‘ವಳಲಂಕೆ ಫೈಟರ್ಸ್ ಮೂಲ್ಕಿ’ ಮುಡಿಗೆ 8ನೇ ಜಿಪಿಎಲ್ ಟ್ರೋಫಿ

KannadaprabhaNewsNetwork |  
Published : Feb 29, 2024, 02:01 AM IST
ಜಿಪಿಎಲ್‌ ಟ್ರೋಫಿ ವಿತರಿಸುತ್ತಿರುವುದು. | Kannada Prabha

ಸಾರಾಂಶ

ಫೈನಲ್ ಪಂದ್ಯದ ಮೊದಲು ವಿಶೇಷ ಚೇತನ ಹುಡುಗರ ಕ್ರಿಕೆಟ್ ಪಂದ್ಯ ನಡೆದಿದ್ದು, ಕುಡ್ಲ ಟೈಗರ್ಸ್ ರನ್ನರ್ ಅಪ್ ಹಾಗೂ ಮಂಗಳೂರು ಸೂಪರ್ ಕಿಂಗ್ಸ್ ವಿಜೇತರಾದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕೊಡಿಯಾಲ್ ಸ್ಪೋರ್ಟ್ಸ್‌ ಎಸೋಸಿಯೇಶನ್ ವತಿಯಿಂದ ಅಡ್ಯಾರು ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ನಡೆದ 8ನೇ ವರ್ಷದ ಜಿಪಿಎಲ್ ಕ್ರಿಕೆಟ್ ಕೂಟದ 2024ರ ಟ್ರೋಫಿಯನ್ನು ‘ವಳಲಂಕೆ ಫೈಟರ್ಸ್ ಮೂಲ್ಕಿ’ ತಂಡ ಗೆದ್ದುಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬಳ್ಳಂಬೆಟ್ಟು ತಂಡದ ಖಾತೆ ತೆರೆಯುವ ಮುನ್ನವೇ ಮೊದಲ ವಿಕೆಟ್ ಪತನಗೊಂಡಿತು. ವಳಲಂಕೆ ಫೈಟರ್ಸ್ ತಂಡದ ಪಂಚಮ್ ಭಟ್ ಅವರ ನಿಖರ ದಾಳಿಗೆ ತತ್ತರಿಸಿದ ಆರ್‌ಸಿಬಿ ತಂಡ, ನಿಗದಿತ ಏಳು ಓವರ್‌ಗಳಲ್ಲಿ 38 ರನ್ ಗಳಿಸಿ ಏಳು ವಿಕೆಟ್ ಕಳೆದುಕೊಂಡು ಸುಲಭದ ಟಾರ್ಗೆಟ್‌ನ್ನು ಎದುರಾಳಿಗೆ ನೀಡಿತು. ಸಾಮಾನ್ಯ ಮೊತ್ತವನ್ನು ಬೆನ್ನತ್ತಿದ್ದ ವಳಲಂಕೆ ಫೈಟರ್ಸ್ ಐದು ಓವರ್ ಮುಗಿಯಲು ಎರಡು ಎಸೆತಗಳು ಇರುವಾಗಲೇ ಗೆಲುವಿನ ಗುರಿಯನ್ನು ಸಾಧಿಸಿತು.

ವಿಜೇತ ತಂಡದ ಪಂಚಮ್ ಭಟ್ ಪಂದ್ಯಶ್ರೇಷ್ಠ ಹಾಗೂ ಸರಣಿಯ ಅತ್ಯುತ್ತಮ ಬೌಲರ್ ಪ್ರಶಸ್ತಿಯನ್ನು ಗೆದ್ದುಕೊಂಡರೆ, ಜಿಆರ್‌ಎಸ್ ಮೈಸೂರ್ ವಾರಿಯರ್ಸ್ ತಂಡದ ದಿಪೇಶ್ ಶೆಣೈ ಅತ್ಯುತ್ತಮ ದಾಂಡಿಗ ಪ್ರಶಸ್ತಿ ಪಡೆದರು. ಅದೇ ತಂಡದ ರಕ್ಷಿತ್ ಶೆಣೈ ಸರಣಿಯ ಉದಯೋನ್ಮುಖ ಆಟಗಾರ ಪುರಸ್ಕಾರ ಸ್ವೀಕರಿಸಿದರು. ವಿಜೇತ ತಂಡದ ವಿಘ್ನೇಶ್ ಭಟ್ ಅವರಿಗೆ ಪೈ ಸೇಲ್ಸ್ ಪ್ರಾಯೋಜಿತ ಅವನೈರ್ ಸುಜುಕಿ ಮೋಟಾರ್ ಬೈಕ್ ನೀಡಿ ಗಣಪತಿ ಪೈ, ಅರುಣ್ ಪೈ ಅಭಿನಂದಿಸಿದರು. ಜಿಆರ್‌ಎಸ್ ಮೈಸೂರು ವಾರಿಯರ್ಸ್ ದ್ವಿತಿಯ ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡಿತು. ವಿಶೇಷ ಚೇತನರ ಪಂದ್ಯ:

ಫೈನಲ್ ಪಂದ್ಯದ ಮೊದಲು ವಿಶೇಷ ಚೇತನ ಹುಡುಗರ ಕ್ರಿಕೆಟ್ ಪಂದ್ಯ ನಡೆದಿದ್ದು, ಕುಡ್ಲ ಟೈಗರ್ಸ್ ರನ್ನರ್ ಅಪ್ ಹಾಗೂ ಮಂಗಳೂರು ಸೂಪರ್ ಕಿಂಗ್ಸ್ ವಿಜೇತರಾದರು.

ಸಮಾರೋಪ ಸಮಾರಂಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಕೊಡಿಯಾಲ್ ಸ್ಪೋರ್ಟ್ಸ್‌ ಎಸೋಸಿಯೇಶನ್ ಅಧ್ಯಕ್ಷ ಶಿವಾನಂದ ಶೆಣೈ, ಉದ್ಯಮಿಗಳಾದ ವಾಸುದೇವ್ ಕಾಮತ್, ಅನಂತ್ ಕಾಮತ್, ಗಣಪತಿ ಪೈ, ಅರುಣ್ ಪೈ, ರಾಘವೇಂದ್ರ ಕುಡ್ವ, ಪ್ರಮುಖರಾದ ಹನುಮಂತ ಕಾಮತ್, ಸಿಎ ಜಗನ್ನಾಥ ಕಾಮತ್, ಸಂದೇಶ್ ಕಾಮತ್, ನರಸಿಂಹ ಕಾಮತ್, ಆಯೋಜಕರಾದ ಮಂಗಲ್ಪಾಡಿ ನರೇಶ್ ಶೆಣೈ, ಚೇತನ್ ಕಾಮತ್, ನರೇಶ್ ಪ್ರಭು ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನರ ನಡುವಿನ ‘ಸಾಹೇಬ’
ಗ್ರೇಟರ್‌ ಬೆಂಗಳೂರು ಪಾಲಿಕೆಯ ಐದೂ ನಗರ ಪಾಲಿಕೆಗಳ ಆಯವ್ಯಯ ಮಂಡನೆ