ಡಾ. ಬಾಳಿಗಾ ಆಸ್ಪತ್ರೆಯಲ್ಲಿ ನವಜೀವನ ಲೇ ಕೌನ್ಸಿಲರ್ ನ ತರಬೇತಿ ಸಮಾರೋಪ

KannadaprabhaNewsNetwork |  
Published : Aug 19, 2026, 02:30 AM IST
17ಬಾಳಿಗಾ | Kannada Prabha

ಸಾರಾಂಶ

ಇಲ್ಲಿನ ದೊಡ್ಡಣಗುಡ್ಡೆ ಡಾ. ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆಯಲ್ಲಿ ಕಮಲ್ ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್ ಮತ್ತು ಒನ್ ಗುಡ್ ಸ್ಟೆಪ್ ಜಂಟಿ ಆಶ್ರಯದಲ್ಲಿ ನವಜೀವನ ಲೇ ಕೌನ್ಸಿಲರ್‌ನ 9ನೇ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ನಡೆಯಿತು.

ಉಡುಪಿ: ಇಲ್ಲಿನ ದೊಡ್ಡಣಗುಡ್ಡೆ ಡಾ. ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆಯಲ್ಲಿ ಕಮಲ್ ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್ ಮತ್ತು ಒನ್ ಗುಡ್ ಸ್ಟೆಪ್ ಜಂಟಿ ಆಶ್ರಯದಲ್ಲಿ ನವಜೀವನ ಲೇ ಕೌನ್ಸಿಲರ್‌ನ 9ನೇ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ನಡೆಯಿತು.

ಡಾ. ಎ.ವಿ. ಬಾಳಿಗ ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕ ಡಾ. ಪಿ.ವಿ. ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಣಿಪಾಲ ಕೆಎಂಸಿಯ ಫಿಸಿಯಾಲಜಿ ವಿಭಾಗದ ಮುಖ್ಯಸ್ಥೆ ಕೀರ್ತನ ಆರ್. ನಾಯಕ್ ಆಗಮಿಸಿದ್ದರು. ನವಜೀವನ ಲೇ ಕೌನ್ಸಿಲರ್‌ನ ತರಬೇತಿ ಕಾರ್ಯಾಗಾರದ ಸಂಯೋಜಕಿ, ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಸ್ವಾಗತಿಸಿದರು. ಆಸ್ಪತ್ರೆಯ ಭದ್ರತಾ ಸಿಬ್ಬಂದಿ ನಾಗವೇಣಿ ಪ್ರಾರ್ಥಿಸಿದರು, ಸೌಮ್ಯ ನಿರೂಪಿಸಿದರು. ತರಬೇತಿಯಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದ್ಭಾವನಾ ವೇದಿಕೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ನಿರಂತರ ಶ್ರಮದಿಂದ ಯಶಸ್ಸು: ಸಿಎ ರಾಘವೇಂದ್ರ ಶೆಟ್ಟಿ