ಕನ್ನಡಪ್ರಭವಾರ್ತೆ ಪಾವಗಡ
256 ಕೋಟಿ ರು. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಶೀಘ್ರ ಭೂಮಿಪೂಜೆ ಕಾರ್ಯ ನೆರವೇರಿಸಲಾಗುವುದಾಗಿ ಶಾಸಕ ಎಚ್.ವಿ.ವೆಂಕಟೇಶ್ ಅವರು ಹೇಳಿದರು. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.140 ಕೋಟಿಯಲ್ಲಿ ಬೈಪಾಸ್ ರಸ್ತೆ ಮಂಜೂರಾಗಿದ್ದು, ಸರ್ವೆ ಕಾರ್ಯ ನಡೆಯುತ್ತಿದೆ. ಕಾರ್ಮಿಕ ಮತ್ತು ಅಲ್ಪ ಸಂಖ್ಯಾತ ವಸತಿ ಶಾಲೆಗಳಿಗೆ 72 ಕೋಟಿ ರು. ಮಂಜೂರಾತಿ ಸೇರಿದಂತೆ. ಕುಕ್ಕೆ ಮತ್ತು ಘಾಟಿ ಸುಬ್ರಮಣ್ಯ ಸ್ವಾಮಿ ದೇವಸ್ಥಾನಗಳ ಮಾದರಿ ವಿಭಿನ್ನ ರೀತಿಯಲ್ಲಿ ತಾಲೂಕಿನ ನಾಗಲಮಡಿಕೆ ಅಂತ್ಯ ಸುಬ್ರಮಣ್ಯ ಸ್ವಾಮಿ ದೇಗುಲ ನಿರ್ಮಾಣಕ್ಕೆ 24 ಕೋಟಿ ರು. ಬಿಡುಗಡೆಯಾಗಿದೆ. ಪಟ್ಟಣದ ಪುರಸಭೆಯ 23 ವಾರ್ಡ್‌ಗಳ ಅಭಿವೃದ್ಧಿಗೆ 20 ಕೋಟಿ, ರೈಲ್ವೆ ಸಿಗ್ನಲ್‌ಗಳ ನಿರ್ಮಾಣಕ್ಕೆ 20 ಕೋಟಿ ಸೇರಿದಂತೆ ಪಟ್ಟಣದ ಜನತೆಗೆ 500 ನಿವೇಶನ ಮತ್ತು ವಸತಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದರು.2350 ಕೋಟಿ ರು. ವೆಚ್ಚದಲ್ಲಿ ತುಂಗಭದ್ರಾ ಕುಡಿಯುವ ನೀರಿನ ಯೋಜನೆ, ರೈಲ್ವೆ ಕಾಮಗಾರಿ ಶೇ.90 ಪೂರ್ಣ, ರ್ರಾಷ್ಟ್ರ ಬಳಿ 2 ಸಾವಿರ ಮೆಗಾ ವ್ಯಾಟ್ ಸೌರಪಾರ್ಕ್ ಜತೆಗೆ 400 ಕೆವಿ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಮುಂದಾಗಿದ್ದು, ಜನತೆಯ ಆರ್ಶೀವಾದದಿಂದ ಶಾಸಕನಾದೆ ಬಯಸದೇ ಮಾಜಿ ಸಚಿವರಾದ ಕೆ.ಎನ್. ರಾಜಣ್ಣರವರ ಇಚ್ಚೆದಂತೆ ತುಮುಲ್ ಅಧ್ಯಕ್ಷನಾಗಿ, ಜಿಲ್ಲಾ ಕೇಂದ್ರ ಬ್ಯಾಂಕ್ ನಿರ್ದೇಶಕನಾಗಿ ಕೂಡ ಆಯ್ಕೆಯಾಗಿದ್ದೇನೆ. ರೈತರಿಗೆ ಪಿಎಸ್‌ಎಸ್‌ಎನ್‌ಗಳ ಮೂಲಕ 100 ಕೋಟಿಗೂ ಹೆಚ್ಚು ಸಾಲ ಸೌಲಭ್ಯ ತಾಲೂಕಿಗೆ ಸಿಗಲಿದೆ ಎಂದರು.
ತುಮುಲ್ ನಿರ್ದೇಶಕ ಚಂದ್ರಶೇಖರ್ ರೆಡ್ಡಿ ಮಾತನಾಡಿ, ರೈತರಿಗೆ, ಹಾಲು ಉತ್ಪಾದಕರಿಗೆ ಹೆಚ್ಚು ಸಾಲಸೌಲಭ್ಯ ಕಲ್ಲಿಸುವುದು ನಮ್ಮ ಉದ್ದೇಶ ಹೊಂದಿದ್ದು, ಮರಣ ಹೊಂದಿರುವ ರಾಸುಗಳಿಗೆ ಪರಿಹಾರ. ಮೃತ ರೈತರಿಗೆ ಪರಿಹಾರ, ಹಾಲು ಉತ್ಪಾದಕರ ಮಕ್ಕಳಿಗೆ 18 ಹಾಸ್ಟೆಲ್ ಸೌಲಭ್ಯ ಕಲ್ಪಿಸಿದ್ದು, ನಿತ್ಯ 43 ಸಾವಿರ ಲೀ. ಹಾಲು ಉತ್ಪಾದನೆಯಾಗುತ್ತಿದೆ. ರೈತರಿಗೆ ಭೂಮಿ ಸಾಲ ಮತ್ತು ಮಹಿಳೆಯರಿಗೆ ಸ್ತ್ರೀಶಕ್ತಿ ಸಾಲ ಸೌಲಭ್ಯ ಸಂಘಗಳ ಮೂಲಕ ಕಲ್ಪಿಸಲಾಗುವುದೆಂದರು.ತುಮುಲ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ಮಾತನಾಡಿ, ಪಾವಗಡ ಹಿಂದುಳಿದ ಪ್ರದೇಶವಲ್ಲ, ವಿಶ್ವದಲ್ಲೇ ಮೂಂಚೂಣಿ ಪ್ರದೇಶ. ಸೌರ ವಿದ್ಯುತ್ ಉತ್ಪಾದನೆಯಿಂದ ವಿಶ್ವವೇ ಇತ್ತ ಮುಖ ಮಾಡಿ ನೋಡುವಂತಾಗಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಶಾಸಕರು, ತುಮುಲ್ ನಿರ್ದೇಶಕರು, ಜಿಲ್ಲಾ ಕೇಂದ್ರ ಬ್ಯಾಂಕ್ ನಿರ್ದೇಶಕರು ಪಾವಗಡದವರೆ ಆಗಿರುವ ಹಿನ್ನಲೆ ಅಭಿವೃದ್ಧಿಗೆ ಹಣದ ಕೊರತೆ ಎದುರಾಗದು ಎಂದರು.ಮುಖಂಡ ನರಸಿಂಹರೆಡ್ಡಿ, ತಾಲೂಕು ವ್ಯವಸ್ಥಾಪಕ ನಿರ್ದೇಶಕರಾದ ಸುನಿತಾ,ಪುರಸಭೆ ಮಾಜಿ ಅಧ್ಯಕ್ಷ ಪಿ.ಎಚ್. . ರಾಜೇಶ್, ಶಂಕರರೆಡ್ಡಿ ಸದಸ್ಯರಾದ ತೆಂಗಿನಕಾಯಿ ರವಿ, ಇತರೆ ಅನೇಕ ಮಂದಿ ಮುಖಂಡರು ಉಪಸ್ಥಿತರಿದ್ದರು.