು ಸಾರಲಾಗಿದೆ ಎಂದು ಪಂಚಮಸಾಲಿ ಶ್ರೀ ಪೀಠದ ವಚನಾನಂದ ಶ್ರೀ ತಿಳಿಸಿದ್ದಾರೆ.
ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ, ಅದು ದೇಹ, ಮನಸ್ಸು ಮತ್ತು ಆತ್ಮವನ್ನು ಸಮತೋಲನಗೊಳಿಸುವ ಜೀವನದ ಸಮಗ್ರ ವಿಜ್ಞಾನ ಎಂಬುದನ್ನು ಮತ್ತೊಮ್ಮೆ ಜಗತ್ತಿಗೆ ನೆನಪಿಸಿತು ಎಂದು ಯೋಗದ ಮಹತ್ವ ಕೊಂಡಾಡಿದ್ದಾರೆ.
ಈ ಮಹತ್ವದ ಸಂದರ್ಭದಲ್ಲಿ ಭಾರತದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಲಡಾಖ್ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ, ಭಿಕ್ಕು ಸಂಘಸೇನಾ ಅವರೊಂದಿಗೆ ಯೋಗ ದಿನಾಚರಣೆಯಲ್ಲಿ ಭಾಗವಹಿಸುವ ಅವಕಾಶ ದೊರೆತದ್ದು ಸ್ಮರಣೀಯ ಕ್ಷಣವಾಗಿದೆ ಎಂದು ತಿಳಿಸಿದ್ದಾರೆ.
(ಟಾಪ್ ಕೋಟ್) ಹಿಮಾಲಯದ ಶಿಖರಗಳ ಮೇಲೆ ಉದಯಿಸಿದ ಸೂರ್ಯನ ಸಾಕ್ಷಿಯಾಗಿ ನಡೆದ ಈ ಯೋಗೋತ್ಸವವು ಶಾಂತಿ, ಆರೋಗ್ಯ, ಏಕತೆ ಮತ್ತು ಉನ್ನತ ಚೈತನ್ಯದ ಸಂದೇಶವನ್ನು ವಿಶ್ವದಾದ್ಯಂತ ಹರಡಲಿ. ಯೋಗದ ಬೆಳಕು ಪ್ರತಿಯೊಂದು ಹೃದಯವನ್ನು ಸ್ಪರ್ಶಿಸಲಿ, ಪ್ರತಿಯೊಂದು ಕುಟುಂಬಕ್ಕೆ ಆರೋಗ್ಯವನ್ನು ನೀಡಲಿ ಮತ್ತು ಸಮಸ್ತ ಮಾನವಕುಲವನ್ನು ಶಾಂತಿ, ಸೌಹಾರ್ದತೆ ಹಾಗೂ ಆತ್ಮಜ್ಞಾನದತ್ತ ಮುನ್ನಡೆಸಲಿ.
- - -
ಭಾರತದ 12ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ- 2026 ಅನ್ನು ಪಂಚಮಸಾಲಿ ಶ್ರೀ ಪೀಠದ ವಚನಾನಂದ ಶ್ರೀ ಹಿಮಾಲಯದ ಲೇಹ್, ಲಡಾಖ್‌ನಲ್ಲಿ ಆಚರಿಸಿದ್ದಾರೆ.