ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಹನಗಂಡಿಯ ಕಾಂಗ್ರೆಸ್ ಧುರೀಣ ಚಂದ್ರಶೇಖರ ಗುಬಚೆ(46) ತೀವ್ರ ಹೃದಯಾಘಾತದಿಂದ ಮೃತರಾದರು. ಸಹೋದರನ ಸಾವಿನ ಸುದ್ದಿ ತಿಳಿದು ಅಣ್ಣನ ಅಂತ್ಯಕ್ರಿಯೆಗೆ ಮೊರಬ ಗ್ರಾಮದಿಂದ ಬಂದ ದುಃಖದಲ್ಲಿದ್ದ ಸಹೋದರಿ ಶ್ರೀದೇವಿ ಕಲ್ಲಪ್ಪ ಅಸೋದೆ(27) ತೀರಾ ಅಸ್ವಸ್ಥಗೊಂಡು ಅಸು ನೀಗಿದ ಹೃದಯ ವಿದ್ರಾವಕ ಘಟನೆ ಹನಗಂಡಿ ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಹನಗಂಡಿಯ ಕಾಂಗ್ರೆಸ್ ಧುರೀಣ ಚಂದ್ರಶೇಖರ ಗುಬಚೆ(46) ತೀವ್ರ ಹೃದಯಾಘಾತದಿಂದ ಮೃತರಾದರು. ಸಹೋದರನ ಸಾವಿನ ಸುದ್ದಿ ತಿಳಿದು ಅಣ್ಣನ ಅಂತ್ಯಕ್ರಿಯೆಗೆ ಮೊರಬ ಗ್ರಾಮದಿಂದ ಬಂದ ದುಃಖದಲ್ಲಿದ್ದ ಸಹೋದರಿ ಶ್ರೀದೇವಿ ಕಲ್ಲಪ್ಪ ಅಸೋದೆ(27) ತೀರಾ ಅಸ್ವಸ್ಥಗೊಂಡು ಅಸು ನೀಗಿದ ಹೃದಯ ವಿದ್ರಾವಕ ಘಟನೆ ಹನಗಂಡಿ ಗ್ರಾಮದಲ್ಲಿ ನಡೆದಿದೆ.

ಸಂತಾಪ: ಹನಗಂಡಿ ಗ್ರಾಮದ ಧುರೀಣ ಚಂದ್ರಶೇಖರ ಗುಬಚೆ ನಿಧನಕ್ಕೆ ಧುರೀಣ ಸಿದ್ದು ಕೊಣ್ಣೂರ, ಶಾಸಕ ಸಿದ್ದು ಸವದಿ, ಚಾಲಕರ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.