ಚಿಕ್ಕಮಗಳೂರುವಂದೇ ಮಾತರಂ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ ಶಕ್ತಿಮಂತ್ರವಾಗಿತ್ತು. ಚಂದ್ರಶೇಖರ ಆಜಾದ್, ಭಗತ್ ಸಿಂಗ್, ರಾಜಗುರು, ಸುಖದೇವ್ ಹಾಗೂ ಸುಭಾಷ್ ಚಂದ್ರ ಬೋಸ್ ಸೇರಿದಂತೆ ಅನೇಕ ಕ್ರಾಂತಿಕಾರಿಗಳಿಗೆ ಈ ಗೀತೆ ಹೋರಾಟದ ಪ್ರೇರಣೆ ನೀಡಿತ್ತು. ಇಂತಹ ಐತಿಹಾಸಿಕ ಗೀತೆ ಮಹತ್ವವನ್ನು ಇಂದಿನ ಯುವಜನತೆಗೆ ತಿಳಿಸುವುದು ನಮ್ಮ ಜವಾಬ್ದಾರಿ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅಭಿಮತ । ವಂದೇ ಮಾತರಂ 150ನೇ ವರ್ಷಾಚರಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಂದೇ ಮಾತರಂ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ ಶಕ್ತಿಮಂತ್ರವಾಗಿತ್ತು. ಚಂದ್ರಶೇಖರ ಆಜಾದ್, ಭಗತ್ ಸಿಂಗ್, ರಾಜಗುರು, ಸುಖದೇವ್ ಹಾಗೂ ಸುಭಾಷ್ ಚಂದ್ರ ಬೋಸ್ ಸೇರಿದಂತೆ ಅನೇಕ ಕ್ರಾಂತಿಕಾರಿಗಳಿಗೆ ಈ ಗೀತೆ ಹೋರಾಟದ ಪ್ರೇರಣೆ ನೀಡಿತ್ತು. ಇಂತಹ ಐತಿಹಾಸಿಕ ಗೀತೆ ಮಹತ್ವವನ್ನು ಇಂದಿನ ಯುವಜನತೆಗೆ ತಿಳಿಸುವುದು ನಮ್ಮ ಜವಾಬ್ದಾರಿ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.ಬುಧವಾರ ಯುವ ಬ್ರಿಗೇಡ್ ನಿಂದ ವಂದೇ ಮಾತರಂ 150ನೇ ವರ್ಷಾಚರಣೆ ಅಂಗವಾಗಿ ನಡೆದ ರಥಯಾತ್ರೆ ಹಾಗೂ ಆಜಾದ್ ಮೈದಾನದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿ ಬಂಕಿಮಚಂದ್ರ ಚಟ್ಟೋಪಾಧ್ಯಾಯ ರಚಿಸಿದ ವಂದೇ ಮಾತರಂ 1874-75ರ ಅವಧಿಯಲ್ಲಿ ರೂಪುಗೊಂಡು, ಬಳಿಕ ಅವರ ಕಾದಂಬರಿಯಲ್ಲಿ ಸೇರ್ಪಡೆ ಯಾಯಿತು. ತಾಯ್ನಾಡಿಗೆ ವಂದಿಸುವ ಈ ಗೀತೆ ದೇಶದಾದ್ಯಂತ ಹರಡಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ದೇಶಭಕ್ತಿ ಕಿಚ್ಚು ಹೊತ್ತಿಸಿತು. ಗೀತೆ ಸಾರ್ವ ಜನಿಕವಾಗಿ ಜನಪ್ರಿಯಗೊಳಿಸುವಲ್ಲಿ ರವೀಂದ್ರನಾಥ ಠಾಕೂರ ಪಾತ್ರ ಮಹತ್ವದ್ದು ಎಂದು ತಿಳಿಸಿದರು.ವಂದೇ ಮಾತರಂ ಸಂಪೂರ್ಣ ಚರಣಗಳನ್ನು ಹಾಡುವ ವಿಚಾರದಲ್ಲಿ ರಾಜಕೀಯ ಮತ್ತು ಧಾರ್ಮಿಕ ಕಾರಣಗಳಿಂದ ನಿರ್ಬಂಧ ಎದುರಾದವು. ತಾಯ್ನಾಡನ್ನು ದುರ್ಗೆ ರೂಪದಲ್ಲಿ ವರ್ಣಿಸುವ ಚರಣಗಳಿಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಗೀತೆ ಕೆಲವು ಭಾಗಗಳನ್ನು ಕೈಬಿಡಲಾಯಿತು. ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದವರಲ್ಲಿ ಅನೇಕರಿಗೆ ಸ್ಫೂರ್ತಿಯಾದ ಗೀತೆ ಇತಿಹಾಸ ಮತ್ತು ಪೂರ್ಣ ಮಹತ್ವ ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ಹೇಳಿದರು.ಐರ್ಲೆಂಡ್ ಮೂಲದ ಮಾರ್ಗರೆಟ್ ನೋಬೆಲ್ ಸಿಸ್ಟರ್ ನಿವೇದಿತ ಆಗಿ ಭಾರತಕ್ಕೆ ಬಂದು ದೇಶಸೇವೆಗೆ ಜೀವನ ಮುಡಿಪಾ ಗಿಟ್ಟಿದ್ದರು. ವಂದೇ ಮಾತರಂ ಹೆಸರಿನ ಪತ್ರಿಕೆ ಸಂಪಾದಕೀಯದಲ್ಲೂ ತೊಡಗಿ ಸ್ವಾತಂತ್ರ್ಯ ಚಳವಳಿಗೆ ಬೆಂಬಲ ನೀಡಿದ್ದರು ಎಂದು ಸ್ಮರಿಸಿದರು.ಕರ್ನಾಟಕದಲ್ಲಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ 2 ಚರಣ ಹಾಡಿದರೆ ಸಾಕು ಎಂಬ ನಿಯಮವಿದೆ ಎಂದು ಆಕ್ಷೇಪಿಸಿದ ಸೂಲಿಬೆಲೆ, ಪೂರ್ಣ ಗೀತೆ ಇತಿಹಾಸ ಮತ್ತು ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಯುವ ಬ್ರಿಗೇಡ್ ರಾಜ್ಯಾದ್ಯಂತ ರಥಯಾತ್ರೆ ನಡೆಸುತ್ತಿದೆ ಎಂದರು. ಚಿಕ್ಕಮಗಳೂರಿನ ವಿದ್ಯಾರ್ಥಿಗಳು ಪೂರ್ಣ ಗೀತೆ ಕಲಿತು ಹಾಡುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.ಸ್ವಾಮಿ ವಿವೇಕಾನಂದರು ಯುವಜನರಿಗೆ ಪುರುಷಸಿಂಹರಾಗಿ ಎಂದು ಕರೆ ನೀಡಿದ್ದರು. ಯುವಕರು ದುರ್ಬಲ ಮನೋಭಾವ ತೊರೆದು ಶೌರ್ಯ, ಸಾಹಸ ಮತ್ತು ಆತ್ಮವಿಶ್ವಾಸದಿಂದ ರಾಷ್ಟ್ರ ನಿರ್ಮಾಣದಲ್ಲಿ ತೊಡಗಬೇಕುಎಂದು ಕರೆ ನೀಡಿದರು.ವೇದಿಕೆ ಹಿಂಭಾಗದಲ್ಲಿದ್ದ ಭಾರತಮಾತೆ ಮೂರ್ತಿ ರಾಷ್ಟ್ರೀಯ ಏಕತೆ ಸಂಕೇತ. ಮುಂಭಾಗದ ಇಮ್ಮಡಿ ಪುಲಕೇಶಿ ಮೂರ್ತಿ ಕರ್ನಾಟಕದ ಶೌರ್ಯ ಮತ್ತು ಸ್ವಾಭಿಮಾನದ ಪ್ರತೀಕ. ಇವೆರಡನ್ನು ಸಂಪರ್ಕಿಸುವ ರಥ ರಾಷ್ಟ್ರೀಯತೆ ಮತ್ತು ಪ್ರಾದೇಶಿಕ ಹೆಮ್ಮೆ ಸಾರುತ್ತದೆ ಎಂದು ವಿವರಿಸಿದರು.ನಗರದ ಶಂಕರ ಮಠದಿಂದ ಆರಂಭವಾದ ಶೋಭಾಯಾತ್ರೆ ಹನುಮಂತಪ್ಪ ವೃತ್ತದ ಮೂಲಕ ಎಂ.ಜಿ. ರಸ್ತೆಯಲ್ಲಿ ಸಾಗಿ ಆಜಾದ್ ಮೈದಾನ ತಲುಪಿತು. ವಿದ್ಯಾರ್ಥಿಗಳು, ಯುವ ಬ್ರಿಗೇಡ್ ಹಾಗೂ ಸಂಘ ಪರಿವಾರದ ಕಾರ್ಯಕರ್ತರು, ಮಹಿಳೆಯರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಸಚ್ಚಿದಾನಂದ ಸರಸ್ವತಿ, ನಗರಸಭೆ ಅಧ್ಯಕ್ಷೆ ಭವ್ಯ ಮಂಜುನಾಥ, ಸಾಯಿ ಏಂಜಲ್ಸ್ ವಿದ್ಯಾಸಂಸ್ಥೆ ಕಾರ್ಯದರ್ಶಿ ವಿಜಯ ನಾಗೇಶ್, ಚಿಕ್ಕಮಗಳೂರು ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಶಶಿಕಲಾ ನಾಯಕ್, ವಿ.ಎಚ್.ಪಿ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮುಡಪ್ಪ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.