ಸೋಮವಾರಪೇಟೆ: ಸಮೀಪದ ಚೌಡ್ಲು ಗ್ರಾಮದ ಸಂದೀಪನಿ ಆಂಗ್ಲ ಮಾದ್ಯಮ ಶಾಲೆ ಆವರಣದಲ್ಲಿ ರೋಟರಿ ಸಂಸ್ಥೆ ವತಿಯಿಂದ ಈಚೆಗೆ ವನಮೋತ್ಸವ ಕಾರ್ಯಕ್ರಮ ನಡೆಯಿತು.
ಸಂಸ್ಥೆಯ ಕಾರ್ಯದರ್ಶಿ ಪಿ.ಕೆ. ರವಿ, ವಲಯ ಸೇನಾನಿ ಎ.ಎಸ್. ಮಲ್ಲೇಶ್, ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು, ರೋಟರಿ ಸದಸ್ಯರು ಇದ್ದರು.
-------------------------------ಆದಿಮಸಂಜಾತರ ಹಕ್ಕುಗಳ ದಿನ ಸೆ. 9ರಂದು ಸಿಎನ್‌ಸಿ ಸತ್ಯಾಗ್ರಹ: ನಾಚಪ್ಪ
ವಿಶ್ವ ಆದಿಮಸಂಜಾತರ ಹಕ್ಕುಗಳ ದಿನವಾದ ಸೆ. 9ರಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಸತ್ಯಾಗ್ರಹ ನಡೆಸಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.
ಕೊಡವರು ಈ ಮಣ್ಣಿಗೆ ಬದ್ಧರಾಗಿರುವ ಅತ್ಯಂತ ಪ್ರಾಚೀನ ಆದಿಮಸಂಜಾತರು. ಕೊಡವ ಪರಂಪರೆಯು ಯೋಧತ್ವವನ್ನು ಮೈಗೂಡಿಸಿಕೊಂಡಿದೆ. ಸಿಎನ್‌ಸಿ ತನ್ನ ದೀರ್ಘ ಕಾಲದ, ನ್ಯಾಯಸಮ್ಮತ, ಪರಮೋಚ್ಚ ಸಾಂವಿಧಾನಿಕ ಬೇಡಿಕೆಗಳು ಮತ್ತು ಗೌರವಾನ್ವಿತ ಗುರಿಗಳನ್ನೊಳಗೊಂಡ ಬೇಡಿಕೆಗಳನ್ನು ಮಂಡಿಸಲಿದೆ. ‘ಭೂ-ರಾಜಕೀಯ ಸ್ವಾಯತ್ತತೆ, ಸ್ವಯಂ ಆಡಳಿತ, ಆಂತರಿಕ ಸ್ವಯಂ ನಿರ್ಧಾರದ ಹಕ್ಕುಗಳನ್ನು ಪ್ರತಿಪಾದಿಸಲಿದೆ. ಆದ್ದರಿಂದ ಸರ್ವ ಕೊಡವ, ಕೊಡವತಿಯರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಹಕ್ಕೊತ್ತಾಯಗಳನ್ನು ಬೆಂಬಲಿಸಬೇಕು ಎಂದು ನಾಚಪ್ಪ ಮನವಿ ಮಾಡಿದ್ದಾರೆ.