ಭಾರತವನ್ನು ಬಲಿಷ್ಠವಾಗಿಸಿದ ಕೀರ್ತಿ ವಾಜಪೇಯಿಯವರದ್ದು: ಬಿಜೆಪಿ ಜಿಲ್ಲಾ ಅಧ್ಯಕ್ಷ ಓಂಶಕ್ತಿ ಚಲಪತಿ

KannadaprabhaNewsNetwork |  
Published : Dec 26, 2025, 01:00 AM IST
೨೫ಕೆಎಲ್‌ಆರ್-೩ಕೋಲಾರದ ಡೂಮ್ ಲೈಟ್ ವೃತ್ತದಲ್ಲಿ ದಿ||ಪ್ರಧಾನಿ ಆಟಲ್ ಬಿಹಾರಿ ವಾಜಪೇಯಿ ೧೦೧ನೇ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಓಂಶಕ್ತಿ ಚಲಪತಿ ಚಾಲನೆ ನೀಡಿ ಮಾತನಾಡಿದರು. | Kannada Prabha

ಸಾರಾಂಶ

ಇದೇ ವೇಳೆ ಬಾಂಗ್ಲಾ ದೇಶದ ಹಿಂದೂ ಯುವಕ ದೀಪ ಚಂದ್ರ ದಾಸ್ ಹತ್ಯೆ ಖಂಡಿಸಿ ಎರಡು ನಿಮಿಷಗಳ ಕಾಲ ಮೌನಾಚರಣೆ ನಡೆಸಿ ಸಂತಾಪ ಸೂಚಿಸಿದರು. ಆಗ್ನಿಪಥ್ ಅಗ್ನಿ ವೀರರಿಗೆ ತರಬೇತಿ ನೀಡುತ್ತಿರುವ ಕೃಷ್ಣಮೂರ್ತಿ ಹಾಗೂ ಮುನಿಯಪ್ಪ. ಕಿರಣ್‌ರನ್ನು ಸನ್ಮಾನಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರ

ವಿಶ್ವಕ್ಕೆ ಭಾರತದ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಿದ್ದು ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಓಂಶಕ್ತಿ ಚಲಪತಿ ತಿಳಿಸಿದರು.

ನಗರದ ಡೂಮ್‌ಲೈಟ್ ವೃತ್ತದಲ್ಲಿ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿಯವರ ೧೦೧ನೇ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 25 ವರ್ಷಗಳ ಹಿಂದೆ ದೊಡ್ಡಣ್ಣ ಎನಿಸಿಕೊಂಡಿದ್ದ ಅಮೆರಿಕಾ ದೇಶದ ಕಣ್ಣು ತಪ್ಪಿಸಿ ಏನೊಂದು ಮಾಡುವ ಹಾಗಿರಲಿಲ್ಲ, ಅಂತಹ ಸಂದರ್ಭದಲ್ಲಿ ಭಾರತದ ಆಡಳಿತ ಚುಕ್ಕಾಣಿ ಹಿಡಿದಿದ್ದ ವಾಜಪೇಯಿಯವರು, ನಮ್ಮ ದೇಶದಲ್ಲಿ ಪೋಕ್ರಾನ್ ಅಣುಬಾಂಬ್ ಯಶಸ್ವಿಯಾಗಿ ಪ್ರಯೋಗಿಸುವ ಮೂಲಕ ಶತ್ರು ದೇಶಗಳಿಗೆ, ನಾವು ಯಾರಿಗೂ ತಲೆಬಾಗುವವರಲ್ಲ, ಭಾರತದ ತಂಟೆಗೆ ಬಂದರೆ ಯಾರೇ ಅದರೂ ಪಾಠ ಕಲಿಸದೆ ಬಿಡುವವರಲ್ಲ ಎಂಬ ಖಡಕ್ ಎಚ್ಚರಿಕೆ ಸಂದೇಶ ನೀಡುವ ಮೂಲಕ ಭಾರತದ ಆತ್ಮಸ್ಥೆರ್ಯ ಹಾಗೂ ಧೈರ್ಯ, ಶೌರ್ಯ ಪ್ರದರ್ಶಿಸಿದರು ಎಂದು ನುಡಿದರು. ಭಾರತೀಯ ಜನತಾ ಪಕ್ಷವು ಸಂಸತ್‌ನಲ್ಲಿ ಕೇವಲ ಬೆರಳೆಣಿಕೆಯ ಸ್ಥಾನಗಳಿದ್ದಿದ್ದನ್ನು 305 ಸ್ಥಾನಗಳಿಗೆ ಏರಿಕೆ ಮಾಡುವಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಘಟನೆಯ ಶ್ರಮ ಅಪಾರವಾಗಿದೆ. ವಾಜಪೇಯಿಯವರು ಅಜಾತ ಶತ್ರು, ಸದಾ ಹಸನ್ಮುಖಿಯಾಗಿ ಯಾವುದೇ ಸಮಸ್ಯೆಗಳು ಎದುರಾದರೂ ಎಲ್ಲವನ್ನೂ ನಗುತ್ತಲೇ ಪರಿಹರಿಸುವಂಥ ಪ್ರಬುದ್ಧತೆ ಅವರಲ್ಲಿತ್ತು ಎಂದು ಸ್ಮರಿಸಿದರು.

ಜೆಡಿಎಸ್ ಮುಖಂಡ ಸಿ.ಎಂ.ಆರ್. ಶ್ರೀನಾಥ್ ಮಾತನಾಡಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಕ್ಷಾತೀತ, ಜಾತ್ಯತೀತ, ಧರ್ಮಾತೀತ ಸರ್ವ ಶ್ರೇಷ್ಠ ನಾಯಕರಾಗಿದ್ದು ಕವಿಗಳು, ಸಾಹಿತಿಗಳು, ಚಿಂತಕರು ಹಾಗೂ ಪ್ರಜ್ಞಾವಂತರಾಗಿದ್ದರು. ಸರ್ವ ಶ್ರೇಷ್ಠ ಸಂಸದಿಯ ಪಟುವಾಗಿದ್ದು, ಪಕ್ಷಾತೀತವಾಗಿ ಎಲ್ಲರ ಮನ ಗೆದ್ದ ನಾಯಕರಾಗಿದ್ದರು. ಆವರ ಆಡಳಿತದಲ್ಲಿ ಅನೇಕ ಕ್ರಾಂತಿಕಾರಿ ನಿರ್ಧಾರಗಳ ಮೂಲಕ ಬದಲಾವಣೆ ತಂದು ಭಾರತವನ್ನು ವಿಶ್ವಮಟ್ಟದಲ್ಲಿ ಮುಂಚೂಣಿಗೆ ತಂದವರು ಎಂದರು.

ವಾಜಪೇಯಿರು ಭಾರತದ ಭವಿಷ್ಯದ ದೂರದೃಷ್ಟಿ ಹೊಂದಿದ್ದರು. ಅವರ ಅಭಿವೃದ್ಧಿ ಕನಸುಗಳು ಹಾಗೂ ಚಿಂತನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ನನಸು ಮಾಡುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಅದ್ಬುತವಾದ ಕಲ್ಪನೆಯ ಅಭಿವೃದ್ದಿ ಪಥದಲ್ಲಿ ಸಾಗಿ ಸಮೃದ್ಧ ಭಾರತವನ್ನು ನಿರ್ಮಾಣ ಮಾಡಿದ್ದಾರೆ ಎಂದರು.

ಭಾರತದ ಅಭಿವೃದ್ಧಿಯು ಯಾವುದೇ ಒಂದು ಪಕ್ಷಕ್ಕೆ ಸೀಮಿತವಲ್ಲ, ಜವಾಬ್ದಾರಿಯೂ ಅಲ್ಲ. ದೇಶದ ಅಭಿವೃದ್ಧಿಯಲ್ಲಿ ಕೈ ಜೋಡಿಸುವುದು ಪ್ರತಿಯೋರ್ವ ಭಾರತೀಯನ ಕರ್ತವ್ಯವಾಗಿದ್ದು, ಸರ್ವಾಂಗೀಣ ಅಭಿವೃದ್ಧಿಯ ನವಭಾರತ ಕಟ್ಟುವಂತಾಗಬೇಕು ಎಂದು ಕರೆ ನೀಡಿದರು.

ಇದೇ ವೇಳೆ ಬಾಂಗ್ಲಾ ದೇಶದ ಹಿಂದೂ ಯುವಕ ದೀಪ ಚಂದ್ರ ದಾಸ್ ಹತ್ಯೆ ಖಂಡಿಸಿ ಎರಡು ನಿಮಿಷಗಳ ಕಾಲ ಮೌನಾಚರಣೆ ನಡೆಸಿ ಸಂತಾಪ ಸೂಚಿಸಿದರು. ಆಗ್ನಿಪಥ್ ಅಗ್ನಿ ವೀರರಿಗೆ ತರಬೇತಿ ನೀಡುತ್ತಿರುವ ಕೃಷ್ಣಮೂರ್ತಿ ಹಾಗೂ ಮುನಿಯಪ್ಪ. ಕಿರಣ್‌ರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಮಾಗೇರಿ ನಾರಾಯಣಸ್ವಾಮಿ, ಎಸ್.ಬಿ.ಮುನಿವೆಂಕಟಪ್ಪ, ಯಶೋಧಮ್ಮ, ಕೆಂಬೋಡಿ ನಾರಾಯಣಸ್ವಾಮಿ, ಮು.ರಾಘವೇಂದ್ರ, ನಗರಸಭೆ ಮಾಜಿ ಸದಸ್ಯ ರಾಕೇಶ್‌ಗೌಡ, ಶಿಳ್ಳೆಂಗೇರಿ ಮಹೇಶ್, ರಾಜೇಶ್ ಸಿಂಗ್, ಹಾರೋಹಳ್ಳಿ ವೆಂಕಟೇಶ್, ವೇಮಗಲ್ ಓಹಿಲೇಶ್, ತಿಮ್ಮರಾಯಪ್ಪ. ಶ್ರೀನಿವಾಸಪ್ಪ, ಸಾ.ಮಾ.ಅನಿಲ್ ಬಾಬು, ನಾಮಾಲ್ ಮಂಜು, ಅಂಬರೀಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಟಲ್ ಬಿಹಾರಿ ವಾಜಪೇಯಿ ಮೌಲ್ಯಾಧಾರಿತ ರಾಜಕಾರಣಿ
ಮಾಗಡಿಯಲ್ಲಿ ಪತ್ರಕರ್ತರ ಭವನಕ್ಕೆ ಭೂಮಿಪೂಜೆ