ಹಾವೇರಿ: ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗಾಗಿ ಕೇಂದ್ರ ಜಲಸಂಪನ್ಮೂಲ ಇಲಾಖೆ ಸಿದ್ಧಪಡಿಸಿರುವ
ಶಿಗ್ಗಾಂವಿ ತಾಲೂಕಿನ ಶ್ಯಾಡಂಬಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಪಿಎಫ್‌ಆರ್ (ಪ್ರೀ ಫಿಸಿಬಲಿಟಿ ರಿಪೋರ್ಟ್) ಅಂಶಗಳನ್ನೇ ಡಿಪಿಆರ್‌ನಲ್ಲಿ ಸೇರಿಸಿದರೆ ಹಾವೇರಿ ಜಿಲ್ಲೆಯ ಜನರಿಗೆ ಯಾವುದೇ ಲಾಭ ಸಿಗುವುದಿಲ್ಲ. ಜಿಲ್ಲೆಯ ಜನರ ಬಹು ಕಾಲಕದ ಬೇಡಿಕೆಯಾಗಿರುವ ಬೇಡ್ತಿ-ವರದಾ ನದಿ ಜೋಡಣೆ ಸಂಬಂಧಿಸಿದಂತೆ ಇತ್ತೀಚಿಗೆ ರಾಜ್ಯ ಸರ್ಕಾರ ಎಂಒಯುಗೆ ಒಪ್ಪಿಗೆ ಕೊಟ್ಟಿದ್ದಕ್ಕೆ ಖುಷಿ ಆಗಿದ್ದು, ಪಕ್ಷಾತೀತವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಆದರೆ, ಮೂಲಗಳ ಮಾಹಿತಿಯ ಪ್ರಕಾರ ಪ್ರಸ್ತುತ ಪಿಎಫ್‌ಆರ್‌ನಲ್ಲಿ ಈ ಭಾಗದ ಆಶಯಕ್ಕೆ ವ್ಯತಿರಿಕ್ತವಾದ ಅಂಶಗಳು ಎದ್ದು ಕಾಣುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.ಬೇಡ್ತಿ, ವರದಾ ನದಿ ಪಾತ್ರದಲ್ಲಿ ಅಥವಾ ಹಾವೇರಿ ಜಿಲ್ಲೆಯಲ್ಲಿ ಯಾವುದೇ ಡ್ಯಾಮ್ ಅಥವಾ ಜಲಾಶಯ ನಿರ್ಮಿಸದೇ ನೇರವಾಗಿ ಪೈಪ್‌ಲೈನ್ ಹಾಗೂ ಗ್ರ್ಯಾವಿಟಿ ಮೂಲಕ ಕೆರೆಗಳಿಗೆ ನೀರು ಹರಿಸುವ ಕುರಿತು ಪಿಎಫ್‌ಆರ್‌ನಲ್ಲಿ ನಮೂದಾಗಿದೆ. ಮಳಗಿ, ಪಾಳಾ, ದಾಸನಕೊಪ್ಪ, ಚಂದಾಪುರ, ಬೆಳವಲಕೊಪ್ಪ, ಹುಲಗೂರ, ಶಿಶುವಿನಹಾಳ, ಸಂಕ್ಲಿಪುರ, ಗುಲಗಂಜಿಕೊಪ್ಪ, ಲಕ್ಷ್ಮೇಶ್ವರ, ಪರಸಾಪುರ, ವರವಿ, ಕಡಕೋಳ ಮೂಲಕ ಹಿರೇವಡ್ಡಟ್ಟಿ ಡ್ಯಾಮ್‌ಗೆ ನೀರು ಪೂರೈಸುವ ಕುರಿತು ಪಿಎಫ್‌ಆರ್‌ನಲ್ಲಿ ಪ್ರಸ್ತಾಪಿಸಲಾಗಿದೆ ಎಂದರು.ಬೇಡ್ತಿ ನದಿಯಿಂದ ವರದಾ ನದಿಗೆ ಪಂಪ್ ಮಾಡಿದರೆ ಕೇವಲ 23ರಿಂದ 25 ಕಿಮೀ ಮಾತ್ರ ಆಗುತ್ತದೆ. ಬೇಡ್ತಿಯಿಂದ ಮಳಗಿ ಮಾರ್ಗವಾಗಿ ಹಿರೇವಡ್ಡಟ್ಟಿವರೆಗೆ ಪೈಪ್‌ಲೈನ್ ಮಾಡಿದರೆ ಸುಮಾರು 170 ಕಿಮೀ ದೂರ ಆಗುತ್ತದೆ. ಜತೆಗೆ ಖರ್ಚು ಹೆಚ್ಚಾಗುತ್ತದೆ. ಹಾಗಾಗಿ, ಹಾವೇರಿ ಜಿಲ್ಲೆಯ ವರದಾ ನದಿ ಪಾತ್ರದಲ್ಲಿ ಸೂಕ್ತ ಸ್ಥಳದಲ್ಲಿ ಡ್ಯಾಮ್ ಮಾಡಬೇಕು. ಇದು ರಾಷ್ಟ್ರೀಯ ಜಲ ಯೋಜನೆ ಆದ್ದರಿಂದ ಹಣಕಾಸಿಗೆ ತೊಂದರೆ ಆಗುವುದಿಲ್ಲ ಎಂದರು. ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಮೂಲ ನದಿಗೆ ಯಾವುದೇ ದಕ್ಕೆ ಆಗದಂತೆ ಬೇಡ್ತಿ ನದಿಯಿಂದ ವರದಾ ನದಿಗೆ ಜೋಡಿಸಿ, ಅಲ್ಲಲ್ಲಿ ಚೆಕ್ ಡ್ಯಾಂ ಮಾಡಿದರೆ ಜಿಲ್ಲೆಯ ರೈತರಿಗೆ ಅನುಕೂಲ ಆಗುತ್ತದೆ. ನಾವು ಮತ್ತೊಂದು ಜಿಲ್ಲೆ, ರಾಜ್ಯಕ್ಕೆ ಬೇಡ ಎನ್ನುವುದಿಲ್ಲ. ಮೊದಲು ನಮ್ಮ ಜಿಲ್ಲೆಗೆ ಅನುಕೂಲ ಆಗಲಿ ಎಂಬುದು ನಮ್ಮ ಆಗ್ರಹ. ಕೇಂದ್ರ ಮತ್ತು ರಾಜ್ಯ ಸರ್ಕಾರ ಒಬ್ಬರ ಮೇಲೆ ಒಬ್ಬರು ಹಾಕಿದರೆ ನಾವು ಸುಮ್ಮನೆ ಕೂರುವುದಿಲ್ಲ. ರೈತರ ಕೂಡಿಸಿ ಹೋರಾಟ ಮಾಡುತ್ತೇವೆ. ರಕ್ತ ಕೊಟ್ಟಾದರೂ ನೀರು ತರುತ್ತೇವೆ ಎಂದು ಎಚ್ಚರಿಕೆ ನೀಡಿದರು.ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಜಿಪಂ ಮಾಜಿ ಸದಸ್ಯ ಸಿ.ಎಸ್. ಪಾಟೀಲ, ಈರಣ್ಣ ಬಡ್ಡಿ, ಬಸವರಾಜ ರಾಗಿ, ಎಚ್.ಎಚ್.ಮುಲ್ಲಾ, ಮರಿಗೌಡ್ರ ಪಾಟೀಲ ಇತರರು ಇದ್ದರು. ಮಧ್ಯ ಕರ್ನಾಟಕ ಅಭಿವೃದ್ಧಿಗೆ ಸಹಕಾರಿ: ಬೇಡ್ತಿ- ವರದಾ ನದಿ ಜೋಡಣೆಯಿಂದಾಗಿ ಮಧ್ಯ ಕರ್ನಾಟಕದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಈ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೊಂಡು ಉದ್ಯೋಗ ಸೃಷ್ಟಿಯಾಗುತ್ತದೆ. ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ವೇಗ ಸಿಗುತ್ತದೆ. ಇಂತಹ ಮಹತ್ವಪೂರ್ಣವಾದ ಯೋಜನೆಗೆ ಉತ್ತರ ಕನ್ನಡ ಜಿಲ್ಲೆಯ ಕೆಲವರು ವಿರೋಧ ಮಾಡುತ್ತಿರುವುದು ಯಾಕೆ ಎಂದು ಅರ್ಥವಾಗುತ್ತಿಲ್ಲ. ಈಗ ತಂತ್ರಜ್ಞಾನ ಮುಂದುವರಿದಿದೆ. ಅರಣ್ಯಕ್ಕೆ ಧಕ್ಕೆ ಆಗದಂತೆ ಡಿಪಿಆರ್ ಸಿದ್ಧಪಡಿಸುವ ಅವಕಾಶವಿದೆ. ಡಿಪಿಆರ್ ವರದಿ ಬರುವವರೆಗೆ ಕಾದು ನೋಡಲಿ. ನಂತರ ಈ ಕುರಿತು ಚರ್ಚಿಸೋಣ ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು.