ರಾಮನಗರ: ಮಹರ್ಷಿ ವಾಲ್ಮೀಕಿ ವಿರಚಿತ ಮಹಾಕಾವ್ಯ ರಾಮಾಯಣ ನಮ್ಮೆಲ್ಲರ ಜೀವನಕ್ಕೂ ಪ್ರಸ್ತುತವಾಗಿದೆ ಎಂದು ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಪ್ರಭಾರ ಅಧೀಕ್ಷಕ ಈರಪ್ಪ ಸದಲಾಪುರ ಹೇಳಿದರು.
ರಾಮಾಯಣದಲ್ಲಿನ ಪಾತ್ರಗಳಲ್ಲಿ ತಮ್ಮ ನಡುವಿನ ಸಂಬಂಧಗಳಲ್ಲಿ ನಿಷ್ಠೆಯನ್ನು ಕಾಣಬಹುದು. ರಾಮ-ಸೀತೆ ನಡುವಿನ ಸತಿ-ಪತಿ ಸಂಬಂಧ, ರಾಮ ಮತ್ತು ಲಕ್ಷ್ಮಣರ ನಡುವಿನ ಸಹೋಧರ ಸಂಬಂಧ, ರಾಮ ಮತ್ತು ಹನುಮಂತನ ನಡುವಿನ ಭಕ್ತಿಯ ಸಂಬಂಧಗಳು ತಮ್ಮ ನಡುವಿನ ನೈತಿಕತೆ ಮತ್ತು ನಿಷ್ಠೆಯನ್ನು ಪ್ರಕಟಪಡಿಸುತ್ತವೆ. 24 ಸಾವಿರ ಶ್ಲೋಕಗಳನ್ನು ಒಳಗೊಂಡ ರಾಮಾಯಣ ನಮ್ಮ ಜೀವನಕ್ಕೂ ಪ್ರಸ್ತುತವಾಗಿದೆ ಎಂದು ಹೇಳಿದರು.
ಕಾರಾಗೃಹ ಪರಿವರ್ತನೆಯ ಮಂದಿರ. ಇಲ್ಲಿರುವ ನಿವಾಸಿಗಳು ಹೊರಹೋಗುವಾಗ ಸುಧಾರಣೆ ಕಾಣುತ್ತಿದ್ದೇವೆ.ಕಾರಾಗೃಹ ಗ್ರಂಥಾಲಯದಲ್ಲಿ ಏಳು ಸಾವಿರಕ್ಕೂ ಅಧಿಕ ಪುಸ್ತಕಗಳಿವೆ, ಕಾರಾಗೃಹ ನಿವಾಸಿಗಳ ಪೈಕಿ ಬಹುತೇಕರು ಈ ಪುಸ್ತಕಗಳನ್ನು ಓದಿ ಪರಿರ್ತನೆಯ ಹಾದಿಯಲ್ಲಿ ನಡೆಯುತ್ತಿದ್ದಾರೆ ಎಂದು ಈರಪ್ಪ ಸದಲಾಪುರ ತಿಳಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಸೂರ್ಯಪ್ರಕಾಶ್ ಮಾತನಾಡಿ, ನಮ್ಮ ತಪ್ಪುಗಳನ್ನು ಪಾಠವನ್ನಾಗಿ ಪರಿಗಣಿಸಬೇಕು. ಮಹರ್ಷಿ ವಾಲ್ಮೀಕಿಯವರು ಸಹ ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಪರಿವರ್ತನೆಯಾದರು. ಅವರ ಜೀವನ ಎಲ್ಲರಿಗೂ ಮಾರ್ಗದರ್ಶಕವಾಗಲಿ ಎಂದರು.
ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಅಂಬರೀಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಉಪಾಧ್ಯಕ್ಷ ಪೂರ್ಣಚಂದ್ರ ಕವನ ವಾಚಿಸಿದರು. ಕೂಟಗಲ್ ಪಿ.ಯು. ಕಾಲೇಜಿನ ಪ್ರಾಂಶುಪಾಲ ಹಾಗೂ ಚುಟುಕು ಕವಿ ಜಿ.ಸಿ. ಮೋಹನ್ ಅರಮನೆ-ಸೆರೆಮನೆ, ಕೋಪ-ಪಾಪಿ, ಆರಕ್ಷಕರು ನಮ್ಮ ರಕ್ಷಕರು ಎಂಬ ಚುಟುಕು ಕವಿತೆಗಳನ್ನು ಪ್ರಸ್ತುತ ಪಡಿಸಿದರು. ಉಮೇಶ್ ಪ್ರಾಥರ್ಿಸಿದರು. ಇದೇ ವೇಳೆ ಕೆಲವು ಕಾರಾಗೃಹ ನಿವಾಸಿಗಳು ಹಾಡು ಹೇಳಿದರು. ಹಸನ್ಮುಖಿ ಸೇವಾ ಟ್ರಸ್ಟ್ ಗೌರವಾಧ್ಯಕ್ಷತೆ ಹೇಮಾವತಿ, ಜೈಲರ್ ಇಮಾಮ್ ಖಾಸಿಂ ಮತ್ತು ಮತ್ತೊಬ್ಬ ಅಧಿಕಾರಿ ಬಾಬು ಉಪಸ್ಥಿತರಿದ್ದರು.7ಕೆಆರ್ ಎಂಎನ್ 2.ಜೆಪಿಜಿ
ರಾಮನಗರದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ನಡೆದ ಮನೋಲ್ಲಾಸ ಪರಿವರ್ತನ, ಕಾವ್ಯ ಸುಧೆ ಮತ್ತು ವಾಲ್ಮೀಕಿಯವರ ಬಗ್ಗೆ ಪ್ರವಚನ ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು.