ಪೌರ ನೌಕರರ ಮುಷ್ಕರಕ್ಕೆ ವಿವಿಧ ಸಂಘಟನೆಗಳ ಬೆಂಬಲ

KannadaprabhaNewsNetwork |  
Published : May 30, 2025, 12:12 AM IST
ಹಿರೇಕೆರೂರು ಪಪಂ ಕಾರ್ಯಾಲಯದ ಎದುರು ಕರ್ನಾಟಕ ಪೌರ ಕಾರ್ಮಿಕರ ಸಂಘದ ವತಿಯಿಂದ ನಡೆಯುತ್ತಿರುವ ಮುಷ್ಕರ ಗುರುವಾರವೂ ಮುಂದುವರಿದಿದೆ. | Kannada Prabha

ಸಾರಾಂಶ

ನೀರು ಸರಬರಾಜು ಹಾಗೂ ಸ್ವಚ್ಛತೆಗೆ ಮಳೆ-ಬಿಸಿಲು ಲೆಕ್ಕಿಸದೇ ಹಗಲಿರುಳು ಶ್ರಮಿಸುತ್ತಿರುವ ಎಲ್ಲ ಸ್ಥಳೀಯ ಸಂಸ್ಥೆಯ ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ, ಜ್ಯೋತಿ ಸಂಜಿವಿನಿ, ಕೆಜಿಐಡಿ ಸೇರಿದಂತೆ ಸರ್ಕಾರಿ ನೌಕರರು ಪಡೆಯುವ ಎಲ್ಲ ಸೌಲಭ್ಯಗಳನ್ನು ನೀಡಬೇಕು.

ಹಿರೇಕೇರೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪೌರ ಕಾರ್ಮಿಕರ ಸಂಘದ ವತಿಯಿಂದ ಇಲ್ಲಿಯ ಪಪಂ ಕಾರ್ಯಾಲಯದ ಎದುರು ಮೂರು ದಿವಸಗಳಿಂದ ನಡೆಸುತ್ತಿರುವ ಮುಷ್ಕರ ಗುರುವಾರವೂ ಮುಂದುವರಿದಿದೆ. ಹಲವು ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿದವು.

ಪಟ್ಟಣದ ನೀರು ಸರಬರಾಜು ಹಾಗೂ ಸ್ವಚ್ಛತೆಗೆ ಮಳೆ-ಬಿಸಿಲು ಲೆಕ್ಕಿಸದೇ ಹಗಲಿರುಳು ಶ್ರಮಿಸುತ್ತಿರುವ ಎಲ್ಲ ಸ್ಥಳೀಯ ಸಂಸ್ಥೆಯ ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ, ಜ್ಯೋತಿ ಸಂಜಿವಿನಿ, ಕೆಜಿಐಡಿ ಸೇರಿದಂತೆ ಸರ್ಕಾರಿ ನೌಕರರು ಪಡೆಯುವ ಎಲ್ಲ ಸೌಲಭ್ಯಗಳನ್ನು ನೀಡಬೇಕು. ಹೊರಗುತ್ತಿಗೆ ಅಡಿಯಲ್ಲಿ ಕೆಲಸ ನಿರ್ವಯಿಸುತ್ತಿರುವ ನೀರು ಸರಬರಾಜು, ಚಾಲಕರು, ಲೋರ್ಡಸ್, ಕ್ಲೀನರ್ಸ್, ಕಾವಲುಗಾರ, ಸೂಪರ್‌ವೈಸರ್‌, ಸ್ಯಾನಿಟರಿ, ಬೀದಿದೀಪ ಸಹಾಯಕರು ಸೇರಿದಂತೆ ವಿವಿಧ ವೃಂದದ ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು ಎಂದು ಮನವಿ ಮಾಡಿಕೊಂಡರು.

ಈ ವೇಳೆ ಡಿಎಸ್‌ಎಸ್‌ ಮುಖಂಡ ಮಾದೇವಪ್ಪ ಮಾಳಮ್ಮನವರ ಮುಷ್ಕರದಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು.

ಪೌರ ಕಾರ್ಮಿಕ ನೌಕರರ ಸಂಘದ ತಾಲೂಕು ಅಧ್ಯಕ್ಷ ಭರಮಪ್ಪ ಕಡೇಮನಿ, ಉಪಾಧ್ಯಕ್ಷ ನಾಗರಾಜ ತಿಪ್ಪಣ್ಣನವರ, ಡಿಎಸ್‌ಎಸ್‌ ಮುಖಂಡ ಮಾದೇವಪ್ಪ ಮಾಳಮ್ಮನವರ, ಶಿವು ಬಾಳಂಬೀಡ, ಮಮತಾ ಪಾಟೀಲ್, ನಾಗರಾಜ ಮಾಳಿ, ರಾಜೇಶ್ವರಿ ಹರಪ್ಪನಹಳ್ಳಿ, ಪ್ರವೀಣ ಮುಗಳಹಳ್ಳಿ, ರವೀಂದ್ರ ತಳವಾರ, ರವಿ ಬಾಳಂಬೀಡ, ಕುಮಾರ ಮುದೇನೂರು, ಮಂಜು ವಡ್ಡರ್, ಲೋಕಪ್ಪ ಎ.ಕೆ., ಲೋಹಿತ್ ತಿರಕಪ್ಪನವರ್, ಮಂಜು ಓಲೇಕಾರ್, ಕಿರಣ ಹರಿಜನ, ಪರಶುರಾಮ ಮುಗಳಹಳ್ಳಿ, ಬಸವರಾಜ ಬಸಣನವರ್, ದುರಗಪ್ಪ ತಿರಕಪ್ಪನವರ್, ಬಸವರಾಜ ಎ.ಕೆ. ಹಾಗೂ ಪೌರ ಕಾರ್ಮಿಕರು ಇದ್ದರು.3ನೇ ದಿನಕ್ಕೆ ಕಾಲಿಟ್ಟ ಪೌರ ನೌಕರರ ಮುಷ್ಕರ

ರಾಣಿಬೆನ್ನೂರು: ಸರ್ಕಾರಿ ನೌಕರರು ಎಂದು ಪರಿಗಣಿಸಿ ಸೌಲಭ್ಯ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸ್ಥಳೀಯ ನಗರಸಭೆ ಪೌರ ನೌಕರರು ನಗರಸಭೆ ಕಚೇರಿ ಮುಂಭಾಗದ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಗುರುವಾರ 3ನೇ ದಿನಕ್ಕೆ ಕಾಲಿಟ್ಟಿದೆ.ಕರ್ನಾಟಕ ನಾಗರೀಕ ಸೇವಾ ನಿಯಮ ಅಧಿನಿಯಮ 1978ನ್ನು ಪೌರ ಸೇವಾ ನೌಕರರಿಗೆ ಅನ್ವಯಿಸಬೇಕು ಹಾಗೂ ಪಂಚಾಯತ್‌ರಾಜ್ ಇಲಾಖೆ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಿರುವ ರೀತಿಯಲ್ಲಿಯೇ ರಾಜ್ಯದ ನಗರ ಸ್ಥಳೀಯ ಸಂಸ್ಥೆ ನೌಕರರನ್ನು ಪರಿಗಣಿಸಬೇಕು.

ಜಿಪಿಎಫ್, ಕೆಜಿಐಡಿ, ಜ್ಯೋತಿ ಸಂಜೀವಿನಿ ಸೇರಿದಂತೆ ಸರ್ಕಾರಿ ನೌಕರರು ಪಡೆಯುವ ಎಲ್ಲ ಸೌಲಭ್ಯಗಳನ್ನು ಪೌರ ಸೇವಾ ನೌಕರರಿಗೆ ಒದಗಿಸಲು ಕಾಯ್ದೆ ಮತ್ತು ನಿಯಮಗಳಿಗೆ ಅಗತ್ಯ ತಿದ್ದುಪಡಿ ಮಾಡುವುದು ಸೇರಿದಂತೆ 19 ಬೇಡಿಕೆಗಳನ್ನು ಈಡೇರಿಸಬೇಕು ಎನ್ನುವುದು ಪ್ರತಿಭಟನಾಕಾರರು ಆಗ್ರಹವಾಗಿದೆ.ವೇದಿಕೆ ಬೆಂಬಲ: ಪೌರ ನೌಕರರ ಮುಷ್ಕರಕ್ಕೆ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮುಷ್ಕರದ ಸ್ಥಳಕ್ಕೆ ತೆರಳಿ ಪ್ರತಿಭಟನಾನಿರತರಿಗೆ ಬೆಂಬಲ ವ್ಯಕ್ತಪಡಿಸಿ ಕೂಡಲೇ ಸರ್ಕಾರ ನೌಕರರ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸ್ಥಳೀಯ ಸಂಘಟನೆಯ ಅಧ್ಯಕ್ಷ ಏಳುಕೋಟೆಪ್ಪ ಗೋಣಿಬಸಮ್ಮನವರ, ಕಾರ್ಯದರ್ಶಿ ಮಾಧವ ಸಾತೇನಹಳ್ಳಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಬಿ. ಮರಿಗೌಡ್ರ, ಪ್ರಭು ಬಾಲೆಹೊಸೂರ, ಎಂ.ಆರ್. ಮಂಜುನಾಥ, ಗಣೇಶ ಪಾಸಿಗಾರ, ವಾಣಿಶ್ರೀ, ನಿಂಗಪ್ಪ ಮಧುಕರಿಯಪ್ಪನವರ, ದಿಳ್ಳೆಪ್ಪ ಅಂಕಸಾಪುರ, ನಿಖಿತಾ ಮೆಣಸಿನಹಾಳ, ಬಿ. ವಸಂತ, ಎಸ್.ಪಿ. ದೊಡ್ಡಮನಿ, ಎನ್.ಬಿ. ಕೋರಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ