ಲೋಕ ಕಲ್ಯಾಣಕ್ಕಾಗಿ ರಾಮಾಯಣ ಮಹಾಗ್ರಂಥ ಅರ್ಪಿಸಿದ ವಾಲ್ಮೀಕಿ

KannadaprabhaNewsNetwork |  
Published : Oct 18, 2024, 12:01 AM IST
ಕಾರ್ಯಕ್ರಮವನ್ನು ವಿಪ ಸದಸ್ಯ ಎಸ್.ವಿ.ಸಂಕನೂರ ಉದ್ಘಾಟಿಸಿದರು.  | Kannada Prabha

ಸಾರಾಂಶ

ಮಾನವೀಯ ಮೌಲ್ಯ ಜೀವನದಲ್ಲಿ ಅಳವಡಿಸಿಕೊಂಡು ಬದುಕು ರೂಪಿಸಿಕೊಳ್ಳುವ ಹಲವಾರು ವಿಷಯ ವಿವರಿಸಲಾಗಿದೆ.

ಗದಗ: ಮಹಾನ್ ತಪಸ್ವಿ ಮಹರ್ಷಿ ವಾಲ್ಮೀಕಿ ರಾಮಾಯಣ ಮಹಾಗ್ರಂಥ ರಚಿಸಿ ಲೋಕ ಕಲ್ಯಾಣಕ್ಕಾಗಿ ಅರ್ಪಿಸಿದವರು ಎಂದು ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರ ಹೇಳಿದರು.

ಅವರು ಗುರುವಾರ ಗದಗ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಗದಗ-ಬೆಟಗೇರಿ ಹಾಗೂ ಮಹರ್ಷಿ ವಾಲ್ಮೀಕಿ ಸಂಘದ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಡಳಿತ ಭವನದಲ್ಲಿ ಏರ್ಪಡಿಸಿದ್ದ ಶ್ರೀಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

ರಾಮಾಯಣ, ಮಹಾಭಾರತ ಕಾವ್ಯರೂಪದಲ್ಲಿ ರಚಿಸಿದ್ದಾರೆ. 2400 ಶ್ಲೋಕಗಳಿರುವ ಈ ಮಹಾ ಗ್ರಂಥ ರಚಿಸಿ ಜಗತ್ಪ್ರಸಿದ್ಧಿ ಹೊಂದಿದವರು ವಾಲ್ಮೀಕಿ ಮಹರ್ಷಿ. ಈ ಮಹಾನ್ ಗ್ರಂಥ ಎಲ್ಲರೂ ಓದುವ ಮೂಲಕ ಅರ್ಥೈಸಿಕೊಳ್ಳುವ ಕಾರ್ಯ ಆಗಬೇಕಿದೆ. ಮಹರ್ಷಿ ವಾಲ್ಮೀಕಿ ಅನೇಕ ದಂತ ಕಥೆಗಳ ಉದಾಹರಣೆಗಳು, ನೀತಿ ಪಾಠ ಅಳವಡಿಸಿಕೊಂಡು ಉತ್ತಮ ಬದುಕು ರೂಪಿಸಲು ಸಹಕಾರಿಯಾಗಿದೆ.

ರಾಮಾಯಣ ಹಾಗೂ ಮಹಾಭಾರತ ಗ್ರಂಥಗಳಲ್ಲಿ ನ್ಯಾಯ ನೀತಿ ಧರ್ಮದಿಂದ ಬದುಕು ಸಾಗಿಸುವ ಮಾರ್ಗ ಅಡಗಿದೆ. ಮಾನವೀಯ ಮೌಲ್ಯ ಜೀವನದಲ್ಲಿ ಅಳವಡಿಸಿಕೊಂಡು ಬದುಕು ರೂಪಿಸಿಕೊಳ್ಳುವ ಹಲವಾರು ವಿಷಯ ವಿವರಿಸಲಾಗಿದೆ. ಬಡತನ ಸಾಧನೆಗೆ ಅಡ್ಡಿಯಾಗಲಾರದು ಸಮಾಜದಲ್ಲಿ ಅನೇಕರು ಬಡತನದಲ್ಲಿ ಜನಿಸಿ ಮಹಾನ್ ಸಾಧಕರಾದ ಉದಾಹರಣೆಗಳಿವೆ. ಕೀಳರಿಮೆ ತೊರೆದು ಉನ್ನತ ಮಟ್ಟದಲ್ಲಿ ಆಲೋಚಿಸಿ ಸಾಧನೆ ಮಾಡಲು ಮುಂದಾಗಬೇಕು. ವಾಲ್ಮೀಕಿ ಸಮಾಜ ಬಾಂಧವರು ದೊಡ್ಡ ದೊಡ್ಡ ಹುದ್ದೆ ಅಲಂಕರಿಸಿ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡುವಂತಾಗಲಿ ಎಂದರು.

ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ.ಪಾಟೀಲ ಮಹರ್ಷಿ ವಾಲ್ಮೀಕಿ ಅವರ ಕುರಿತ ಸಂದೇಶವನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ.ಸಂಕದ ಅವರು ಕಾರ್ಯಕ್ರಮದಲ್ಲಿ ಹೇಳಿದರು.

ನಿಪ್ಪಾಣಿಯ ವಿ.ಎಸ್.ಎಂ.ಜಿ.ಐ. ಬಾಗೇವಾಡಿ ಕಾಲೇಜಿನ ಪ್ರಾಚಾರ್ಯ ಡಾ. ಎನ್.ಎಸ್. ಮಾದಣ್ಣವರ ಮಹರ್ಷಿ ವಾಲ್ಮೀಕಿ ಆರ್ದಶಗಳ ಕುರಿತು ಉಪನ್ಯಾಸ ನೀಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್‌ ಬಬರ್ಜಿ, ನಗರಸಭೆಯ ಸದಸ್ಯ ವಿನಾಯಕ್ ಮಾನ್ವಿ, ನಾಗರಾಜ್ ತಳವಾರ, ನಾಮನಿರ್ದೇಶಿತ ಸದಸ್ಯ ದುರ್ಗೇಶ್ ವಿಭೂತಿ, ಮಹರ್ಷಿ ವಾಲ್ಮೀಕಿ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬೆಳವಾಡಿ, ಜಿಪಂ ಸಿಇಓ ಭರತ್ ಎಸ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಉಪ ವಿಭಾಗಾಧಿಕಾರಿ ಗಂಗಪ್ಪ ಎಂ.ಹಾಜರಿದ್ದರು.

ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಕ್ಕಳನ್ನು ಗುರುತಿಸಿ ಸನ್ಮಾನಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಪ್ರಾಸ್ತಾವಿಕ ಮಾತನಾಡಿದರು. ಡಾ.ವೆಂಕಟೇಶ್ ಆಲ್ಕೋಡ್ ಹಾಗೂ ತಂಡದವರು ನಾಡಗೀತೆ ಹಾಗೂ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಉಪನ್ಯಾಸಕ ಬಾಹುಬಲಿ ಜೈನರ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''