ವರ್ಚಗಲ್ ದುರ್ಗಾದೇವಿ ಜಾತ್ರೆ ಸಂಪನ್ನ

KannadaprabhaNewsNetwork |  
Published : May 20, 2024, 01:31 AM IST
ಲೋಕಾಪುರ | Kannada Prabha

ಸಾರಾಂಶ

ಲೋಕಾಪುರ ಸಮೀಪದ ವರ್ಚಗಲ್ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ನಿಮಿತ್ತ ಸಕಲ ಮಂಗಳವಾದ್ಯ ಮೇಳಗಳೊಂದಿಗೆ ವಿಜೃಂಭಣೆಯ ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಲೋಕಾಪುರಸಮೀಪದ ವರ್ಚಗಲ್ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ನಿಮಿತ್ತ ಸಕಲ ಮಂಗಳವಾದ್ಯ ಮೇಳಗಳೊಂದಿಗೆ ವಿಜೃಂಭಣೆಯ ಪಲ್ಲಕ್ಕಿ ಉತ್ಸವ ಮೆರವಣೆ ನಡೆಯಿತು.

ಬೆಳಗ್ಗೆಯಿಂದ ದೇವಿ ಮೂರ್ತಿಗೆ ಅಭಿಷೇಕ, ಹೋಮ ಹವನ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.

ಭಜನೆ, ಮಹಿಳೆಯರ ಆರತಿಯೊಂದಿಗೆ ದುರ್ಗಾದೇವಿ ದೇವಸ್ಥಾನದಿಂದ ಆರಂಭವಾದ ಪಲ್ಲಕ್ಕಿ ಉತ್ಸವಕ್ಕೆ ಭಕ್ತರು ಭಂಡಾರ ಎರಚಿ ಜೈ ಘೋಷ ಹಾಕಿ ಕುಣಿದು ಕುಪ್ಪಳಿಸಿದರು. ಮನೆ ಮುಂದೆ ಬಂದ ಪಲ್ಲಕ್ಕಿಗೆ ಭಕ್ತರು ಭಕ್ತಿಯಿಂದ ತುಂಬಿದ ಕೊಡದ ನೀರು ಸುರಿದು ಪೂಜೆ ಸಲ್ಲಿಸಿ ಬೆಲ್ಲ, ಸಕ್ಕರೆ ಬಾಳೆಹಣ್ಣು ನೈವೇದ್ಯ ಅರ್ಪಿಸಿದರು.

ಗ್ರಾಮದ ವಿವಿಧ ಬೀದಿಗಳಲ್ಲಿ ಸಂಚರಿಸಿದ ಪಲ್ಲಕ್ಕಿ ಉತ್ಸವ ದೇವಸ್ಥಾನಕ್ಕೆ ಮರಳಿತು. ಭಂಡಾರ ಹಾರಿಸುವುದು, ಸೇರಿದಂತೆ ವಿವಿಧ ಕಾರ್ಯಕ್ರಮ ಜರುಗಿದವು. ಬಳಿಕ ಭಕ್ತರು ದೇವಸ್ಥಾನ ಮುಂದೆ ಪಲ್ಲಕ್ಕಿ ಹೊತ್ತು ಕಿಚ್ಚ ಹಾಯ್ದರು.

ಇದೇ ಸಂದರ್ಭದಲ್ಲಿ ದೇವಸ್ಥಾನದ ಮುಖ್ಯ ಪೂಜಾರಿ ದುರ್ಗಪ್ಪ ಪೂಜಾರಿ ಜಗದೀಶ ಸ್ವಾಮೀಜಿ, ಪಾರಸ ಓಸ್ವಾಲ, ಸುಪಾರಸ್ ಓಸ್ವಾಲ, ಕುಶಾಲ ಗೋಕಾಕ, ಮಂಜುಗೌಡ ಪಾಟೀಲ, ಛಾಯಪ್ಪಗೌಡ ಪಾಟೀಲ, ಭಗವಂತಪ್ಪ ತುಳಸಿಗೇರಿ, ಹಣಮಂತಪ್ಪ ತುಳಸಿಗೇರಿ, ರಾಮನಗೌಡ ಪಾಟೀಲ, ಹಣಮಂತ ಹೂಗಾರ, ಬಸವರಾಜ ಹುಲ್ಲಿಕೇರಿ, ಸಂತಪ್ಪ ಮಾದರ, ಬಸಲಿಂಗಪ್ಪ ಕಟ್ಟಿ, ಸಿದ್ದು ಹಾದಿಮನಿ, ವರ್ಚಗಲ್ ಗ್ರಾಮಸ್ಥರು ಹಾಗೂ ದುರ್ಗಾದೇವಿ ಜಾತ್ರಾ ಕಮೀಟಿ ಸರ್ವಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ