ಕನ್ನಡಪ್ರಭ ವಾರ್ತೆ ಮೈಸೂರುಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಿಧನಕ್ಕೆ ಮೈಸೂರಿನ ವಿವಿಧ ಒಕ್ಕಲಿಗ ನಾಯಕರು ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಭಾವಪೂರ್ಣ ನಮನ ಸಲ್ಲಿಸಲಾಯಿತುಹುಣಸೂರು ಮುಖ್ಯ ರಸ್ತೆಯ ಪಡುವಾರಹಳ್ಳಿಯ ಆದಿಚುಂಚನಗಿರಿ ಹಾಸ್ಟೆಲ್ ವೃತ್ತದ ಬಳಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಮೊಂಬತ್ತಿ ಹಿಡಿದು ಭಾವಪೂರ್ಣ ನಮನ ಸಲ್ಲಿಸಲಾಯಿತು.ಈ ಶ್ರದ್ಧಾಂಜಲಿ ಸಭೆಯಲ್ಲಿ ಮೈಸೂರು ಹಾಗೂ ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಭಾಗವಹಿಸಿ ಮಾತನಾಡಿ, ಈ ನಾಡು ಕಂಡ ಹೊಸ ದೂರದೃಷ್ಟಿ ಇದ್ದಂತಹ ರಾಜಕಾರಣಿಯಾಗಿ ಎಸ್.ಎಂ.ಕೃಷ್ಣ ಅವರಿದ್ದರು.ಮೈಸೂರು- ಬೆಂಗಳೂರು ನಾಲ್ಕು ಪಥದ ರಸ್ತೆ, ಮೈಸೂರು ರಿಂಗ್ ರಸ್ತೆ, ಮೈಸೂರು ಇನ್ ಫೋಸಿಸ್ ಸೇರಿ ಬೆಂಗಳೂರಿನಲ್ಲಿ ಐಟಿ ಬಿಟಿ ಸಾಧನೆಗೆ ಅವರು ಹಾಕಿಕೊಟ್ಟ ಅಭಿವೃದ್ಧಿ ಕಾರ್ಯಗಳೇ ಕಾರಣವಾಗಿದೆ ಎಂದರು.ನಮ್ಮ ರಾಜ್ಯವನ್ನಾಳಿದ ಅಪರೂಪದ ಮುಖ್ಯಮಂತ್ರಿಗಳಲ್ಲಿ ಮೇಲ್ಪಂಕ್ತಿಯ ಮುಖ್ಯಮಂತ್ರಿ ಆಗಿ ಸದಾ ಅವರ ಅಭಿವೃದ್ಧಿ ಕಾರ್ಯಗಳು ನಮ್ಮ ಎದುರು ನಿಲ್ಲುತ್ತವೆ ಎಂದು ತಿಳಿಸಿದರು.ಸಂತಾಪ ಸಭೆಯಲ್ಲಿ ಭಾಗವಹಿಸಿದ ಹಲವರು ಮೈಸೂರಿನಲ್ಲಿ ಯಾವುದಾದರೂ ಒಂದು ಪ್ರತಿಷ್ಠಿತ ವೃತ್ತಕ್ಕೆ ಅಥವಾ ಮುಖ್ಯ ರಸ್ತೆಗೆ ಎಸ್.ಎಂ. ಕೃಷ್ಣ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿದರು,ಮುಂಬರುವ ದಿನಗಳಲ್ಲಿ ಮೈಸೂರಿನಲ್ಲಿ ವಿಶೇಷವಾದ ಶ್ರದ್ದಾಂಜಲಿ ಸಮಾರಂಭ ಆಯೋಜಿಸುವ ಮೂಲಕ ಅವರ ಸಿದ್ಧಾಂತ, ವೈಚಾರಿಕತೆಗಳನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಸಂದೇಶ ನೀಡಬೇಕು ಎಂದು ನಿರ್ಧರಿಸಲಾಯಿತು.ಶ್ರದ್ಧಾಂಜಲಿ ವೇಳೆ ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ, ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಚೇತನ್, ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಬೀಡನಹಳ್ಳಿ ಸತೀಶ್ ಗೌಡ, ನಗರ ಪಾಲಿಕೆ ಮಾಜಿ ಸದಸ್ಯ ಎಸ್.ಬಿ.ಎಂ. ಮಂಜು, ಪ್ರೇಮಾ ಶಂಕರೇಗೌಡ, ರವಿ ರಾಜಕೀಯ, ಎಂ.ಕೆ. ನಂಜಯ್ಯ, ಕುಮಾರ್ ಗೌಡ, ಹೇಮಾ ನಂದೀಶ್, ವಸಂತ ಮುನಿಶ್, ಸುಮಿತ್ರಾ ರಮೇಶ್, ಶೇಖರ್, ಹನುಮಂತ, ರವಿಕುಮಾರ್, ಹೇಮಾ ಸಂತೋಷ್, ಆರ್. ಲೋಕೇಶ್, ರಾಜಕುಮಾರ್, ನೇಹಾ ನೈನಾ, ಉಮೇಶ್, ಪಡುವಾರಳ್ಳಿ ಯಜಮಾನರಾದ ತಿಮ್ಮಯ್ಯ, ಯೋಗೇಶ್, ಪೈ. ಚಿಕ್ಕಪುಟ್ಟಿ, ಕೃಷ್ಣಪ್ಪ, ಬೆಳವಾಡಿ ಶ್ರೀನಿವಾಸ್, ಗುರುರಾಜ್, ನಿಂಗರಾಜೇ ಗೌಡ ಮೊದಲಾದವರು ಇದ್ದರು.