ಜಿ.ಎಸ್.ಬಿ. ಹತ್ತು ಸಮಸ್ಥರ ಸಂಘಟನೆಯ ಕಾರ್ಯದರ್ಶಿ ಹೇಳಿಕೆಕನ್ನಡಪ್ರಭ ವಾರ್ತೆ ಭಟ್ಕಳ
ಶ್ರೀ ವಡೇರ ಮಠದಲ್ಲಿ ಶ್ರೀಗಳ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಈಗಾಗಲೇ ನಮ್ಮ ವಡೇರ ಮಠದಲ್ಲಿ ಮೇ ೧೭ರಿಂದ ಲಕ್ಷ ಪ್ರದಕ್ಷಿಣೆ ಸೇವೆಯು ಸಂಕಲ್ಪದೊಂದಿಗೆ ಆರಂಭವಾಗಿದ್ದು, ಪ್ರತಿ ದಿನ ಬೆಳಗ್ಗೆ ೭ ಗಂಟೆಯಿಂದ ೯ರ ತನಕ ಭಜನೆ, ಶ್ರೀರಾಮ ನಾಮ ಜಪ, ವಸಂತ ಪೂಜೆ, ಪನಿವಾರ ಪ್ರಸಾದ ವಿತರಣೆ ನಡೆಯಲಿದೆ ಎಂದರು.
ಜೂ.೧ರಂದು ಸಂಜೆ ೭ ಗಂಟೆಗೆ ಶ್ರೀ ಗುರುಗಳ ಆಗಮನ, ಶ್ರೀ ದೇವರ ಭೇಟಿ, ಸ್ವಾಗತ, ಪಾದ್ಯ ಪೂಜೆ, ಶ್ರೀಗಳ ಆಶೀರ್ವಚನ, ರಾತ್ರಿ ಶ್ರೀ ಮಠದ ದೇವರ ಪೂಜೆ, ಪ್ರಸಾದ ಭೊಜನ ನಡೆಯಲಿದೆ. ಜೂ.೨ರಿಂದ ಜೂ.೧೨ರ ತನಕ ಪ್ರತಿ ದಿನ ಬೆಳಗ್ಗೆ ೭ ಗಂಟೆಗೆ ಸುಪ್ರಭಾತ, ನೈರ್ಮಲ್ಯ ವಿಸರ್ಜನೆ, ೯ ರಿಂದ ಶ್ರೀ ಸಂಸ್ಥಾನ ದೇವರಲ್ಲಿ ಅಪೂಪ ದಾನ ದೀಪ ದಾನ ಸೇವೆ ಕೃಷ್ಣಾರ್ಪಣೆ ನಡೆಯಲಿದೆ. ಮಧ್ಯಾಹ್ನ ೧೨.೩೦ಕ್ಕೆ ಶ್ರೀ ಸಂಸ್ಥಾನ ದೇವರ ಮಹಾಪೂಜೆ, ಶ್ರೀ ಗೋಪಾಲಕೃಷ್ಣ ದೇವರ ಪೂಜೆ, ಭಿಕ್ಷಾ ಸಮರ್ಪಣೆ, ೧ ಗಂಟೆಗೆ ಮಹಾ ಅನ್ನಸಂತರ್ಪಣೆ, ೨ ಗಂಟೆಗೆ ಪಾದ್ಯ ಪೂಜೆ, ಫಲಮಂತ್ರಾಕ್ಷತೆ ನಡೆಯಲಿದೆ. ಸಂಜೆ ೭ ಗಂಟೆಗೆ ಶ್ರೀ ಸಂಸ್ಥಾನ ದೇವರ ಎದುರು ಭಜನೆ, ಶ್ರೀ ರಾಮರಕ್ಷಾ ಸ್ತೋತ್ರ ಪಠಣ, ಶ್ರೀ ವೀರ ವಿಠಲಾಷ್ಠಕ ಪಠಣ, ಶ್ರೀ ರಾಮನಾಮ ಜಪ, ರಾತ್ರಿ ಪೂಜೆ, ಸಾಮೂಹಿಕ ಪ್ರದಕ್ಷಿಣೆ, ಪನಿವಾರ ಪ್ರಸಾದ ನಡೆಯಲಿದೆ ಎಂದು ಹೇಳಿದರು.ಅಧಿಕ ಮಾಸದ ಸಮಯಲ್ಲಿ ಜೂ.೨ರಿಂದ ಜೂ.೮ರ ತನಕ ಪ್ರತಿ ದಿನ ಸಂಜೆ ೫ ಗಂಟೆಗೆ ವೇ.ಮೂ.ರಾಮಕೃಷ್ಣ ಭಟ್ಟ ಬೆಂಗಳೂರು ಇವರಿಂದ ಭಾಗವತ ಪ್ರವಚನ ನಡೆಯಲಿದೆ. ಜೂ.೫ರಂದು ಸಂಜೆ ಬೆಳಗ್ಗೆ ೯ ಗಂಟೆಗೆ ಜಿ.ಎಸ್.ಬಿ. ಮಹಿಳಾ ಸಂಘಟನೆಯಿಂದ ಲಕ್ಷ ಕುಂಕುಮಾರ್ಚನೆ, ಜೂ.೬ರಂದು ಶ್ರೀಗಳ ದಿವ್ಯ ಹಸ್ತದಿಂದ ರುಕ್ಮಿಣಿ ಸತ್ಯಭಾಮಾ ಸಹಿತ ಶ್ರೀ ಗೋಪಾಲಕೃಷ್ಣ ದೇವರಿಗೆ ಶತಕಲಶಾಭಿಷೇಕ, ಜೂ.೭ರಂದು ಬೆಳಗ್ಗೆ ೯.೩೦ರಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ರಕ್ತದಾನ ಶಿಬಿರ, ಜೂ.೯ರಂದು ಬೆಳಗ್ಗೆ ೯ ಗಂಟೆಗೆ ಲಕ್ಷ ಪ್ರದಕ್ಷಿಣೆ ಸೇವೆ ಸಂಪನ್ನ, ಪುರುಷೋತ್ತಮ ಪೂಜೆ, ಬ್ರಾಹ್ಮಣ ಪೂಜೆ, ಸಂಜೆ ೫ ಗಂಟೆಗೆ ಧರ್ಮ ಸಭೆ ನಡೆಯಲಿದೆ. ಜೂ.೧೦ರಂದು ಲಕ್ಷ ತುಳಸಿ ಅರ್ಚನೆ, ಜೂ.೧೧ರಂದು ಏಕಾದಶಿ ಅಖಂಡ ಭಜನೆ ಪ್ರಾರಂಭ, ಜೂ.೧೨ರಂದು ದೀಪ ವಿಸರ್ಜನೆ ಮೂಲಕ ಏಕಾದಶಿ ಭಜನೆ ಮಂಗಲ, ಸಂಜೆ ಹತ್ತು ಸಮಸ್ತರಿಂದ ಶ್ರೀಗಳ ಪಾದ್ಯಪೂಜೆ, ಶ್ರೀಗಳಿಂದ ಆಶೀರ್ವಚನ ಹಾಗೂ ಶ್ರೀಗಳನ್ನು ಮುಂದಿನ ಮೊಕ್ಕಾಂಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಲಿದೆ ಎಂದೂ ತಿಳಿಸಿದರು.