ವಾಲ್ಮೀಕಿ ರಾಮಾಯಣ ಆದರ್ಶ ಬದುಕಿಗೆ ಕೈಗನ್ನಡಿ: ಕಾಶಪ್ಪನವರ

KannadaprabhaNewsNetwork |  
Published : Oct 08, 2025, 01:01 AM IST
ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾನ್ವಿತ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು. | Kannada Prabha

ಸಾರಾಂಶ

ಹುನಗುಂದ ಪಟ್ಟಣದ ಗುರುಭವನದಲ್ಲಿ ತಾಲೂಕಾಡಳಿತ, ತಾಪಂ, ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗೂ ವಾಲ್ಮೀಕಿ ಸಮಾಜದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಶಾಸಕ ವಿಜಯಾನಂದ ಕಾಶಪ್ಪನವರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಹುನಗುಂದ

ಆದಿಕವಿ ಮಹರ್ಷಿ ವಾಲ್ಮೀಕಿ ಅವರ ರಚಿಸಿದ ಮಹಾಕಾವ್ಯ ರಾಮಾಯಣ ಸರ್ವರ ಆದರ್ಶ ಬದುಕಿಗೆ ಕೈಗನ್ನಡಿಯಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಪಟ್ಟಣದ ಗುರುಭವನದಲ್ಲಿ ತಾಲೂಕಾಡಳಿತ, ತಾಪಂ, ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗೂ ವಾಲ್ಮೀಕಿ ಸಮಾಜದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ನನ್ನ ಅವಧಿಯಲ್ಲಿ ಹುನಗುಂದ ಮತ್ತು ಇಳಕಲ್ ಅವಳಿ ತಾಲೂಕಿಗೆ ₹50 ಲಕ್ಷ ಅನುದಾನ ನೀಡಿ ವಾಲ್ಮೀಕಿ ಸಮುದಾಯ ಭವನ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಈಗ ಅವಳಿ ತಾಲೂಕಿನ ಸಮುದಾಯ ಭವನಕ್ಕೆ ಸರ್ಕಾರದಿಂದ ಮತ್ತೆ ₹75 ಲಕ್ಷ ಅನುದಾನ ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಭವನ ಉದ್ಘಾಟಿಸಿ ಮುಂಬರುವಜಯಂತಿಯನ್ನು ನೂತನ ಸಮುದಾಯ ಭವನದಲ್ಲಿ ಆಚರಿಸೋಣ. ಪರಿಶಿಷ್ಟ ಪಂಗಡ ವಸತಿ ನಿಲಯ ಆರಂಭಿಸುವ ಮೂಲಕ ಆ ಸಮುದಾಯದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.

ಬಸವನಬಾಗೇವಾಡಿಯ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮಹರ್ಷಿ ವಾಲ್ಮೀಕಿಯವರ ಜೀವನ ಸಂದೇಶ ಹಾಗೂ ತತ್ವಾದರ್ಶಗಳು ನಾಡಿನ ಎಲ್ಲೆಡೆ ಪಸರಿಸಬೇಕು ಎಂದರು.

ಬಾಗಲಕೋಟೆಯ ನಿವೃತ್ತ ಉಪನ್ಯಾಸಕ ಜೆ.ಕೆ ತಳವಾರ ವಿಶೇಷ ಉಪನ್ಯಾಸ ನೀಡಿದರು.ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾನ್ವಿತ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಚಂದ್ರಶೇಖರ ಮಹಾಸ್ವಾಮಿಗಳು, ತಹಸೀಲ್ದಾರ ಪ್ರದೀಪಕುಮಾರ ಹಿರೇಮಠ, ತಾಪಂ ಇಒ ಮುರಳೀಧರ ದೇಶಪಾಂಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಜಸ್ಮೀನ್ ಕಿಲ್ಲೇದಾರ, ಕ್ಷೇತ್ರ ಸಮನ್ವಯಾಧಿಕಾರಿ ಸದಾಶಿವ ಗುಡಗುಂಟಿ, ನಾಗರಾಜ ಹೊಸೂರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಕಟ್ಟಿಮನಿ, ವಿಜಯಮಹಾಂತೇಶ ಗತ್ತನಕೇರಿ, ಮಲ್ಲಣ್ಣ ಅಂಟರತಾನಿ, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಚಂದ್ರು ತಳವಾರ, ಸೋಮಶೇಖರ ಬಲಕುಂದಿ, ಬಸವರಾಜ ಹಿರೇಗೌಡರ, ಶಿವಶಂಕ್ರಪ್ಪ ವಾಲಿಕಾರ, ಹನುಮಂತ ಕೆಲೂರ, ಹನುಮಂತ ಬೊಳಲಗಿಡದ ಸೇರಿದಂತೆ ಅನೇಕರು ಇದ್ದರು. ಜಿ.ವೈ. ಆಲೂರ ಸ್ವಾಗತಿಸಿದರು. ಎಸ್.ಟಿ. ರಂಗಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಂಗಮೇಶ ಹೊದ್ಲೂರ ನಿರೂಪಿಸಿ ವಂದಿಸಿದರು.

ಆದರ್ಶ ಪುರುಷ ರಾಮನನ್ನು ಇಂದು ಕೆಲವೊಂದು ಪಟ್ಟಭದ್ರ ಹಿತಾಶಕ್ತಿಗಳು ವೈಯಕ್ತಿಕ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಹಾತ್ಮ ಗಾಂಧಿ ಕಂಡ ಮಹಾಪುರುಷ ಶ್ರೀರಾಮಚಂದ್ರನೇ ಬೇರೆ, ಇಂದು ಬಳಕೆಯಾಗುತ್ತಿರುವ ಶ್ರೀರಾಮಚಂದ್ರನೇ ಬೇರೆ.

- ವಿಜಯಾನಂದ ಕಾಶಪ್ಪನವರ ಶಾಸಕರು ಹುನಗುಂದ ಮತಕ್ಷೇತ್ರ

PREV

Recommended Stories

ರಾಜ್ಯದಲ್ಲಿ 18500 ಶಿಕ್ಷಕರ ನೇಮಕ : ಮಧು ಬಂಗಾರಪ್ಪ
ವಾಯವ್ಯ ಸಾರಿಗೆಗೆ ಶೀಘ್ರ 700 ಹೊಸ ಬಸ್‌ : ಕಾಗೆ