ಕುಶಾಲನಗರ: ವಸಂತ ಸಂಭ್ರಮದ ಸಿರಿ ಕವಿಗೋಷ್ಠಿ

KannadaprabhaNewsNetwork |  
Published : Apr 28, 2025, 11:46 PM IST
ಕಾರ್ಯಕ್ರಮ ಉದ್ಘಾಟನೆ ಸಂದರ್ಭ | Kannada Prabha

ಸಾರಾಂಶ

ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ಹಾಗೂ ಕನ್ನಡ ಸಿರಿ ಸ್ನೇಹ ಬಳಗದ ಜಿಲ್ಲಾ ಘಟಕಗಳ ಆಶ್ರಯದಲ್ಲಿ ವಸಂತ ಸಂಭ್ರಮದ ಸಿರಿ ಕವಿಗೋಷ್ಠಿ ಕುಶಾಲನಗರದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಸಿರಿ ಸ್ನೇಹ ಬಳಗದ ಜಿಲ್ಲಾ ಘಟಕಗಳ ಆಶ್ರಯದಲ್ಲಿ ವಸಂತ ಸಂಭ್ರಮದ ಸಿರಿ ಕವಿಗೋಷ್ಠಿ ಕುಶಾಲನಗರದಲ್ಲಿ ನಡೆಯಿತು.ಸ್ಥಳೀಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಕಣಿವೆ ಸಾಹಿತಿ ಭಾರದ್ವಾಜ್ ಕೆ. ಆನಂದ ತೀರ್ಥ ನೆರವೇರಿಸಿದರು. ನಂತರ ಮಾತಾನಾಡಿದ ಅವರು ಕವಿತೆಗಳ ರಚನೆಯ ಜೊತೆಯಲ್ಲಿ ಯುವ ಕವಿಗಳು ಕವಿತೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕಾಗಿದೆ, ಅವುಗಳನ್ನು ಅರ್ಥೈಸಿಕೊಳ್ಳುವ ಮೂಲಕ ಉತ್ತಮ ಗುಣಮಟ್ಟದ ಕಾವ್ಯಗಳನ್ನು ರಚಿಸಲು ಪೂರಕವಾಗುವುದು . ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸಿ, ಕ್ರಿಯಾಶೀಲವಾಗಿ ಅಭ್ಯಾಸ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತ್ ನ ಅಧ್ಯಕ್ಷ ‌ಬಿ.ಎಸ್. ಲೋಕೇಶ್ ಸಾಗರ್ ವಹಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಶಿರಂಗಾಲ ಪದವಿಪೂರ್ವ ಕಾಲೇಜು ಶಿಕ್ಷಕ ಹಂಡ್ರಂಗಿ ನಾಗರಾಜ್, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನ ನಿರ್ದೇಶಕ ಎಂ. ಧನಂಜಯ, ಪೀಪಲ್ಸ್ ಪಾರ್ಕ್ ಕಾಲೇಜು ಮೈಸೂರಿನ ಉಪನ್ಯಾಸಕರಾದ ಪಿ. ಎಸ್ ಜಾನ್, ಜಿಲ್ಲಾ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತ್ ಜಿಲ್ಲಾ ಕಾರ್ಯದರ್ಶಿ ತಮ್ಮಯ್ಯ, ನಿವೃತ್ತ ಕಲಾ ಶಿಕ್ಷಕ ಊ. ರಾ. ನಾಗೇಶ್, ನಿವೃತ್ತ ಉಪನ್ಯಾಸಕ ಭೋಜಣ್ಣ ರೆಡ್ಡಿ, ಬಳಗದ ಪ್ರಮುಖರಾದ ಕೆ ಕೆ. ನಾಗರಾಜಶೆಟ್ಟಿ, ಹೇಮಂತ್ ಪಾರೇರಾ, ಸೇರಿದಂತೆ ಸದಸ್ಯರು ಇದ್ದರು.ಜಿಲ್ಲೆಯ 30ಕ್ಕೂ ಹೆಚ್ಚು ಕವಿಗಳು ಸ್ವ ರಚಿತ ಕವನಗಳನ್ನು ವಾಚಿಸಿದರು. ಊ. ರಾ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. ಶರ್ಮೀಳಾ ರಮೇಶ್ ಪ್ರಾರ್ಥಿಸಿದರು. ರಾಣಿ ರವೀಂದ್ರ ಸ್ವಾಗತಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!