ಗಂಗಾವತಿ: ವಚನಗಳು ಸರ್ವಕಾಲಕ್ಕೂ ಪ್ರಸ್ತುತವಾಗಿದೆ ಎಂದು ರಾಜಾಮಾತೆ ಲಲಿತರಾಣಿ ಶ್ರೀರಂಗದೇವರಾಯಲು ಹೇಳಿದರು.
ನಗರದ ದೈವಜ್ಞ ಸಭಾ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಆಶ್ರಯದಲ್ಲಿ ರಾಜ್ಯ ಮಟ್ಟದ ಆಧುನಿಕ ಮಹಿಳಾ ವಚನೋತ್ಸವ ಹಾಗೂ ತಾಲೂಕು ಕದಳಿ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಶರಣರು ವಚನಗಳನ್ನು ರಚಿಸುವುದರ ಮೂಲಕ ಜನ ಸಾಮಾನ್ಯರಿಗೆ ತಿಳಿಯುವಂತೆ ಪ್ರಕಟಿಸಿದ್ದಾರೆ. ಮಹಿಳೆಯರು ಇಂತಹ ಕಾರ್ಯಕ್ರಮ ಆಯೋಜಿಸಿರುವದು ಶ್ಲಾಘನೀಯವಾಗಿದೆ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷೆ ಸಾವಿತ್ರಿ ಮುಜಂದಾರ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವಚನೋತ್ಸವ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ. ಶರಣರು ವಚನಗಳನ್ನು ಸರಳ ಭಾಷೆಯಲ್ಲಿ ಹೊರ ತಂದಿದ್ದಾರೆ. 12ನೇ ಶತಮಾನಕ್ಕಿಂತ ಪೂರ್ವದಲ್ಲಿ ಸಂಸ್ಕ್ರತ ಭಾಷೆಗೆ ಬಹಳ ಮಹತ್ವ ಇತ್ತು. ಪ್ರಸ್ತುತ ದಿನಗಳಲ್ಲಿ ಶರಣರು ಜನ ಸಾಮಾನ್ಯರಿಗೆ ಅರ್ಥವಾಗುವಂತೆ ವಚನಗಳಲ್ಲಿ ತಿಳಿಸಿದ್ದಾರೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕದಳಿ ಮಹಿಳಾ ವೇದಿಕೆ ಅದ್ಯಕ್ಷೆ ಡಾ. ಸಿ.ಮಹಾಲಕ್ಷ್ಮೀ ಮಾತನಾಡಿ, ಕದಳಿ ಮಹಿಳಾ ವೇದಿಕೆಯಿಂದ ವಿವಿಧ ಕಾರ್ಯಕ್ರಮ ಆಯೋಜಿಸುತ್ತಿದ್ದು.ಇದಕ್ಕೆ ಎಲ್ಲ ಮಹಿಳೆಯರು ಮತ್ತು ಮುಖಂಡರ ಸಹಕಾರ ಕಾರಣವಾಗಿದೆ ಎಂದರು.ಈ ಸಂದರ್ಭದಲ್ಲಿ ಅಧುನಿಕ ವಚನ ಕೃತಿ ಶಬ್ದಕ್ಕೆ ನಾಚಿದೊಡಂತಯ್ಯ ಕೃತಿ ಬಿಡುಗಡೆಗೊಂಡಿತು. ನಂತರ ಆಧುನಿಕ ವಚನಗಳ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಅಥಣಿಯ ಡಾ. ಪ್ರೀಯಾ ಮೇಧಾ ಅವರಿಗೆ ₹10 ಸಾವಿರ ನಗದು ಬಹುಮಾನ, ದ್ವೀತಿಯ ಸ್ಥಾನ ಇಲಕಲ್ಲ್ ನ ಸೌಮ್ಯ ಮಾಟೂರು ಅವರಿಗೆ ₹5 ಸಾವಿರ, ತೃತೀಯ ಸ್ಥಾನ ಪಡೆದ ಘಟಪ್ರಭದ ವಿಜಯಲಕ್ಷ್ಮೀಗೆ ₹3 ಸಾವಿರ ನಗದು ಮತ್ತು ಫಲಕ ನೀಡಿ ಗೌರವಿಸಲಾಯಿತು.
ಈ ವೇಳೆ ಗಂಗಮ್ಮ ಸತ್ಯಂಪೇಟೆ, ಸರೋಜಾ ಮಲ್ಲಿಕಾರ್ಜುನ ನಾಗಪ್ಪ, ಮಂಜರಿ ಸಾಗರ ಮುನವಳ್ಳಿ, ಡಾ.ಸುಲೋಚನಾ ಚಿನಿವಾಲರ, ಜಗದೇವಿ ಕಲಶೆಟ್ಟಿ, ವಿಜಯಲಕ್ಷ್ಮೀ ಲಿಂಗಣ್ಣ ಸೂಗೂರು, ಕವಿತಾ ಗುರುಮೂರ್ತಿ, ಮಂಗಳ ನೂಲ್ವಿ, ಡಾ. ಅಕ್ಷತಾ ಪಟ್ಟಣಶೆಟ್ಟಿ, ನಾಗರತ್ನ ಎಚ್, ಶ್ರೀದೇವಿ ಕೃಷ್ಣಪ್ಪ, ಉಮಾ.ಕೆ, ಜಯಶ್ರೀ ಹಕ್ಕಂಡಿ, ಶ್ವೇತಾ ರಾಘವೇಂದ್ರ ಬಳ್ಳಾರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.