ಕನ್ನಡಪ್ರಭ ವಾರ್ತೆ ಕೋಲಾರಮಾನವ ಜನಾಂಗದ ಸರ್ವಾಂಗೀಣ ಪ್ರಗತಿಗೆ ಸಾಮಾಜಿಕ ಭಕ್ತಿಯ ಎಚ್ಚೆತ್ತ ಪ್ರಜ್ಞೆಯ ಪ್ರತೀಕವಾಗಿ ಬಸವಣ್ಣನವರು ವಚನಗಳನ್ನು ರಚಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಬಸವಣ್ಣ ಬಹುಮುಖಿ ಆಯಾಮಗಳ ತಾತ್ವಿಕ ಪ್ರಣಾಳಿಕೆಗೆ ಸಾಂಸ್ಕೃತಿಕ ನಾಯಕರಾಗಿ ಹೆಣ್ಣು ಮಕ್ಕಳಿಗೆ ಸ್ವಾಯತ್ತತೆ ನೀಡಿ ಅರಿವಿನ ಕಣ್ತೆರೆಸುವ ಮೂಲಕ ಅವರ ಅಭಿವ್ಯಕ್ತಿಗಳಿಗೆ ಧ್ವನಿ ತುಂಬಿದವರು ಎಂದು ಉಪನ್ಯಾಸಕ ಶರಣಪ್ಪ ಗಬ್ಬೂರು ಅಭಿಪ್ರಾಯಪಟ್ಟರು. ನಗರದ ಜಯ ಕರ್ನಾಟಕ ಜಿಲ್ಲಾ ಸಂಘಟನೆಯ ಕಚೇರಿಯಲ್ಲಿ ಬಸವ ಜಯಂತಿಯಲ್ಲಿ ಮಾತನಾಡಿದ ಅವರು, ಬಸವಣ್ಣರ ಆಚಾರ ವಿಚಾರಗಳು ಚಿಂತನೆಗಳು ಸಾಮಾಜಿಕ ಸಮಾನತೆ ಮಹಿಳಾ ಸಬಲೀಕರಣ, ಪ್ರತಿ ಸಮಾಜದ ಉನ್ನತೀಕರಣಕ್ಕಾಗಿ ಆಳವಾದ ಬೇರೂರಿದ ತತ್ವಗಳು ವಚನಗಳು ಅನೇಕ ಶತಮಾನಗಳ ನಂತರವೂ ಮಾನವತೆಗೆ ಸ್ಫೂರ್ತಿದಾಯಕವಾಗಿದೆ ಎಂದು ತಿಳಿಸಿದರು.ಬಸವಣ್ಣನ ವಚನಗಳು ಶಾಶ್ವತ
ವಿಶ್ವದ ಸಾಂಸ್ಕೃತಿ ನಾಯಕ ಬಸವಣ್ಣ ಜಗದಗಲಕ್ಕೂ ಕೊಂಡೊಯ್ದ ಕೀರ್ತಿ ರಾಜ್ಯ ಸರ್ಕಾಕರಕ್ಕೆ ಬಂದಿದೆ, ಅಸಮಾನತೆಯ ಮೌಢ್ಯತೆಯ ವಿರುದ್ಧ ಪರಿವರ್ತನೆಗಾಗಿ ತನ್ನನ್ನೆ ಅರ್ಪಿಸಿಕೊಂಡು ಮಹಾ ಪುರುಷ ಮಾನವತವಾದಿ ಬಸವಣ್ಣರ ವಚನಗಳು ತತ್ವಗಳು ಸೂರ್ಯ ಚಂದ್ರರು ಇರುವವರೆಗೂ ಶಾಶ್ವತವಾಗಿ ಇರುತ್ತವೆ ಎಂದರು.ಇದೇ ಸಂದರ್ಭದಲ್ಲಿ ಬಿ. ಶಿವಕುಮಾರ್‌ರನ್ನು ಸನ್ಮಾನಿಸಲಾಯಿತು. ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನಾರಾಯಣಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ಕೆ.ಎನ್. ರವಿಕುಮಾರ್, ಕನ್ನಡ ಚಳವಳಿ ನಾಯಕ ಅ.ಕೃ. ಸೋಮಶೇಖರ್, ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ತ್ಯಾಗರಾಜ್, ನಂದೀಶ್, ಸುಬ್ರಮಣ್ಯ, ಆನಂದ್, ವೆಂಕಟಪ್ಪ, ಜಗದೀಶ್ ಇದ್ದರು.ಬಸವ ತತ್ವಗಳು ಇಂದಿಗೂ ಪ್ರಸ್ತುತಕನ್ನಡಪ್ರಭ ವಾರ್ತೆ ಗುಡಿಬಂಡೆ
12ನೇ ಶತಮಾನದಲ್ಲಿದ್ದಂತಹ ಮೂಡನಂಬಿಕೆ ಸೇರಿದಂತೆ ಅನೇಕ ಅನಿಷ್ಟಪದ್ಧತಿಗಳನ್ನು ನಿರ್ಮೂಲನೆ ಮಾಡಲು ಹಾಗೂ ಸಮಾನತೆಯ ಸಂದೇಶವನ್ನು ಸಾರಿದಂತಹ ವಿಶ್ವಗುರು ಬಸವಣ್ಣನವರ ತತ್ವಗಳು ಹಾಗೂ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ಪಿ.ಎಲ್.ಡಿ. ಬ್ಯಾಂಕ್ ಉಪಾಧ್ಯಕ್ಷ ಪ್ರಕಾಶ್ ತಿಳಿಸಿದರು.ಪಟ್ಟಣದ ಮುಖ್ಯರಸ್ತೆಯಲ್ಲಿ ಸಸಿ ನೆಡುವ ಮೂಲಕ ಬಸವಣ್ಣನವರ ಜಯಂತಿಯನ್ನು ಆಚರಿಸಿ ಮಾತನಾಡಿದ ಅವರು, ಸಮಾಜದಲ್ಲಿ ಸಮಾನತೆ, ಸಹಬಾಳ್ವೆಯ ತತ್ವಗಳನ್ನು ಬಿತ್ತಿದ ಬಸವಣ್ಣನವರ ಚಿಂತನೆಗಳು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ಜಗತ್ತಿನ ಒಳಿತಿಗಾಗಿ ಶ್ರಮಿಸಿದ ಅವರ ವಿಚಾರಗಳಿಗೆ ಜಾತಿಯ ಲೇಪ ಹಚ್ಚುವ ಅಗತ್ಯವಿಲ್ಲ. ಬಸವಣ್ಣನವರ ವಿಚಾರಗಳನ್ನು ಕೇವಲ ಭಾಷಣಗಳಿಗಷ್ಟೇ ಸೀಮಿತಗೊಳಿಸದೇ ವಿಶ್ವದಾದ್ಯಂತ ಪರಿಚಯಿಸುವ ಕೆಲಸವಾಗಬೇಕು ಎಂದರು.
ಕಾಯಕ ತತ್ವ ಪ್ರತಿಪಾದನೆಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶ್ರೀರಾಮಪ್ಪ ಮಾತನಾಡಿ, ಬಸವಣ್ಣನವರ ವಿಚಾರಗಳಿಂದ ಪ್ರಸ್ತೂತ ದಿನಗಳಲ್ಲಿನ ಅನೇಕ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿದೆ. ಕಾಯಕ ತತ್ವವನ್ನು ಪ್ರತಿಪಾದಿಸಿದ ಬಸವಣ್ಣನವರ ವಿಚಾರಗಳನ್ನು ಎಲ್ಲರೂ ತಮ್ಮ ಬಾಳಿನಲ್ಲಿ ಅಳವಡಿಸಿಕೊಳ್ಳಬೇಕು. ತಮ್ಮ ಸರಳ ವಚನಗಳ ಮೂಲಕ ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರ ಸೇರಿದಂತೆ ಸಾಮಾಜಿಕ ಪಿಡುಗುಗಳ ಬಗ್ಗೆ ಹೋರಾಡಿದಂತಹ ಮಹನೀಯರಾಗಿದ್ದಾರೆ. ಅವರ ಜಯಂತಿಯನ್ನು ಕೇವಲ ಆಚರಣೆ ಮಾಡಿದರೇ ಸಾಲದು ಅವರ ತತ್ವಾದರ್ಶಗಳನ್ನು ನಾವು ಪಾಲನೆ ಮಾಡಬೇಕು ಎಂದರು.
ಈ ಸಮಯದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಗುಂಪುಮರದ ಆನಂದ್, ಪರಿಸರ ಪ್ರೇಮಿಗಳಾದ ರಮೇಶ್, ಬಾಬು, ಅಂಬರೀಶ್, ನಾಗರಾಜು, ಮುನ್ನಾ, ರಾಜೇಶ್, ಸೈಫ್ ಉಲ್ಲಾ, ಮತ್ತಿತರರು ಇದ್ದರು.