ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ಪರೀಕ್ಷಾರ್ಥ ಸಂಚಾರ

KannadaprabhaNewsNetwork |  
Published : Sep 06, 2026, 03:15 AM IST
ಬೆಂಗಳೂರಿನಿಂದ ಮಂಗಳೂರಿಗೆ ಪರೀಕ್ಷಾರ್ಥ ಸಂಚಾರ ನಡೆಸಿದ ವಂದೇ ಭಾರತ್‌ ರೈಲು | Kannada Prabha

ಸಾರಾಂಶ

ಬೆಂಗಳೂರು-ಮಂಗಳೂರು ನಡುವಿನ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಪರೀಕ್ಷಾರ್ಥ ಸಂಚಾರ ಶನಿವಾರ ನಡೆಯಿತು.ಬೆಂಗಳೂರಿನ ಯಶವಂತಪುರ ಜಂಕ್ಷನ್‌ನಿಂದ ಬೆಳಗ್ಗೆ 6:30 ಕ್ಕೆ ಹೊರಟ ವಂದೇ ಭಾರತ್‌ ರೈಲು ಸಂಜೆ 4.30ರ ವೇಳೆಗೆ ಮಂಗಳೂರು ಸೆಂಟ್ರಲ್‌ ತಲುಪಿದೆ. ಹಾಸನ, ಸಕಲೇಶಪುರ ಮೂಲಕ ಸುಬ್ರಹ್ಮಣ್ಯರೋಡ್‌ಗೆ ರೈಲು ಆಗಮಿಸಿದೆ. ಸುಬ್ರಹ್ಮಣ್ಯ ರೋಡ್‌ಗೆ ಸಂಜೆ 3ರ ವೇಳೆಗೆ ಆಗಮಿಸಿದ್ದು, ನಂತರ 3.30ರ ವೇಳೆಗೆ ಪುತ್ತೂರು, 4.30ರ ವೇಳೆಗೆ ಮಂಗಳೂರಿಗೆ ತಲುಪಿದೆ.

ಮಂಗಳೂರು: ಬೆಂಗಳೂರು-ಮಂಗಳೂರು ನಡುವಿನ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಪರೀಕ್ಷಾರ್ಥ ಸಂಚಾರ ಶನಿವಾರ ನಡೆಯಿತು.ಬೆಂಗಳೂರಿನ ಯಶವಂತಪುರ ಜಂಕ್ಷನ್‌ನಿಂದ ಬೆಳಗ್ಗೆ 6:30 ಕ್ಕೆ ಹೊರಟ ವಂದೇ ಭಾರತ್‌ ರೈಲು ಸಂಜೆ 4.30ರ ವೇಳೆಗೆ ಮಂಗಳೂರು ಸೆಂಟ್ರಲ್‌ ತಲುಪಿದೆ. ಹಾಸನ, ಸಕಲೇಶಪುರ ಮೂಲಕ ಸುಬ್ರಹ್ಮಣ್ಯರೋಡ್‌ಗೆ ರೈಲು ಆಗಮಿಸಿದೆ. ಸುಬ್ರಹ್ಮಣ್ಯ ರೋಡ್‌ಗೆ ಸಂಜೆ 3ರ ವೇಳೆಗೆ ಆಗಮಿಸಿದ್ದು, ನಂತರ 3.30ರ ವೇಳೆಗೆ ಪುತ್ತೂರು, 4.30ರ ವೇಳೆಗೆ ಮಂಗಳೂರಿಗೆ ತಲುಪಿದೆ.ರೈಲ್ವೆ ಇಲಾಖೆ ಸೂಚಿಸಿದ ವೇಳಾಪಟ್ಟಿಯಂತೆ ಬೆಳಗ್ಗೆ ಹೊರಟ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಅಪರಾಹ್ನ 2.30ರ ವೇಳೆಗೆ ಮಂಗಳೂರು ತಲುಪಬೇಕಿತ್ತು. ಆದರೆ ಹಾಸನದಲ್ಲಿ ವಂದೇ ಭಾರತ್‌ನ್ನು ನಿಲ್ಲಿಸಲಾಗಿದ್ದು, ಅಲ್ಲಿ ಸಮಯ ತೆಗೆದುಕೊಂಡಿದೆ. ಉಳಿದಂತೆ ಘಾಟ್‌ ವಿಭಾಗದಲ್ಲಿ ರೈಲು ಸಮಯ ತೆಗೆದುಕೊಂಡಿರುವ ಕಾರಣ ಮಂಗಳೂರು ತಲುಪುವಾಗ ತಡವಾಗಿದೆ ಎಂದು ಹೇಳಲಾಗುತ್ತಿದೆ. 16 ರೇಕ್‌ಗಳೊಂದಿಗೆ ವಂದೇ ಭಾರತ್ ರೈಲು ಮಂಗಳೂರು ಸೆಂಟ್ರಲ್ ಆಗಮಿಸಿದ್ದು, ಅದರಲ್ಲಿ ತಾಂತ್ರಿಕ ಅಧಿಕಾರಿಗಳು ಮತ್ತು ವಿಭಾಗದ ಸಿಬಂದಿ ಮಾತ್ರ ಇದ್ದು, ಸಂಚಾರದ ವೇಳೆಯ ಬಗ್ಗೆ ವರದಿ ದಾಖಲಿಸಿಕೊಂಡಿದ್ದಾರೆ.

ಈ ಮೊದಲು ವಂದೇ ಭಾರತ್‌ ರೈಲು ಒಂದು ವಾರ ಸಕಲೇಶಪುರ-ಸುಬ್ರಹ್ಮಣ್ಯ ರೋಡ್‌ ನಡುವಿನ ಘಾಟ್‌ ವಿಭಾಗದಲ್ಲಿ ಹಲವು ಬಾರಿ ಪರೀಕ್ಷಾರ್ಥ ಸಂಚರಿಸಿದೆ. ಈ ವೇಳೆ ಅಧಿಕಾರಿಗಳ ತಂಡವೂ ಪರೀಕ್ಷಾರ್ಥ ಸಂಚಾರದಲ್ಲಿ ಪರಶೀಲನೆ ನಡೆಸಿದ್ದರು. ಇದೀಗ ಬೆಂಗಳೂರು-ಮಂಗಳೂರು ನಡುವೆ ಮೊದಲ ಪರೀಕ್ಷಾರ್ಥ ಸಂಚಾರ ನಡೆಸಿದ್ದು, ಪರೀಕ್ಷಾರ್ಥ ಸಂಚಾರದಲ್ಲಿ ರೈಲಿನ ವೇಗ, ಸಂಚಾರ ಸಮಯದ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಈ ವೇಳೆಯ ವರದಿಯನ್ನು ಪಡೆದು ಮುಂದಿನ ಓಡಾಟದ ಆರಂಭದ ವೇಳಾಪಟ್ಟಿಯನ್ನು ಇಲಾಖೆ ಸಿದ್ದಪಡಿಸಲಿದೆ.

ಮಂಗಳೂರಿಗೆ ಆಗಮಿಸಿದ ವಂದೇ ಭಾರತ್‌ ರೈಲು ಬಳಿಕ ಮತ್ತೆ ಬೆಂಗಳೂರಿನತ್ತ ತೆರಳಲಿದೆ.

----

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಣ್ಣನ ಸಾವಿನ ನಂತ್ರ ತಂಗಿ ಸಾವು!
ಕೃಷ್ಣಾ ಮಡಿಲಲ್ಲಿ ಭಕ್ತಿ ಬೆಳಕು; ವೈಭವದ ಕೃಷ್ಣಾರತಿ