ಆ.30ರಿಂದ ಸೆ.9ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ

KannadaprabhaNewsNetwork |  
Published : Aug 28, 2024, 12:47 AM IST
27ಎಚ್‍ಆರ್‍ಆರ್3 ಹರಿಹರದ ಆರೋಗ್ಯ ಮಾತೆ ಚರ್ಚ್‍ನ ಧರ್ಮಗುರು ಕೆ.ಎ. ಜಾರ್ಜ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಫಾ.ರಿಚರ್ಡ್ ಮತ್ತು ಫ್ರಾನ್ಸಿಸ್ ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಮೇರಿ ಮಾತೆಯ ಪರಿಶುದ್ಧ ಜೀವನ ನಮ್ಮೇಲ್ಲರ ಬಾಳಿಗೆ ಪಾವನತೆಯ ಚೇತನ ಎಂಬ ಧ್ಯೇಯ ವಾಕ್ಯದೊಂದಿಗೆ ಇಲ್ಲಿನ ಬಸಿಲಿಕ ಆರೋಗ್ಯ ಮಾತೆ ಚರ್ಚ್‍ನಲ್ಲಿ ವಾರ್ಷಿಕೋತ್ಸವ ನಿಮಿತ್ತ ಆ.30ರಿಂದ ಸೆ.9ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹರಿಹರ ಆರೋಗ್ಯ ಮಾತೆ ಚರ್ಚ್‌ ಧರ್ಮಗುರು ಕೆ.ಎ.ಜಾರ್ಜ್ ಹರಿಹರದಲ್ಲಿ ಹೇಳಿದ್ದಾರೆ.

- ಹರಿಹರ ಆರೋಗ್ಯ ಮಾತೆ ಚರ್ಚ್‌ ಧರ್ಮಗುರು ಕೆ.ಎ. ಜಾರ್ಜ್ ಮಾಹಿತಿ - - - - ಮೇರಿ ಮಾತೆ ಪರಿಶುದ್ಧ ಜೀವನ ನಮ್ಮೇಲ್ಲರ ಬಾಳಿಗೆ ಪಾವನತೆಯ ಚೇತನ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಕ್ರಮ

- ಶಿವಮೊಗ್ಗ ವಲಯ ಧರ್ಮಾಧ್ಯಕ್ಷ ಡಾ.ಫ್ರಾನ್ಸಿಸ್ ಸೆರಾವೋ, ಇಂಧನ ಸಚಿವ ಕೆ.ಜೆ. ಜಾರ್ಜ್‌ ಭಾಗಿ

- - - ಕನ್ನಡಪ್ರಭ ವಾರ್ತೆ ಹರಿಹರ

ಮೇರಿ ಮಾತೆಯ ಪರಿಶುದ್ಧ ಜೀವನ ನಮ್ಮೇಲ್ಲರ ಬಾಳಿಗೆ ಪಾವನತೆಯ ಚೇತನ ಎಂಬ ಧ್ಯೇಯ ವಾಕ್ಯದೊಂದಿಗೆ ಇಲ್ಲಿನ ಬಸಿಲಿಕ ಆರೋಗ್ಯ ಮಾತೆ ಚರ್ಚ್‍ನಲ್ಲಿ ವಾರ್ಷಿಕೋತ್ಸವ ನಿಮಿತ್ತ ಆ.30ರಿಂದ ಸೆ.9ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹರಿಹರ ಆರೋಗ್ಯ ಮಾತೆ ಚರ್ಚ್‌ ಧರ್ಮಗುರು ಕೆ.ಎ. ಜಾರ್ಜ್ ಹೇಳಿದರು.

ಮಂಗಳವಾರ ಚರ್ಚ್ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.30ರಂದು ಸಂಜೆ 5.30ಕ್ಕೆ ಶಿವಮೊಗ್ಗ ವಲಯ ಧರ್ಮಾಧ್ಯಕ್ಷ ಡಾ.ಫ್ರಾನ್ಸಿಸ್ ಸೆರಾವೋ ಎಸ್.ಜೆ. ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್‌ ಅವರು ಧ್ವಜಾರೋಹಣ ಮೂಲಕ ವಾರ್ಷಿಕೋತ್ಸವಕ್ಕೆ ಚಾಲನೆ ನೀಡುವರು ಎಂದರು.

ಆ.30ರಿಂದ ಸೆ.7ರವರೆಗೆ ಪ್ರತಿದಿನ ಸಂಜೆ 5.30ರಿಂದ ಮೆರವಣಿಗೆ, ನವೇನ, ಪುಷ್ಪಾರ್ಪಣೆ, ಪವಿತ್ರ ಬಲಿಪೂಜೆ, ಪರಮ ಪ್ರಸಾದದ ಆರಾಧನೆ, ರೋಗ ಸೌಖ್ಯಕ್ಕಾಗಿ ಪ್ರಾರ್ಥನೆ, ಅನ್ನ ಸಂತರ್ಪಣೆ ನಡೆಯಲಿವೆ. ಸೆ.7ರಂದು ಸಂಜೆ 5.30ಕ್ಕೆ ಸಾಂಭ್ರಮಿಕ ಬಲಿಪೂಜೆ ಕಾರವಾರದ ಧರ್ಮಾಧ್ಯಕ್ಷ ಡುಮಿಂಗ್ ಡಯಾಸ್ ಅವರಿಂದ ಪೂಜಾರ್ಪಣೆ ನಡೆಯಲಿದೆ ಎಂದರು.

ಸೆ.8ರಂದು ಬೆಳಗ್ಗೆ 5.15ರಿಂದ ಭದ್ರಾವತಿ ಧರ್ಮಾಧ್ಯಕ್ಷ ಜೋಸೆಫ್ ಅರುಮಚಾಡತ್ ಅವರಿಂದ ಕನ್ನಡ, ತೆಲುಗು, ಮಲಯಾಳಂ ಮತ್ತು ಕಾರವಾರದ ಧರ್ಮಾಧ್ಯಕ್ಷ ಡುಮಿಂಗ್ ಡಯಾಸ್ ತಮಿಳು, ಇಂಗ್ಲಿಷ್ ಭಾಷೆಯಲ್ಲಿ ಪೂಜಾರ್ಪಣೆ, ಶಿವಮೊಗ್ಗ ಧರ್ಮಾಧ್ಯಕ್ಷ ಫ್ರಾನ್ಸಿಸ್ ಸೆರಾವೊ ಎಸ್.ಜೆ. ಅವರಿಂದ ಕನ್ನಡದಲ್ಲಿ ಸಾಂಭ್ರಮಿಕ ಬಲಿಪೂಜೆ ನಡೆಯಲಿದೆ. ಸಂಜೆ 5 ರಿಂದ ಚರ್ಚ್‍ನಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಪುಷ್ಪಾಲಂಕೃತ ತೇರಿನ ಮಹಾ ಮೆರವಣಿಗೆ ನಡೆಯಲಿದೆ. ಸೆ.9ರಂದು ಬೆಳಗ್ಗೆ 8, 10.30, ಮಧ್ಯಾಹ್ನ 12, 4 ಗಂಟೆಗೆ ಬಲಿಪೂಜೆ ನಡೆಯಲಿವೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಫಾ.ರಿಚರ್ಡ್ ಮತ್ತು ಫ್ರಾನ್ಸಿಸ್ ಉಪಸ್ಥಿತರಿದ್ದರು.

- - - -27ಎಚ್‍ಆರ್‍ಆರ್3:

ಹರಿಹರದ ಆರೋಗ್ಯ ಮಾತೆ ಚರ್ಚ್‌ ಧರ್ಮಗುರು ಕೆ.ಎ. ಜಾರ್ಜ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಫಾ.ರಿಚರ್ಡ್ ಮತ್ತು ಫ್ರಾನ್ಸಿಸ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ