ವಾಜಪೇಯಿ-100: ಅಟಲ್‌ಜೀ ಅಮರ್ ರಹೇ..

KannadaprabhaNewsNetwork |  
Published : Dec 26, 2024, 01:01 AM IST
25ಕೆಡಿವಿಜಿ4-ದಾವಣಗೆರೆ ಜಿಪಂ ಮುಂಭಾಗ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನವನ್ನು ಬಿಜೆಪಿಯಿಂದ ಆಚರಿಸಲಾಯಿತು. ...................25ಕೆಡಿವಿಜಿ5-ದಾವಣಗೆರೆ ಜಿಪಂ ಮುಂಭಾಗ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನದ ಅಂಗವಾಗಿ ಬಿಜೆಪಿಯಿಂದ  ಲಾರಿ ಇತರೆ ವಾಹನ ಚಾಲಕರಿಗೆ ಸಿಹಿ ವಿತರಿಸಲಾಯಿತು. | Kannada Prabha

ಸಾರಾಂಶ

ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ನಿರ್ಮಾತೃ, ಅಜಾತಶತೃ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ವರ್ಷದ ಜನ್ಮದಿನಾಚರಣೆಯನ್ನು ನಗರದ ಹೊರವಲಯದ ಜಿಲ್ಲಾ ಪಂಚಾಯಿತಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿ-48ರ ಬದಿ ಬುಧವಾರ ಬೆಳಗ್ಗೆ ಬಿಜೆಪಿ ಜಿಲ್ಲಾ ಘಟಕದಿಂದ ಆಚರಿಸಲಾಯಿತು.

- ಸುವರ್ಣ ಚತುಷ್ಪಥ ರೂವಾರಿ ಮಾಜಿ ಪ್ರಧಾನಿ ವಾಜಪೇಯಿ ಜನ್ಮದಿನ । ಬಿಜೆಪಿ ಮುಖಂಡರಿಂದ ಗುಣಗಾನ- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ನಿರ್ಮಾತೃ, ಅಜಾತಶತೃ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ವರ್ಷದ ಜನ್ಮದಿನಾಚರಣೆಯನ್ನು ನಗರದ ಹೊರವಲಯದ ಜಿಲ್ಲಾ ಪಂಚಾಯಿತಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿ-48ರ ಬದಿ ಬುಧವಾರ ಬೆಳಗ್ಗೆ ಬಿಜೆಪಿ ಜಿಲ್ಲಾ ಘಟಕದಿಂದ ಆಚರಿಸಲಾಯಿತು.

ವಾಜಪೇಯಿ ಭಾವಚಿತ್ರಕ್ಕೆ ಹರಿಹರ ಶಾಸಕ ಬಿ.ಪಿ.ಹರೀಶ, ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಚಂದ್ರಶೇಖರ ಪೂಜಾರ, ಲೋಕಿಕೆರೆ ನಾಗರಾಜ, ಪಿ.ಸಿ. ಶ್ರೀನಿವಾಸ ಭಟ್ ಇತರರು ಮಾಲಾರ್ಪಣೆ, ಪುಷ್ಪಾರ್ಚನೆ ಮಾಡಿ, ಅಟಲ್‌ಜೀ ಅಮರ್ ರಹೇ ಎಂಬ ಘೋಷಣೆ ಕೂಗಿದರು.

ಪಕ್ಷದ ಮುಖಂಡರು ಇದೇ ವೇಳೆ ಮಾತನಾಡಿ, ವಾಜಪೇಯಿ ಅವರು ಸಂತ ನಡೆಯ ಅಜಾತಶತೃ, ಶ್ರೇಷ್ಠ ಸಂಸದೀಯ ಪಟು, ಮುತ್ಸದ್ದಿ ನಾಯಕ, ಧೀಮಂತ ಆಡಳಿತಗಾರರಾಗಿದ್ದರು. ನವಭಾರತ ನಿರ್ಮಾಣಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಸುವರ್ಣ ಚತುಷ್ಪಥ ನಿರ್ಮಿಸುವ ಮೂಲಕ ತಮ್ಮದೇ ಕೊಡುಗೆ ನೀಡಿದ್ದರು. ಇಡೀ ಜಗತ್ತೇ ಭಾರತದತ್ತ ಕುತೂಹಲದಿಂದ ನೋಡುವಂತೆ ಪ್ರೋಕ್ರಾನ್‌ನಲ್ಲಿ ಭಾರತದ ಸಾಧನೆ ಮೆರೆದಿದ್ದರು ಎಂದರು.

ದೇಶ, ದೇಶಪ್ರೇಮ, ದೇಶದ ಸೈನಿಕರು, ರೈತರು, ಜನಸಾಮಾನ್ಯರು, ಹೀಗೆ ಎಲ್ಲರ ಹಿತಕಾಯುತ್ತಿದ್ದ ಅಟಲ್, ದೇಶ ಕಂಡ ಮಹಾನ್ ನಾಯಕರಲ್ಲಿ ಒಬ್ಬರು. ವಾಜಪೇಯಿ, ಜಾರ್ಜ್ ಫರ್ನಾಂಡೀಸ್‌, ಭಾರತದ ಕ್ಷಿಪಣಿಗಳ ಜನಕ ಡಾ. ಎ.ಪಿ.ಜೆ. ಕಲಾಂ ಅವರಂತಹ ಹಿರಿಯ ನಾಯಕರು ಆ ಕಾಲಘಟ್ಟದಲ್ಲಿ ಭಾರತದ ಶಕ್ತಿ ಏನೆಂಬುದನ್ನು ಜಗತ್ತಿಗೆ ಸಾರಿ ಸಾರಿ ಹೇಳುವಂತೆ ದೇಶ‍ವನ್ನು ಮುನ್ನಡೆಸಿದರು ಎಂದು ಸ್ಮರಿಸಿದರು.

ಅಟಲ್ ಜೀಯವರ 100ನೇ ಜನ್ಮದಿನವನ್ನು ದೇಶಾದ್ಯಂತ ಜನತೆಗೆ ಸುಶಾಸನ ದಿನವಾಗಿ ಆಚರಿಸಲಾಗುತ್ತಿದೆ. ಸಶಕ್ತ ರಾಷ್ಟ್ರ ನಿರ್ಮಾಣದಲ್ಲಿ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಅಟಲ್‌ಜೀ ಅವರ 100ನೇ ಜನ್ಮದಿನ ಆಚರಿಸಲಾಗುತ್ತಿದೆ. ವಾಜಪೇಯಿ ಕನಸಿನ ಯೋಜನೆಯಾಗಿದ್ದ ನದಿಗಳ ಜೋಡಣೆಯತ್ತಲೂ ಕೇಂದ್ರ ಸರ್ಕಾರ ಮುಂದಾಗಿದೆ. ವಾಜಪೇಟಿ ಹಾಕಿಕೊಟ್ಟ ಮಾರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೆಬಾಳು, ಅನಿಲಕುಮಾರ ನಾಯ್ಕ, ಐರಣಿ ಅಣ್ಣೇಶ, ನಿಕಟ ಪೂರ್ವ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಪಾಲಿಕೆ ಸದಸ್ಯರಾದ ಕೆ.ಎಂ. ವೀರೇಶ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಎಚ್.ಎನ್.ಶಿವಕುಮಾರ, ಶಿವರಾಜ ಪಾಟೀಲ, ಸಿದ್ದೇಶ, ಎಚ್.ಪಿ.ವಿಶ್ವಾಸ, ಶಾಮನೂರು ಪ್ರವೀಣ, ಎನ್.ಎಚ್.ಹಾಲೇಶ, ಹನುಮಂತಪ್ಪ, ಶಿವನಗೌಡ ಟಿ.ಪಾಟೀಲ, ಬಸವರಾಜ, ಟಿಂಕರ್ ಮಂಜಣ್ಣ, ಕಿಶೋರಕುಮಾರ್, ಶಾಮನೂರು ರಾಜು, ಹರೀಶ, ಪಂಜು ಪೈಲ್ವಾನ್, ಪ್ರವೀಣ ಜಾಧವ್‌, ನವೀನ, ಗುರು ಸೋಗಿ, ಡಾ.ನಸೀರ್ ಅಹಮ್ಮದ್‌, ಮುಖಂಡರು, ಹಿರಿಯರು, ಕಾರ್ಯಕರ್ತರು ಇದ್ದರು. ಇದೇ ವೇಳೆ ಲಾರಿ ಮತ್ತಿತರೆ ವಾಹನಗಳ ಚಾಲಕರಿಗೆ ಸಿಹಿ ವಿತರಿಸಲಾಯಿತು.

- - - -25ಕೆಡಿವಿಜಿ4.ಜೆಪಿಜಿ:

ದಾವಣಗೆರೆ ಜಿಪಂ ಮುಂಭಾಗ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಬಿಜೆಪಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನ ಆಚರಿಸಲಾಯಿತು. -25ಕೆಡಿವಿಜಿ5:

ದಾವಣಗೆರೆ ಜಿಪಂ ಮುಂಭಾಗ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಜನ್ಮದಿನದ ಅಂಗವಾಗಿ ಬಿಜೆಪಿಯಿಂದ ವಾಹನಗಳ ಚಾಲಕರಿಗೆ ಸಿಹಿ ವಿತರಿಸಲಾಯಿತು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...