ಸ್ವಚ್ಛ ಕೊಡಗು ಸುಂದರ ಕೊಡಗು ಅಭಿಯಾನದಲ್ಲಿ ಸೋಮವಾರಪೇಟೆ ಭಾಗದ ಹತ್ತಾರು ಸಂಘ ಸಂಸ್ಥೆಗಳು ಕೈ ಜೋಡಿಸಿದೆ.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಕೂರ್ಗ್ ಹೊಟೇಲ್- ರೆಸಾರ್ಟ್ ಅಸೋಸಿಯೇಷನ್ ವತಿಯಿಂದ ಕರೆ ನೀಡಿದ್ದ ಸ್ವಚ್ಛ ಕೊಡಗು- ಸುಂದರ ಕೊಡಗು ಅಭಿಯಾನದಲ್ಲಿ ಸೋಮವಾರಪೇಟೆ ಭಾಗದ ಹತ್ತಾರು ಸಂಘ ಸಂಸ್ಥೆಗಳು ಕೈಜೋಡಿಸಿದ್ದು, ಸುಮಾರು 8 ಕಿ.ಮೀ.ವರೆಗೆ ಸ್ವಚ್ಛತಾ ಕಾರ್ಯ ನಡೆಸಿದರು.ಇಲ್ಲಿನ ವಿವೇಕಾನಂದ ವೃತ್ತದಲ್ಲಿ ಅಸೋಸಿಯೇಷನ್‌ನ ಪ್ರಮುಖರಾದ ಬಿ.ಎಸ್. ಸುಂದರ್ ಅವರು ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್‌ಕುಮಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ತಾಲೂಕು ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷ ರೋಹಿತ್ ಈ ಸಂದರ್ಭ ಪಪಂ ಸದಸ್ಯರಾದ ಶೀಲಾ ಡಿಸೋಜ, ಬಿ.ಸಿ. ವೆಂಕಟೇಶ್, ಲಯನ್ಸ್ ಅಧ್ಯಕ್ಷ ಬಿ.ಎಂ. ರಾಮ್‌ಶೆಟ್ಟಿ, ರೋಟರಿ ಪ್ರಮುಖರಾದ ಪಿ.ಕೆ. ರವಿ, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ, ವರ್ತಕರ ಸಂಘದ ಅಧ್ಯಕ್ಷ ಧನುರಾಜ್, ಮೋಟಾರ್ ಯೂನಿಯನ್ ಅಧ್ಯಕ್ಷ ಬಾಲಕೃಷ್ಣ, ಎಸಿಎಫ್ ಗೋಪಾಲ್, ಆರ್‌ಎಫ್‌ಓ ಶೈಲೇಂದ್ರ, ಬಿಜೆಪಿ ಮುಖಂಡ ಮನುಕುಮಾರ್ ರೈ, ಮಹೇಶ್ ತಿಮ್ಮಯ್ಯ, ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ, ಕರವೇ ಅಧ್ಯಕ್ಷ ಕೆ.ಎನ್. ದೀಪಕ್, ಜನಧ್ವನಿ ವೇದಿಕೆಯ ಪ್ರಸನ್ನ, ಜೇಸೀ ಅಧ್ಯಕ್ಷೆ ಜಗದಾಂಭ ಸೇರಿದಂತೆ ಇತರ ಸಂಘ ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು ಇದ್ದರು.
ವಿವೇಕಾನಂದ ವೃತ್ತದಿಂದ ಕೋವರ್‌ಕೊಲ್ಲಿವರೆಗೆ ರಸ್ತೆಯ ಇಕ್ಕೆಲಗಳಲ್ಲಿದ್ದ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು. ಅರಣ್ಯ ಇಲಾಖೆಯವರು ಕಾರೇಕೊಪ್ಪ, ಯಡವನಾಡು ಭಾಗದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಟಾಟಾ ಕಾಫಿ ಸಂಸ್ಥೆಯ ಕಾರ್ಮಿಕರು ಕೋವರ್‌ಕೊಲ್ಲಿಯಿಂದ ಐಗೂರು ಮಾರ್ಗದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.
ಅಭಿಯಾನದಲ್ಲಿ ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಚೌಡ್ಲು, ಬೇಳೂರು ಗ್ರಾಮ ಪಂಚಾಯಿತಿ, ಹೋಂ ಸ್ಟೇ ಅಸೋಸಿಯೇಷನ್, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಜೇಸಿಐ, ಇನ್ನರ್ ವೀಲ್, ಚೇಂಬರ್ ಆಫ್ ಕಾಮರ್ಸ್, ಶ್ರೀನಾರಾಯಣ ಗುರು ಸೇವಾ ಸಮಿತಿ, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ, ಹಿರಿಯ ನಾಗರಿಕರ ಸೇವಾ ಟ್ರಸ್ಟ್, ಕರ್ನಾಟಕ ರಕ್ಷಣಾ ವೇದಿಕೆ, ಮೋಟಾರು ಕೆಲಸಗಾರರು ಮತ್ತು ಮಾಲೀಕರ ಸಂಘ, ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘ, ಜನಧ್ವನಿ ವೇದಿಕೆ, ತಾಲೂಕು ಒಕ್ಕಲಿಗರ ಸಂಘ, ಒಕ್ಕಲಿಗರ ಯುವ ವೇದಿಕೆ, ತಾಲೂಕು ರೈತ ಹೋರಾಟ ಸಮಿತಿ, ನಗರ ಒಕ್ಕಲಿಗರ ಸಂಘ, ಟಾಟಾ ಕಾಫಿ ಸಂಸ್ಥೆ, ಸ್ಕೌಟ್ ಮತ್ತು ಗೈಡ್ಸ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಗರಗಂದೂರು ಬಿ.ಎಸ್ಟೇಟ್, ಅರಣ್ಯ ಇಲಾಖೆ, ಯಡವಾರೆ ಗೌಡ ಸಮಾಜ, ಪೊಲೀಸ್ ಇಲಾಖೆ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸ್ವಯಂ ಸೇವಕರು ಭಾಗಿಯಾಗಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.