- ರಾಜನಹಳ್ಳಿ ವಾಲ್ಮೀಕಿ ಜಾತ್ರೆ ಧರ್ಮಸಭೆಯಲ್ಲಿ ಸಿದ್ಧಬಸವ ಕಬೀರ ಶ್ರೀ ನುಡಿ - - - ಕನ್ನಡಪ್ರಭ ವಾರ್ತೆ ಹರಿಹರ
ತಾಲೂಕಿನ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದಿಂದ ಭಾನುವಾರ ಆಯೋಜಿಸಿದ್ದ, ಮಹರ್ಷಿ ವಾಲ್ಮೀಕಿ ಜಾತ್ರೆ-2025ರ ಕಾರ್ಯಕ್ರಮದ ಧರ್ಮಸಭೆಯಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಭಕ್ತಿಗೆ, ಪೌರುಷಕ್ಕೆ ಹೆಸರುವಾಸಿ ಆಗಿರುವ ವಾಲ್ಮೀಕಿ ಸಮಾಜದಲ್ಲಿ ಜನ್ಮ ತಳೆದ ಕಣ್ಣಪ್ಪ, ಏಕಲವ್ಯ ಅಂಥವರು ತಮ್ಮ ಕಣ್ಣು, ಬೆರಳುಗಳನ್ನೇ ಅರ್ಪಿಸಿ ಶ್ರೇಷ್ಠತೆ ಮೆರೆದರು. ಸಮಾಜದ ಜನತೆ ಎಂದು ಬೇಡುವುದಿಲ್ಲ ಕಾಯಕ ಮಾಡಿ, ಜೀವನ ನಡೆಸಿದವರು. ಹಾಗಾಗಿ ಅವರಿಗೆ ಬೇಡರು ಎನ್ನಲಾಗುತ್ತದೆ ಎಂದರು.
ಸಮಾಜದ ಗುರುಗಳಾದ ಪುಣ್ಯಾನಂದ ಶ್ರೀಗಳು ಮಠವನ್ನು ಕಟ್ಟಿದರೆ, ಪ್ರಸನ್ನಾನಂದ ಶ್ರೀಗಳು ಸಮಾಜ ಕಟ್ಟುವ ಕಾರ್ಯ ಮಾಡಿದವರು. ಅವರ ಕೆಚ್ಚದೆಯ ಹೋರಾಟದ ಫಲವಾಗಿ ಸರ್ಕಾರದ ಸವಲತ್ತುಗಳು ಸಮಾಜಕ್ಕೆ ಸಿಗುವಂತೆ ಮಾಡಿತು. ಅವರು ಕೇವಲ ಅವರ ಸಮಾಜವನ್ನು ಮಾತ್ರವಲ್ಲದೆ, ಉಳಿದ ಸಮಾಜಗಳ ಗುರುಗಳನ್ನು ಪ್ರೀತಿ, ಸೌಜನ್ಯದಿಂದ ಕಾಣುತ್ತಾರೆ ಎಂದರು.ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಶ್ರೀ ಮಾತನಾಡಿ, ರಾಮಾಯಣದಂತ ಮಹಾಕಾವ್ಯ ವನ್ನು ಇಡಿ ಪ್ರಪಂಚಕ್ಕೆ ಅರ್ಪಿಸಿ, ದೇಶ ಹಾಗೂ ಸಮಾಜದ ಸಂಸ್ಕøತಿಯನ್ನು ಎತ್ತಿ ತೋರಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರಿಗೆ ಸಿಕ್ಕಿದೆ. ಎಂದರು.
ಸಿದ್ದರಹಳ್ಳಿ ಪಾರಮಾರ್ಥಿಕ ಗವಿಮಠದ ಮಲ್ಲಿಕಾರ್ಜುನ ಶ್ರೀ ಮಾತನಾಡಿ, ಮೀಸಲಾತಿಗಾಗಿ ರಾಜ್ಯ ರಾಜ್ಯಧಾನಿಯ ಫ್ರೀಡಂ ಪಾರ್ಕ್‌ನಲ್ಲಿ 257 ದಿನಗಳ ಕಾಲ ಅವರು ಸತ್ಯಾಗ್ರಹ ಮೂಲಕ ವಾಲ್ಮೀಕಿ ಸಮಾಜಕ್ಕೆ ಕೇವಲ ಶೇ.3ರಷ್ಟಿದ್ದ ಮೀಸಲಾತಿಯನ್ನು ಶೇ.7ರಷ್ಟು ನೀಡುವಂತೆ ಮಾಡಿದ ಕೀರ್ತಿ ಪ್ರಸನ್ನಾನಂದ ಶ್ರೀ ಅವರಿಗೆ ಸಲ್ಲುತ್ತದೆ ಎಂದರು.ಮಹರ್ಷಿ ವಾಲ್ಮೀಕಿ ಪೀಠದ ಡಾ. ಪ್ರಸನ್ನಾನಂದ ಶ್ರೀ, ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಶ್ರೀ, ಅಡಪದ ಅಪ್ಪಣ್ಣ ಶ್ರೀ, ನೇಕಾರ ಗುರುಪೀಠದ ಗುರುಸಿದ್ದ ಪಟ್ಟಾಧಾರ್ಯ ಶ್ರೀ, ದಾವಣಗೆರೆ ವಿರಕ್ತ ಮಠದ ಬಸವಪ್ರಭು ಶ್ರೀ, ಪಟ್ಟಯ್ಯಮಠದ ಗುರುಬಸವ ಆರೋಗ್ಯಮಾತೆ ಚರ್ಚನ ಕೆ.ಎ.ಜಾರ್ಜ್ ಶ್ರೀ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಭಾಗವಹಿಸಿದ್ದರು.
ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಗೋಶಾಲೆ ಉದ್ಘಾಟಿಸಿದರು. ಜಾತ್ರಾ ಸಮಿತಿ ಅಧ್ಯಕ್ಷ ಜಗಳೂರು ಶಾಸಕ ದೇವೇಂದ್ರಪ್ಪ, ಸಂಚಾಲಕ ಶ್ರೀನಿವಾಸ ದಾಸಕರಿಯಪ್ಪ ಹಾಗೂ ಇತರರು ಉಪಸ್ಥಿತರಿದ್ದರು.- - -
-09ಎಚ್‍ಆರ್‍ಆರ್02:ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆ ಅಂಗವಾಗಿ ಧರ್ಮಸಭೆಯಲ್ಲಿ ಪ್ರಸನ್ನಾನಂದ ಶ್ರೀಗಳನ್ನು ಗೌರವಿಸಲಾಯಿತು.