ಪಹಲ್ಗಾಂ ಘಟನೆಗೆ ವಿವಿಧ ಮುಸ್ಲಿಂ ಸಂಘಟನೆಗಳ ಖಂಡನೆ

KannadaprabhaNewsNetwork | Published : Apr 25, 2025 11:53 PM

ಸಾರಾಂಶ

ಉಗ್ರರನ್ನು ಸದೆಬಡಿಯುವಂತೆ ಹಾಗೂ ದೇಶದಿಂದ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯುವಂತೆ ಮುಸ್ಲಿಂ ಸಂಘಟನೆಗಳು ಆಗ್ರಹಿಸಿದವು.ಈ ಸಂದರ್ಭದಲ್ಲಿ ಅಲ್ಫೇತೆ ಮಿಲಾದ್ ಕಮಿಟಿಯ ಸಂಸ್ಥಾಪಕ ಅಧ್ಯಕ್ಷ ಝಬಿವುಲ್ಲಾ ಬೇಗ್ ಮಾತನಾಡಿ, ನಮ್ಮ ತಾಯ್ನಾಡಿಗೆ ನಾವು ಋಣಿಯಾಗಿರಬೇಕು ನಮಗೆ ಗಾಳಿ, ನೀರು, ಅನ್ನ ಕೊಟ್ಟ ದೇಶವನ್ನು ಯಾರೂ ಕೂಡ ಮರೆಯಬಾರದು ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ಭೀಕರ, ಹೇಯ ಪೈಶಾಚಿಕ ದಾಳಿಯನ್ನು ಖಂಡಿಸಿ ವಿವಿಧ ಪರ ಮುಸ್ಲಿಂ ಸಂಘಟನೆಗಳ ವತಿಯಿಂದ ಶುಕ್ರವಾರ ತಹಸೀಲ್ದಾರ್ ಮುಖಾಂತರ ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಕೃತ್ಯ ನಡೆಸಿದ ಉಗ್ರರನ್ನು ಸದೆಬಡಿಯುವಂತೆ ಹಾಗೂ ದೇಶದಿಂದ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯುವಂತೆ ಮುಸ್ಲಿಂ ಸಂಘಟನೆಗಳು ಆಗ್ರಹಿಸಿದವು.ಈ ಸಂದರ್ಭದಲ್ಲಿ ಅಲ್ಫೇತೆ ಮಿಲಾದ್ ಕಮಿಟಿಯ ಸಂಸ್ಥಾಪಕ ಅಧ್ಯಕ್ಷ ಝಬಿವುಲ್ಲಾ ಬೇಗ್ ಮಾತನಾಡಿ, ನಮ್ಮ ತಾಯ್ನಾಡಿಗೆ ನಾವು ಋಣಿಯಾಗಿರಬೇಕು ನಮಗೆ ಗಾಳಿ, ನೀರು, ಅನ್ನ ಕೊಟ್ಟ ದೇಶವನ್ನು ಯಾರೂ ಕೂಡ ಮರೆಯಬಾರದು. ಆದರೆ ಇತ್ತೀಚೆಗೆ ನಡೆದ ದಾಳಿಯಿಂದ ಹಿಂದೂ ಹಾಗೂ ಮುಸ್ಲೀಮರ ನಡುವೆ ಸಾಮರಸ್ಯ ಹಾಳು ಮಾಡಲು ಹೊರಟಿದ್ದು, ಉಗ್ರರು ಮಾಡುವ ಕೃತ್ಯಕ್ಕೆ ನಾವೂ ಕೂಡ ಖಂಡಿಸುತ್ತೇವೆ. ಕಾಶ್ಮೀರದಂತಹ ಸ್ವರ್ಗವನ್ನು ರಕ್ತಸಿಕ್ತ ನಾಡಾಗಿ ಹಾಳು ಮಾಡಿದವರನ್ನು ಎನ್‌ಕೌಂಟರ್ ಮಾಡಬೇಕು ಎಂದು ಆಗ್ರಹಿಸಿದರು.

ಪಟ್ಟಣದ ಕೃಷ್ಣರಾಜೇಂದ್ರ ವೃತ್ತದಿಂದ ತಾಲೂಕು ಕಚೇರಿ ಆವರಣಕ್ಕೆ ಘೋಷಣೆಗಳನ್ನು ಕೂಗುವ ಮೂಲಕ ಉಗ್ರಗಾಮಿಗಳನ್ನು ಬಂಧಿಸುವಂತೆ ಆಗ್ರಹಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷರಾದ ಫರ್ಹ ಅನ್ನು, ಮಾಜಿ ಜಿಲ್ಲಾ ವಾಖ್ಫ್ ಮಂಡಳಿ ಸದಸ್ಯರಾದ ಸಾಯೀದ್ ಅಹಮದ್, ಸಂವಿಧಾನ ರಕ್ಷಣಾ ವೇದಿಕೆಯ ಸಂಸ್ಥಾಪಕರಾದ ಗೋವಿಂದರಾಜ್, ಸಮಾಜ ಸೇವಕರಾದ ಸಿ. ಟಿ. ಕುಮಾರಸ್ವಾಮಿ, ಮುಸ್ಲಿಂ ಮುಖಂಡರಾದ ಜಾವಿದ್ ಪಾಷಾ, ಅಬ್ದುಲ್ ಬಸಿದ್, ಮಮ್ಮದಿ, ಮುಜಾಮಿಲ್‌ ಐಟಿಐ, ಆದಿಲ್, ಉಪ್ರಾನ್, ತಂಜಿಮ್, ಬಾಬು, ಇಮ್ರಾನ್, ಸಿದ್ದು, ಮನ್ಸೂರ್, ಇಲ್ಯಾಜ್, ಸದ್ದಾಂ, ಅಜಾಮ್, ದಾದಾಪೀರ್, ಚಾಂದ್‌ಪಾಷ, ಸಮೀರ್, ಅಮ್ಜದ್ ಖಾನ್, ಸಮೀ ರಾಝ, ಮತ್ತು ಇನ್ನೂ ಹಲವು ಮುಖಂಡರು ಭಾಗವಹಿಸಿದ್ದರು.

Share this article