ಕನ್ನಿಕಾಪರಮೇಶ್ವರಿ ದೇಗುಲದಲ್ಲಿ ಆರ್ಯವೈಶ್ಯ ಸಮಾಜದಿಂದ ವಾಸವಿ ಜಯಂತಿ

KannadaprabhaNewsNetwork |  
Published : Apr 27, 2026, 01:30 AM IST
26ಎಚ್ಎಸ್ಎನ್4 : ಬೇಲೂರು  ಪೇಟೆ ಶ್ರೀ ಕನ್ನಿಕಾಪರಮೇಶ್ವರಿ ದೇಗುಲದಲ್ಲಿ ವಾಸವಿ ಜಯಂತಿ ಮಹೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಲಾಯಿತು. | Kannada Prabha

ಸಾರಾಂಶ

ಮೂಲಸ್ಥಾನದ ಅಮ್ಮನವರಿಗೆ ಹಾಗೂ ಉತ್ಸವ ಮೂರ್ತಿಗೆ ವಿಶೇಷ ಅಭಿಷೇಕ ನೆರವೇರಿಸಲಾಯಿತು. ಬಳಿಕ ಮಡಿ ಉತ್ಸವ ಹಾಗೂ ವಾಸವಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಪ್ರತಿ ವರ್ಷದಂತೆ ಈ ವರ್ಷವೂ ಅಪಾರ ಸಂಖ್ಯೆಯಲ್ಲಿ ಕುಲಬಾಂಧವರು ಆಗಮಿಸಿ ಉತ್ಸವದಲ್ಲಿ ಭಕ್ತಿಯಿಂದ ಪಾಲ್ಗೊಂಡರು. ದಿನದ ವಿಶೇಷವಾಗಿ ಅಮ್ಮನವರಿಗೆ ತುಲಾಭಾರ, ಗೋಪೂಜೆ, ಕನ್ನಿಕಾ ಪೂಜೆ ಹಾಗೂ ಮಹಿಳೆಯರಿಗೆ ಮಡಲಕ್ಕಿ ನೀಡುವ ಕಾರ್ಯಕ್ರಮಗಳು ಜರುಗಿದವು. ಮಧ್ಯಾಹ್ನ ವಾಸವಿ ಹೋಮ ಮತ್ತು ಮಹಾಮಂಗಳಾರತಿ ನೆರವೇರಿತು. ಕುಲಬಾಂಧವರು ತಮ್ಮ ದೈನಂದಿನ ವ್ಯವಹಾರಗಳನ್ನು ಸ್ಥಗಿತಗೊಳಿಸಿ ಆಗಮಿಸಿದ್ದರು.

ಕನ್ನಡಪ್ರಭ ವಾರ್ತೆ ಬೇಲೂರು

ಪೇಟೆ ಶ್ರೀ ಕನ್ನಿಕಾಪರಮೇಶ್ವರಿ ದೇಗುಲದಲ್ಲಿ ವಾಸವಿ ಜಯಂತಿ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಲಾಯಿತು.ಆರ್ಯವೈಶ್ಯ ಸಮಾಜದ ಬಂಧುಗಳು ಆರ್ಯವೈಶ್ಯ ಸಮಾಜದ ಅಧ್ಯಕ್ಷ ಬಿ‌. ಡಿ. ಅಶೋಕ್ ಸೇರಿದಂತೆ ಆರ್ಯವೈಶ್ಯ ಸಮಾಜದ ವಿವಿಧ ಸಂಘದ ಅಧ್ಯಕ್ಷರು, ಪದಾಧಿಕಾರಿಗಳ ನೇತೃತ್ವದಲ್ಲಿ ನಗರದಲ್ಲಿ ಕನ್ನಿಕಾ ಪರಮೇಶ್ವರಿ ದೇವಿಯ ಮೆರವಣಿಗೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ 5:30ರಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾದವು. ಮೂಲಸ್ಥಾನದ ಅಮ್ಮನವರಿಗೆ ಹಾಗೂ ಉತ್ಸವ ಮೂರ್ತಿಗೆ ವಿಶೇಷ ಅಭಿಷೇಕ ನೆರವೇರಿಸಲಾಯಿತು. ಬಳಿಕ ಮಡಿ ಉತ್ಸವ ಹಾಗೂ ವಾಸವಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಪ್ರತಿ ವರ್ಷದಂತೆ ಈ ವರ್ಷವೂ ಅಪಾರ ಸಂಖ್ಯೆಯಲ್ಲಿ ಕುಲಬಾಂಧವರು ಆಗಮಿಸಿ ಉತ್ಸವದಲ್ಲಿ ಭಕ್ತಿಯಿಂದ ಪಾಲ್ಗೊಂಡರು. ದಿನದ ವಿಶೇಷವಾಗಿ ಅಮ್ಮನವರಿಗೆ ತುಲಾಭಾರ, ಗೋಪೂಜೆ, ಕನ್ನಿಕಾ ಪೂಜೆ ಹಾಗೂ ಮಹಿಳೆಯರಿಗೆ ಮಡಲಕ್ಕಿ ನೀಡುವ ಕಾರ್ಯಕ್ರಮಗಳು ಜರುಗಿದವು. ಮಧ್ಯಾಹ್ನ ವಾಸವಿ ಹೋಮ ಮತ್ತು ಮಹಾಮಂಗಳಾರತಿ ನೆರವೇರಿತು. ಕುಲಬಾಂಧವರು ತಮ್ಮ ದೈನಂದಿನ ವ್ಯವಹಾರಗಳನ್ನು ಸ್ಥಗಿತಗೊಳಿಸಿ ಆಗಮಿಸಿದ್ದರು. ಪುರುಷರು, ಮಹಿಳೆಯರು, ಮಕ್ಕಳು ಹಾಗೂ ವಯೋವೃದ್ಧರು ಸೇರಿದಂತೆ ಪ್ರತಿಯೊಬ್ಬರೂ ಸಕ್ರಿಯವಾಗಿ ಪಾಲ್ಗೊಂಡು ಉತ್ಸವಕ್ಕೆ ಸಹಕಾರ ನೀಡಿದರು.ಈ ಸಂಧರ್ಭದಲ್ಲಿ ವಾಸವಿ ವನಿತಾ ಸಂಘದ ಅಧ್ಯಕ್ಷೆ ಜ್ಯೋತಿ ಸುರೇಶ್, ಉಪಾಧ್ಯಕ್ಷ ಬಿ.ಎಂ‌.ಸುರೇಶ್, ಕಾರ್ಯದರ್ಶಿ ಕೆ. ಎಲ್. ಸುಧೀಂದ್ರ, ಖಜಾಂಚಿ ವಿನಯ್ ಕುಮಾರ್, ನಿರ್ದೇಶಕರಾದ ರವೀಂದ್ರನಾಥ್, ವಿಶ್ವನಾಥ್ ಜೆ.ಪ್ರಶಾಂತ್, ಉಮೇಶ್, ಬಿ.ಎ. ಆನಂದ್‌, ಪ್ರಶಾಂತ್, ವಾಸವಿ ಯುವಜನ ಸಂಘದ ಅಧ್ಯಕ್ಷ ಶ್ರೀನಿವಾಸ್, ವಾಸವಿ ಫಂಡ್ಸ್ ಅಧ್ಯಕ್ಷ .ಗುರುರಾಜ್, ವಾಸವಿ ಸೇವಾ ಮಂಡಳಿ ಅಧ್ಯಕ್ಷ ಕೃಷ್ಣಕುಮಾರ್‌, ಶ್ರೀವಾರಿ ಭಜನಾ ಮಂಡಳಿ ಶ್ರೀಮತಿ ಮಾಲತಿ ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನೆಮನೆಗಳಲ್ಲಿ ಶ್ರೀ ಶಂಕರ ಜಯಂತಿ ಆಚರಣೆ
ಹಣಕ್ಕಿಂತ ಆರೋಗ್ಯವೇ ಅಮೂಲ್ಯ ಎಂದ ಶಾಸಕ ಸ್ವರೂಪ್‌