ಮಾನವೀಯತೆ ಇಲ್ಲದೇ ಧರ್ಮವಿಲ್ಲ ಎಂದು ಪ್ರತಿಪಾದಿಸಿದ ವಾಲ್ಮೀಕಿ

KannadaprabhaNewsNetwork | Published : Oct 30, 2023 12:30 AM

ಸಾರಾಂಶ

ರಾಮಾಯಣ ಭಾರತೀಯರ ಜೀವನ ಚರಿತ್ರೆ ಮತ್ತು ಸಂಸ್ಕೃತಿ ಬಿಂಬಿಸುವ ಮಹಾಗ್ರಂಥವಾಗಿದೆ. ಅಖಂಡ ಭಾರತ ನಿರ್ಮಾಣಕ್ಕೆ ಮಹರ್ಷಿ ವಾಲ್ಮೀಕಿ ಕೊಡುಗೆ ಅಪಾರ. ಮಾನವೀಯತೆ ಇಲ್ಲದೇ ಧರ್ಮವಿಲ್ಲ ಎಂಬದನ್ನು ಪ್ರತಿಪಾದಿಸಿದ ದಾರ್ಶನಿಕರಾಗಿದ್ದು, ವಾಲ್ಮೀಕಿ ಅವರ ಜೀವನಚರಿತ್ರೆ ಅನುಕರಣೀಯವೆಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ರಾಮಾಯಣ ಭಾರತೀಯರ ಜೀವನ ಚರಿತ್ರೆ ಮತ್ತು ಸಂಸ್ಕೃತಿ ಬಿಂಬಿಸುವ ಮಹಾಗ್ರಂಥವಾಗಿದೆ. ಅಖಂಡ ಭಾರತ ನಿರ್ಮಾಣಕ್ಕೆ ಮಹರ್ಷಿ ವಾಲ್ಮೀಕಿ ಕೊಡುಗೆ ಅಪಾರ. ಮಾನವೀಯತೆ ಇಲ್ಲದೇ ಧರ್ಮವಿಲ್ಲ ಎಂಬದನ್ನು ಪ್ರತಿಪಾದಿಸಿದ ದಾರ್ಶನಿಕರಾಗಿದ್ದು, ವಾಲ್ಮೀಕಿ ಅವರ ಜೀವನಚರಿತ್ರೆ ಅನುಕರಣೀಯವೆಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಎಸ್.ಟಿ. ಸಮುದಾಯದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ನಂತರ ಮಾತನಾಡಿದರು. ವಿಶ್ವಕ್ಕೆ ರಾಮಾಯಣವೆಂಬ ಮಹಾನ್‌ ಗ್ರಂಥ ನೀಡಿದ ವಾಲ್ಮೀಕಿ ಸರ್ವಕಾಲಕ್ಕೂ ಸಲ್ಲುವ ಪೂಜ್ಯನೀಯ ವ್ಯಕ್ತಿಯಾಗಿದ್ದಾರೆ. ಇಂತಹ ಮಹರ್ಷಿಗಳನ್ನು ಪ್ರತನಿಧಿಸುತ್ತಿರುವ ವಾಲ್ಮೀಕಿ ಸಮುದಾಯ ಜನರ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ದವಾಗಿದ್ದು ಕ್ಷೇತ್ರದಲ್ಲಿನ ಸಮುದಾಯದ ಜನರ ಸೇವೆಗೆ ಸದಾ ಸಿದ್ಧವಿರುವುದಾಗಿ ಭರವಸೆ ನೀಡಿದರು.

ಉಪನ್ಯಾಸ ನೀಡಿದ ಡಾ. ರಮೇಶ ತೆವರಿ ಮಾತನಾಡಿ, ಶಾಂತಿ, ಸಹಬಾಳ್ವೆ, ಅಹಿಂಸೆಯನ್ನು ಪ್ರತಿಪಾದಿಸಿದ್ದ ವಾಲ್ಮೀಕಿಯಿಂದ ಪಂಪ, ರನ್ನ, ಪೊನ್ನ, ಹರಿಹರ, ರಾಘವಾಂಕ ಮತ್ತಿತರ ಮಹಾನ್ ಕವಿಗಳು ಬೆಳಕಿಗೆ ಬರಲು ಕಾರಣವಾಯಿತು ಎಂದರು.

ಪಟ್ಟಣದ ವಾಲ್ಮೀಕಿ ಸಮುದಾಯ ಭವನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವುದು ಸೇರಿದಂತೆ ಸಮಾಜಕ್ಕೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸುವಂತೆ ಶಾಸಕ ಬಸವರಾಜ ಶಿವಣ್ಣನವರಗೆ ಸಮಾಜದ ಮುಖಂಡರು ಮನವಿ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸುರೇಶಗೌಡ ಪಾಟೀಲ, ತಹಸೀಲ್ದಾರ ಎಸ್.ಎ. ಪ್ರಸಾದ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ, ಪಿಎಸ್‌ಐ ಮಂಜುನಾಥ ಕುಪ್ಪೇಲೂರ, ಮುಖಂಡರಾದ ಹೊನ್ನೂರಪ್ಪ ಕಾಡಸಾಲಿ, ರಾಮಣ್ಣ ಕೋಡಿಹಳ್ಳಿ, ಹನುಮಂತಪ್ಪ ಮ್ಯಾಗೇರಿ, ಫಕ್ಕೀರಮ್ಮ ಛಲವಾದಿ, ದಾನಪ್ಪ ಚೂರಿ, ಚನಬಸಪ್ಪ ಹುಲ್ಲತ್ತಿ ನೀಲಕಂಠಪ್ಪ ಪಾಸಿ, ಶಾಂತಪ್ಪ ದೊಡ್ಡಮನಿ, ಮಲ್ಲೇಶಪ್ಪ ಒಳಗುಂದಿ, ಬಸವರಾಜ ಭೀಮನಾಯಕರ, ಶಿವರಾಮ ಹೊನ್ನಳ್ಳಿ, ರಮೇಶ್ ಕೋಟಿ, ಸೋಮು ಕರ್ಚಡ, ಹನುಮಂತಪ್ಪ ನಾಯಕ, ಸಮಾಜ ಕಲ್ಯಾಣಾಧಿಕಾರಿ ಜಿ. ದೊಡ್ಡಬಸನಗೌಡ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಸಮುದಾಯದ ಮುಖಂಡರು ಭಾಗವಹಿಸಿದ್ದರು.

ಆನಂದ ಮುದುಕಮ್ಮನವರ ಸ್ವಾಗತಿಸಿದರು. ಶಿವಾನಂದ ಯಮನಕ್ಕವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಬೆಳಕೇರಿ ವಂದಿಸಿದರು.

ಕಾರ್ಯಕ್ರಮದಲ್ಲಿ ಪರೀಕ್ಷೆ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಬೆಳಗ್ಗೆ ಮಾರಿಕಾಂಬಾ ದೇವಸ್ಥಾನದಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರವನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು.

Share this article