ಮಧುಗಿರಿಯಲ್ಲಿ ಸಡಗರ ಸಂಭ್ರಮದ ವರಮಹಾಲಕ್ಷ್ಮೀ ಹಬ್ಬ

KannadaprabhaNewsNetwork |  
Published : Aug 22, 2026, 01:15 AM IST
ಮಧುಗಿರಿಯ ರಾಘವೇಂದ್ರ ಬಡಾವಣೆಯಲ್ಲಿ ನೆಲಸಿರುವ ಕೆಇಬಿ ಜಯರಾಮಯ್ಯ ಅವರ ಮನೆಯಲ್ಲಿ ಲಕ್ಷ್ಮೀ ಕೂರಿಸಿ ಸೀರೆ ಹುಡಿಸಿ ಸಡಗರ ಸಂಬ್ರಮದಿಂದ ವರಮಹಾಲಕ್ಷ್ಮೀ ಹಬ್ಬವನ್ನು ಮನೆ ಮಂದಿಯಲ್ಲಾ ಆಚರಿಸಿದರು.  | Kannada Prabha

ಸಾರಾಂಶ

ಲಕ್ಷ್ಮೀ ಬೆಳ್ಳಿ ಮುಖವಾಡವನ್ನು ಕಳಸದ ಮೇಲೆ ಕೂರಿಸಿ ಸೀರೆ ಉಡಿಸಿ ಲಕ್ಷ್ಮೀ ಅಲಂಕಾರ ಮಾಡಿ ನಮ್ಮ ಮನೆಯಲ್ಲಿ ಸದಾ ಲಕ್ಷ್ಮೀ ನೆಲಸಲೆಂದು ಶ್ರದ್ಧಾ ಭಕ್ತಿಯಿಂದ ಪೂಜೆ ಪುನಸ್ಕಾರಗಳನ್ನು ನೆರವೇರಿಸಿದರು.

ಮಧುಗಿರಿ: ನಗರ ಮತ್ತು ತಾಲೂಕಿನಾದ್ಯಂತ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ವರಮಹಾಲಕ್ಷ್ಮೀ ವಿಶೇಷವಾದ ಹಬ್ಬವಾಗಿರುವುದರಿಂದ ಬೆಳಗ್ಗೆಯಿಂದಲೇ ಮಹಿಳೆಯರು ಲವಲವಿಕೆ, ಸಡಗರ - ಸಂಭ್ರಮದಿಂದ ಮನೆಯಲ್ಲಿ ಲಕ್ಷ್ಮಿ ಪೂಜೆ, ಸಿಹಿ ಖಾದ್ಯಗಳನ್ನು ಮಾಡಿ ಶ್ರದ್ಧಾಭಕ್ತಿಯಿಂದ ಆಚರಿಸಿದರು. ಲಕ್ಷ್ಮೀ ಬೆಳ್ಳಿ ಮುಖವಾಡವನ್ನು ಕಳಸದ ಮೇಲೆ ಕೂರಿಸಿ ಸೀರೆ ಉಡಿಸಿ ಲಕ್ಷ್ಮೀ ಅಲಂಕಾರ ಮಾಡಿ ನಮ್ಮ ಮನೆಯಲ್ಲಿ ಸದಾ ಲಕ್ಷ್ಮೀ ನೆಲಸಲೆಂದು ಶ್ರದ್ಧಾ ಭಕ್ತಿಯಿಂದ ಪೂಜೆ ಪುನಸ್ಕಾರಗಳನ್ನು ನೆರವೇರಿಸಿದರು. ಮನೆಯಲ್ಲಿ ಹೋಳಿಗೆ (ಹೊಬ್ಬಟ್ಟು) ಮುಂತಾದ ಖಾದ್ಯಗಳನ್ನು ಮಾಡಿ ಮನೆ ಮಂದಿಯಲ್ಲಾ ಹಬ್ಬದೂಟ ಮಾಡಿದರು. ನಂತರ ಸಂಜೆ ವೇಳೆಗೆ ಮುತ್ತೈದೆಯರನ್ನು ಮನೆಗೆ ಕರೆದು ಅರಿಶಿಣ, ಕುಂಕುಮ, ಬಳೆ ಮೊದಲಾದ ಮಂಗಳ ದ್ರವ್ಯಗಳನ್ನು ಬಾಗಿನದಲ್ಲಿರಿಸಿ ನೀಡಿದರು. ಲಕ್ಷ್ಮೀ ಕೂರಿಸಿ ಪೂಜಿಸುವುದರಿಂದ ಮನೆ ಹೆಣ್ಣುಮಕ್ಕಳಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ನಡೆದು ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದ ಅಭಿವೃದ್ಧಿಯೇ ಲಯನ್ಸ್ ಧ್ಯೇಯ: ಡಾ.ಕೃಷ್ಣೇಗೌಡ
ಮಂಡ್ಯ: ೬೭ ಆಸ್ತಿ ಮಾಲೀಕರಿಂದ ರಾಜಕಾಲುವೆ ಒತ್ತುವರಿ..!