ಕನ್ನಡಪ್ರಭ ವಾರ್ತೆ ದಾವಣಗೆರೆ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಜಿಲ್ಲಾ ವಾಲ್ಮೀಕಿ ಯುವ ಘಟಕದಿಂದ ನಗರದಲ್ಲಿ ಶನಿವಾರ 9ನೇ ವರ್ಷದ ಬೃಹತ್ ಬೈಕ್ ರ್ಯಾಲಿ ನಡೆಯಿತು. ನಗರದ ರಾಜವೀರ ಮದಕರಿ ನಾಯಕ ವೃತ್ತದಲ್ಲಿ ಬೈಕ್ ರ್‍ಯಾಲಿಗೆ ಮುಜರಾಯಿ ಸಚಿವರು ಸ್ವತಃ ಬೈಕ್ ಚಾಲನೆ ಮೂಲಕ ಉದ್ಘಾಟಿಸಿ, ಸಮಸ್ತರಿಗೂ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭ ಹಾರೈಸಿದರು.
ವೀರ ಮದಕರಿ ನಾಯಕ ವೃತ್ತದಿಂದ ಆರಂಭವಾದ ಬೈಕ್ ರ್‍ಯಾಲಿಯು ಶ್ರೀ ದುಗಾಂಬಿಕಾ ದೇವಸ್ಥಾನ, ಹಗೇದಿಬ್ಬ ವೃತ್ತ, ಅರಳೀಮರ ವೃತ್ತ, ಬಂಬೂ ಬಜಾರ್, ಎಪಿಎಂಸಿ, ಪಿ.ಬಿ.ರಸ್ತೆ, ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತ, ವಿನೋಬನಗರ 2ನೇ ಮುಖ್ಯರಸ್ತೆ, ಚರ್ಚ್ ರಸ್ತೆ, ಹರಳೆಣ್ಣೆ ಕೊಟ್ರ ಬಸಪ್ಪ ಸರ್ಕಲ್, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಶಿವಪ್ಪಯ್ಯ ಸರ್ಕಲ್, ಕೆಟಿಜೆ ನಗರ, ಎಚ್.ಕೆ.ಆರ್. ಸರ್ಕಲ್ ಮಾರ್ಗವಾಗಿ ನಿಟುವಳ್ಳಿ ಶ್ರೀ ದುಗಾಂಬಿಕಾ ದೇವಿ ದೇವಸ್ಥಾನ ಸಮೀಪ ಬೈಕ್ ರ್ಯಾಲಿ ಮುಕ್ತಾಯಗೊಂಡಿತು.
ರ್‍ಯಾಲಿ ಯುದ್ದಕ್ಕೂ ವಾಲ್ಮೀಕಿ ಶ್ರೀಗಳು ಹಾಗೂ ಚಿತ್ರನಟ ಕಿಚ್ಚ ಸುದೀಪ್ ಪರವಾಗಿ ಯುವಕರು ಜೈಕಾರ ಹಾಕಿ ಸಂಭ್ರಮಿಸಿದರು. ಸಮಾಜದ ಮುಖಂಡರಾದ ಹಿರಿಯ ವಕೀಲ ಎನ್.ಎಂ. ಆಂಜನೇಯ ಗುರೂಜಿ, ಮಾಜಿ ಮೇಯರ್ ಬಿ.ಎಚ್. ವಿನಾಯಕ ಪೈಲ್ವಾನ, ಶಾಮನೂರು ಪ್ರವೀಣ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವರುಣ ಬೆಣ್ಣೆಹಳ್ಳಿ, ಬಸವರಾಜ ತೋಟದ್, ಹೂವಿನಮಡು ಪ್ರವೀಣ, ಗುಮ್ಮನೂರು ಶ್ರೀನಿವಾಸ, ರಾಕೇಶ, ರಂಗನಾಥ, ಸತೀಶ, ಮಣಿ ಇತರರು ರ್‍ಯಾಲಿಯಲ್ಲಿದ್ದರು.- - -