ವಡ್ಡಗೆರೆ ವೀರನಾಗಮ್ಮ ದೇವಾಲಯ ಟ್ರಸ್ಟ್ ಸೀಜ್

KannadaprabhaNewsNetwork |  
Published : May 11, 2025, 01:19 AM IST
ವಡ್ಡಗೆರೆ ವೀರನಾಗಮ್ಮ ದೇವಾಲಯ ಟ್ರಸ್ಟ್ ಸೀಜ್ | Kannada Prabha

ಸಾರಾಂಶ

ಕೊರಟಗೆರೆ ತಾಲೂಕಿನ ಕಸಬಾ ಹೋಬಳಿ ವಡ್ಡಗೆರೆಯ ಶ್ರೀವೀರನಾಗಮ್ಮ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದು, ಸರ್ಕಾರ ನಿಯಮ ಗಾಳಿಗೆ ತೂರಿ ಅನಧಿಕೃತ ಟ್ರೆಸ್ಟ್ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಎಚ್.ಎನ್.ನಾಗರಾಜು ಕನ್ನಡಪ್ರಭ ವಾರ್ತೆ ಕೊರಟಗೆರೆ

ಕೊರಟಗೆರೆ ತಾಲೂಕಿನ ಕಸಬಾ ಹೋಬಳಿ ವಡ್ಡಗೆರೆಯ ಶ್ರೀವೀರನಾಗಮ್ಮ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದು, ಸರ್ಕಾರ ನಿಯಮ ಗಾಳಿಗೆ ತೂರಿ ಅನಧಿಕೃತ ಟ್ರೆಸ್ಟ್ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮುಜರಾಯಿ ಇಲಾಖೆ ಆದೇಶದಂತೆ ೨೦೦೬ರಲ್ಲಿ ಆರಂಭ ವೀರನಾಗಮ್ಮ ದೇವಾಲಯ ಸಮಿತಿ ಕಾಲಕ್ರಮೇಣ ಟ್ರಸ್ಟ್ ಆಗಿ ಬದಲಾಗಿ ೧೯ವರ್ಷಗಳ ದಾಖಲೆಗಳೇ ಮಾಯವಾಗಿವೆ. ಧಾರ್ಮಿಕದತ್ತಿ ಇಲಾಖೆಯ ಅಧಿಕಾರಿಗಳು ಕೇಳುವ ೨೦ಕ್ಕೂ ಅಧಿಕ ಪ್ರಶ್ನೆಗಳಿಗೆ ಮೌನವೆ ಉತ್ತರವಾಗಿ ಅಕ್ರಮ ನಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ.

ವೀರನಾಗಮ್ಮ ಟ್ರಸ್ಟ್ ಮಾಹಿತಿ ಮುಜರಾಯಿ ಇಲಾಖೆಗೆ ನೀಡಿದ್ದೀರಾ. ಟ್ರಸ್ಟ್ ರಚನೆಗೆ ಎಲ್ಲಾ ವರ್ಗದ ಜನತೆ ಇರಬೇಕಾದ ಕಾನೂನು ಗೋತ್ತಿಲ್ಲವೆ. ಭಕ್ತರಿಂದ ಕಾಣಿಕೆ ರೂಪದಲ್ಲಿ ಪಡೆಯುವ ಹಣ, ಅಕ್ಕಿ, ಬಂಗಾರ, ಬೆಳ್ಳಿ, ವಸ್ತುಗಳಿಗೆ ಪ್ರತ್ಯೇಕ ರಸೀದಿ ಪುಸ್ತಕ ಏಕಿಲ್ಲ. ಬಂಗಾರ, ಬೆಳ್ಳಿ ಮತ್ತು ನಗದು ಹಣದ ಮಾಹಿತಿ ಮುಜರಾಯಿಗೆ ಏಕೆ ನೀಡಿಲ್ಲ ಎಂಬ ೨೦ಕ್ಕೂ ಪ್ರಶ್ನೆಗಳಿಗೆ ಟ್ರಸ್ಟಿಗಳ ಬಳಿ ಉತ್ತರವೇ ನೀಡದೇ ಮೌನಕ್ಕೆ ಶರಣಾಗಿದ್ದರು. ಧಾರ್ಮಿಕ ದತ್ತಿ ಇಲಾಖೆಯ ಕೆ.ಪದ್ಮ ನೇತೃತ್ವದಲ್ಲಿ ಕೊರಟಗೆರೆ ತಹಸೀಲ್ದಾರ್ ಮಂಜುನಾಥ, ಪಿಎಸೈ ತಿರ್ಥೇಶ್ ತಂಡ ಪರಿಶೀಲನೆ ನಡೆಸಿದ ನಂತರ ಟ್ರಸ್ಟಿಗಳ ಬಳಿಯಿದ್ದ ಚಿನ್ನಾಭರಣ, ಬೆಳ್ಳಿ, ಟ್ರಸ್ಟ್ ಮತ್ತು ದೇವಾಲಯದ ದಾಖಲೆ, ಬ್ಯಾಂಕು ಪುಸ್ತಕ ಸೇರಿದಂತೆ ವಿವಿಧ ದಾಖಲೆಗಳನ್ನು ವಶಕ್ಕೆ ಪಡೆದು ಟ್ರಸ್ಟ್ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ಗೆ ಸೂಚಿಸಿದರು.೮ ಬ್ಯಾಂಕಿನಲ್ಲಿ ಟ್ರಸ್ಟ್‌ನ ಚಾಲ್ತಿ ಖಾತೆ..

ಬೆಂಗಳೂರಿನ ಶ್ರೀಗಂಧ, ರಾಜಾಜಿನಗರದ ಜನಹಿತ ಬ್ಯಾಂಕು, ತುಮಕೂರು ಕೆಂಪೇಗೌಡ ಪತ್ತಿನ ಸಹಕಾರ ಬ್ಯಾಂಕು, ಕೊರಟಗೆರೆಯ ಕೆನರಾ, ಕುಂಚಶ್ರೀ, ಕರ್ನಾಟಕ, ಎಸ್‌ಬಿಎಂ ಬ್ಯಾಂಕು, ವಡ್ಡಗೆರೆಯ ವಿಎಸ್‌ಎಸ್‌ಎಲ್ ಬ್ಯಾಂಕು ಸೇರಿದಂತೆ ೮ ಬ್ಯಾಂಕಿನಲ್ಲಿ ವಡ್ಡಗೆರೆ ಶ್ರೀವೀರನಾಗಮ್ಮ ದೇವಾಲಯ ಟ್ರಸ್ಟ್‌ನಲ್ಲಿ ಚಾಲ್ತಿ ಖಾತೆಗಳಿದ್ದು ಮುಜರಾಯಿ ಇಲಾಖೆಗೆ ಗೊತ್ತಿಲ್ಲದೇ ಅನಧಿಕೃತವಾಗಿ ಕೋಟ್ಯತರ ರು. ವಹಿವಾಟು ನಡೆದಿದೆ.ಧಾರ್ಮಿಕದತ್ತಿ ಇಲಾಖೆಗೆ ದೂರು..ಮುಜರಾಯಿ ಇಲಾಖೆಗೆ ಮಾಹಿತಿಯೇ ನೀಡದೆ ಟ್ರಸ್ಟ್ ಮಾಡಿರುವುದು ಅಕ್ರಮ. ಟ್ರಸ್ಟ್‌ನಲ್ಲಿ ಒಂದೇ ಸಮುದಾಯದ ೧೪ಜನ ಟ್ರಸ್ಟಿ ಇರುವುದು ಕಾನೂನು ಬಾಹಿರ. ಭಕ್ತರ ನೀಡಿರುವ ಬೆಳ್ಳಿ ಬಂಗಾರ ಟ್ರಸ್ಟಿಗಳ ಮನೆಯಲ್ಲಿದೆ. ಭಕ್ತರು ನೀಡುವ ಕಾಣಿಕೆಯ ಹಣ ಟ್ರಸ್ಟಿಗಳ ಪೋನ್‌ಪೇ, ಗೋಗಲ್‌ಪೇಗೆ ಹಾಕಿಸಿಕೊಳ್ತಾರೇ. ಬಂಗಾರ-ಬೆಳ್ಳಿ ಕಳ್ಳತನದ ದೂರು ದಾಖಲಾಗಿಲ್ಲ. ಕಾಮಗಾರಿಗೆ ೭೦ಲಕ್ಷ ಬಿಲ್ ಮಾಡಿದ್ದಾರೆ. ಪ್ರತಿವರ್ಷ ಆಡಿಟ್ ಮತ್ತು ಸಭಾ ನಡವಳಿಕೆಯೆ ಮಾಡಿಸಿಲ್ಲ ಎಂಬ ೧೫ಕ್ಕೂ ಅಧಿಕ ಅಕ್ರಮದ ಬಗ್ಗೆ ದಾಖಲೆ ಸಮೇತ ಬೆಂಗಳೂರು ಧಾರ್ಮಿಕ ದತ್ತಿ ಇಲಾಖೆಗೆ ಸಾರ್ವಜನಿಕರು ದೂರು ಸಲ್ಲಿಸಿದ್ದರು.ವೀರನಾಗಮ್ಮ ಟ್ರಸ್ಟ್ ಅಧ್ಯಕ್ಷ ರಾಜಿನಾಮೆ.ವಡ್ಡಗೆರೆಯ ವೀರನಾಗಮ್ಮ ದೇವಾಲಯ ಟ್ರಸ್ಟ್‌ಗೆ ಸೇರಿದ ಸದಸ್ಯರಾದ ವಿ.ನಾಗೇಶ್, ಶಿವಕುಮಾರ್ ಮತ್ತು ಮಾರುತೀಶ್ ಸೇರಿಕೊಂಡು ಲಕ್ಷಾಂತರ ರು ದುರುಪಯೋಗ ಮಾಡಿದ್ದಾರೆ. ಸಮಿತಿಯ ಲೆಕ್ಕಕ್ಕೆ ನೀಡದೆ ವಂಚನೆ ಮಾಡಿರುವ ಪರಿಣಾಮ ಮನನೊಂದು ತನ್ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ೨೦೨೫ರ ಏ.೨೫ರಂದು ಮುಜರಾಯಿ ಇಲಾಖೆಗೆ ನೀಡಿರುವ ಪತ್ರ ತನಿಖೆಗೆ ಬಂದಿದ್ದು ಅಧಿಕಾರಿಗಳಿಗೆ ದೊರೆತಿದೆ.ಕೋಟ್.... ಅಭಿವೃದ್ಧಿಯ ಜವಾಬ್ದಾರಿ ನಮ್ಮದೇ ಆಗಿದೆ. ಅಭಿವೃದ್ಧಿಯ ಹಿತದೃಷ್ಟಿಯಿಂದ ಸಮಿತಿಯನ್ನೇ ಟ್ರಸ್ಟ್ ಮಾಡಿಕೊಂಡ ಹಿರಿಯರ ಆದೇಶದಂತೆ ನಾವು ಕೆಲಸ ಮಾಡಿದ್ದೀವಿ. ಮುಜರಾಯಿ ದೇವಾಲಯ ಎಂಬ ವಿಚಾರ ನಮಗೆ ಗೊತ್ತು. ಟ್ರಸ್ಟ್‌ನ ದಾಖಲೆ, ಬಂಗಾರ ಮತ್ತು ಬೆಳ್ಳಿ ಇಲಾಖೆಗೆ ಒಪ್ಪಿಸಿದ್ದೇವೆ. ನಮ್ಮ ದೃಷ್ಟಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ತನಿಖೆ ಆಗಲಿ ನಮ್ಮದೇನು ತಕರ್‍ಯಾರು ಇಲ್ಲ.ಶಿವಕುಮಾರ್, ಟ್ರಸ್ಟಿ. ವೀರನಾಗಮ್ಮ ಟ್ರಸ್ಟ್ ವಡ್ಡಗೆರೆ--------------------ವೀರನಾಗಮ್ಮ ದೇವಾಲಯ ಟ್ರಸ್ಟ್ ಕಾನೂನು ಪ್ರಕಾರ ಯಾವ ಕೆಲಸವನ್ನು ಮಾಡಿಲ್ಲ. ಕಾಣಿಕೆಯ ಹಣದಲ್ಲಿ ಅವ್ಯವಹಾರ ಆಗಿರೋದು ಸಾಬೀತಾಗಿದೆ. ವೀರನಾಗಮ್ಮ ಟ್ರಸ್ಟ್ ಕಚೇರಿ ಸೀಜ್ ಮಾಡಿ ಬಂಗಾರ, ಬೆಳ್ಳಿ ಮತ್ತು ದಾಖಲೆ ವಶಕ್ಕೆ ಪಡೆಯಲಾಗಿದೆ. ಟ್ರಸ್ಟ್‌ಗೆ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲು ತಹಸೀಲ್ದಾರ್ ಅವರಿಗೆ ಸೂಚಿಸಲಾಗಿದೆ. ದೇವಾಲಯದ ದೈನಂದಿನ ಪೂಜಾ ಕಾರ್ಯಕ್ರಮದ ಜವಾಬ್ದಾರಿ ತಹಸೀಲ್ದಾರ್‌ಗೆ ವಹಿಸಲಾಗಿದೆ.- ಪದ್ಮಾ, ಕೇಂದ್ರ ಸ್ಥಾನಿಕ ಸಹಾಯಕಿ, ಧಾರ್ಮಿಕ ದತ್ತಿ ಇಲಾಖೆ. ಬೆಂಗಳೂರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ