ಸಂಸ್ಕಾರಯುತ , ಗುಣಾತ್ಮಕ ಶಿಕ್ಷಣ ನೀಡುವಲ್ಲಿ ವಾಸವಿ ಸಂಸ್ಥೆ ಸದಾ ಮುಂದೆ: ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ

KannadaprabhaNewsNetwork |  
Published : Sep 24, 2026, 01:45 AM IST
ಭೂಮಿ ಪೂಜೆ | Kannada Prabha

ಸಾರಾಂಶ

ವಾಸವಿ ವಿದ್ಯಾಸಂಸ್ಥೆ ಹೊಸ ಕಟ್ಟಡ ನಿರ್ಮಾಣ ಮಾಡುತ್ತಿರುವುದು ವೈಯುಕ್ತಿಕವಾಗಿ ಸಂತಸ ತಂದಿದೆ. ಕಟ್ಟಡ ನಿರ್ಮಾಣಕ್ಕೆ ಜೊತೆಗಿದ್ದು ನನ್ನ ಕೈಲಾದ ಸಹಾಯ ಮಾಡುವೆ. ಆರ್ಯ ವೈಶ್ಯ ಸಮಾಜ ಅತ್ಯಂತ ಪುಟ್ಟ ಸಮಾಜ. ಅಂತಹ ಸಮಾಜ ಕೊಳ್ಳೇಗಾಲದ ಎರಡೂವರೆ ಲಕ್ಷದ ಜನಕ್ಕೆ ರಾಗಿ ಹಿಟ್ಟಿನಿಂದ ಹಿಡಿದು ಚಿನ್ನದ ತನಕ ಸರಬರಾಜು ಮಾಡುವ ಪುಣ್ಯದ ಕೆಲಸ ಮಾಡುತ್ತಿದೆ . ಆರ್ಯವೈಶ್ಯ ಸಮಾಜ ಮೂರ್ತಿಯಲ್ಲಿ ಚಿಕ್ಕದಾದರೂ ಕೀರ್ತಿಯಲ್ಲಿ ದೊಡ್ಡದಾಗಿ ಕೆಲಸ ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ದೇಶದಲ್ಲಿ ಸಾಕಷ್ಟು ದೇವಾಲಯಗಳು ನಿರ್ಮಾಣವಾಗಿದ್ದು, ಇನ್ನಷ್ಟು ದೇವಾಲಯಗಳ ನಿರ್ಮಾಣಕ್ಕಿಂತ ವಿದ್ಯಾಲಯಗಳ ನಿರ್ಮಾಣ ಹೆಚ್ಚಿನ ರೀತಿ ಸಾಗಬೇಕು, ಬದಲಾಗುತ್ತಿರುವ ಯುಗದಲ್ಲಿ ಯುವ ಪೀಳಿಗೆ ಕೇವಲ ಓದಿರುವ ಸರ್ಟಿಫಿಕೇಟ್ ನೋಡಿ ಕುಳಿತುಕೊಳ್ಳುವ ಬದಲು ಕೌಶಲ್ಯವಂತರಾಗಬೇಕು ಎಂದು ಬೆಂಗಳೂರಿನ ಶ್ರೀ ವಾಸವಿ ವಿಶ್ವಪೀಠ ಆರ್ಯವೈಶ್ಯ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಅವರು ಕೊಳ್ಳೇಗಾಲ ಪಟ್ಟಣದ ವಾಸವಿ ವಿದ್ಯಾಸಂಸ್ಥೆ ವತಿಯಿಂದ ಹೊಸ ಹಂಪಾಪುರ ಗ್ರಾಮದ ಬಳಿ ಆರ್ಯ ವೈಶ್ಯ ಸಂಘದ ವತಿಯಿಂದ ಮತ್ತೊಂದು ಹೊಸ ಕಟ್ಟಡ ನಿರ್ಮಾಣಕ್ಕಾಗಿ ಹಮ್ಮಿಕೊಳ್ಳಲಾಗಿದ್ದ ಭೂಮಿ ಪೂಜಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಂಸ್ಕಾರವಂತ ಶಿಕ್ಷಣದ ಜೊತೆ ಮೌನವೀಯ ನೆಲೆಗಟ್ಟಿನಲ್ಲಿ ವಾಸವಿ ವಿದ್ಯಾಸಂಸ್ಥೆ ಗುಣಾತ್ಮಕ ಶಿಕ್ಷಣ ನೀಡುವ ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ ಯಾವುದೆ ವಿದ್ಯಾಸಂಸ್ಥೆಗಳು ಸಹ ಶಿಕ್ಷಣ ನೀಡಬಹುದು, ಆದರೆ ವಾಸವಿ ಸಂಸ್ಥೆ ನಿಜಕ್ಕೂ ಮಕ್ಕಳನ್ನು ಸಂಸ್ಕಾರವಂತರನ್ನಾಗಿಸುವ ಶಿಕ್ಷಣ ನೀಡುತ್ತಾ ಬಂದಿದೆ, ಇಂದು ಭೂಮಿ ಪೂಜೆಯಾದ ಕಟ್ಟಡ ಬಹುಬೇಗ ಪೂರ್ಣಗೊಳ್ಳಲಿ ಎಂದು ಸಮಾಜದ ಬಂಧುಗಳು, ಶಿಕ್ಷಣ

ಪ್ರೇಮಿಗಳು ಶ್ರೀ ಕನ್ನಿಕಾ ಪರಮೇಶ್ವರಿ ದೇವಿಯನ್ನು ಪ್ರಾರ್ಥಿಸಿ, ಕೊಳ್ಳೇಗಾಲದಂತಹ ಪ್ರದೇಶದಲ್ಲಿ ವಾಸವಿ ವಿದ್ಯಾಸಂಸ್ಥೆ ಹೆಮ್ಮರವಾಗಿ ಬೆಳೆದು ಈಗ ದೊಡ್ಡಹಂತದ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಮುಂದಾಗಿರುವುದು ಸಂತದ ವಿಚಾರ. ಈ ಕಾರ್ಯ ಬಹುಬೇಗ ಪೂರ್ಣಗೊಳ್ಳಲಿ ಎಂದು ಶ್ರೀಗಳು ಆಶಿಸಿದರು.

ಸಮಾಜದ ಪ್ರಬಲ ಶಕ್ತಿ ಶಿಕ್ಷಣ, ಅಂತಹ ಪ್ರಬಲ ಶಿಕ್ಷಣವನ್ನು ಗುಣಾತ್ಮಕವಾಗಿ ಮಕ್ಕಳಿಗೆ ಅರ್ಥವಾಗುವ ನಿಟ್ಟಿನಲ್ಲಿ ಬೋಧಿಸುವಲ್ಲಿ ವಾಸವಿ ಸಂಸ್ಥೆ ಮುನ್ನಡೆ ಕಾಯ್ದುಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಶ್ರೀಗಳು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಎನ್.ಮಹೇಶ್ , ಮಾಜಿ ಶಾಸಕರಾದ ಆರ್.ನರೇಂದ್ರ, ಎಸ್.ಬಾಲರಾಜು, ಕರ್ನಾಟಕ ಆರ್ಯ ವೈಶ್ಯ ಸಂಘ ಮಹಾಸಭಾ ಅಧ್ಯಕ್ಷ ಆರ್.ಪಿ.ರವಿಶಂಕರ್, ಬೆಂಗಳೂರು ಶ್ರೀ ಭಾಗ್ಯಲಕ್ಷ್ಮೀ ಗ್ರೂಫ್ ಆಫ್ ಇಂಡಸ್ಟ್ರೀಸ್ ಬಿ.ಎ.ಶ್ರೀನಿವಾಸ ಗುಪ್ತ, ಬೆಂಗಳೂರಿನ ಕ್ಲಾಲ್ಡ್ ನೈನ್ ಹಾಸ್ಪಿಟಲ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಬಿ.ಆರ್.ಕಿಶೋರ್, ಬೆಂಗಳೂರಿನ ಶ್ರೀಗ್ಲೋಕೊ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀನಾಥ್, ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಎ.ಡಿ. ಕುಮಾರಕೃಷ್ಣ, ಪ್ರಧಾನ ಕಾರ್ಯದರ್ಶಿ ಡಾ. ಪಿ.ಜಿ.ಶ್ರೀಧರ್, ಐ.ಎನ್.ಜಿ ವೈಶ್ಯ ಬ್ಯಾಂಕ್ ನಿವೃತ್ತ ವಿಭಾಗೀಯ ವ್ಯವಸ್ಥಾಪಕರಾದ ನರಸಿಂಹಮೂರ್ತಿ, ಸತೀಶ್, ವಾಸವಾಂಬ, ನಾಗೇಂದ್ರ ಇನ್ನಿತರಿದ್ದರು.

---------

ವಾಸವಿ ವಿದ್ಯಾಸಂಸ್ಥೆ ಹೊಸ ಕಟ್ಟಡ ನಿರ್ಮಾಣ ಮಾಡುತ್ತಿರುವುದು ವೈಯುಕ್ತಿಕವಾಗಿ ಸಂತಸ ತಂದಿದೆ. ಕಟ್ಟಡ ನಿರ್ಮಾಣಕ್ಕೆ ಜೊತೆಗಿದ್ದು ನನ್ನ ಕೈಲಾದ ಸಹಾಯ ಮಾಡುವೆ. ಆರ್ಯ ವೈಶ್ಯ ಸಮಾಜ ಅತ್ಯಂತ ಪುಟ್ಟ ಸಮಾಜ. ಅಂತಹ ಸಮಾಜ ಕೊಳ್ಳೇಗಾಲದ ಎರಡೂವರೆ ಲಕ್ಷದ ಜನಕ್ಕೆ ರಾಗಿ ಹಿಟ್ಟಿನಿಂದ ಹಿಡಿದು ಚಿನ್ನದ ತನಕ ಸರಬರಾಜು ಮಾಡುವ ಪುಣ್ಯದ ಕೆಲಸ ಮಾಡುತ್ತಿದೆ . ಆರ್ಯವೈಶ್ಯ ಸಮಾಜ ಮೂರ್ತಿಯಲ್ಲಿ ಚಿಕ್ಕದಾದರೂ ಕೀರ್ತಿಯಲ್ಲಿ ದೊಡ್ಡದಾಗಿ ಕೆಲಸ ಮಾಡುತ್ತಿದೆ.

- ಎನ್.ಮಹೇಶ್, ಮಾಜಿ ಸಚಿವ

-----

ನಮ್ಮ ಸಮಾಜದಲ್ಲಿ 102 ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಮಾಗಡಿ , ಶಿವಮೊಗ್ಗ, ಚಿತ್ರದುರ್ಗ, ಕೊಳ್ಳೇಗಾಲದ ವಾಸವಿ ಶಾಲೆಗಳು ಅತ್ಯುತ್ತಮ

ರೀತಿ ಕಾರ್ಯನಿರ್ವಹಿಸುತ್ತಿದ್ದು ನಾಡಿಗೆ ಆದರ್ಶವಾಗಿವೆ. ಶಾಲೆಗಳು ದೇಶದ ನಿರ್ಮಾಣ ಬಯಸುವ ಕೇಂದ್ರಗಳು, ವಾಸವಿ ವಿದ್ಯಾಸಂಸ್ಥೆ ದಕ್ಷತೆಯಿಂದ ಕುಮಾರಕೃಷ್ಣ ಮತ್ತು ಅವರ ತಂಡ ಸಹಕಾರದೊಂದಿಗೆ ಉತ್ತಮ ಕೆಲಸ ಮಾಡುತ್ತಿದೆ, ಇದು ಅತ್ಯಂತ ಶ್ಲಾಘನೀಯ ಬೆಳವಣಿಗೆ. ಶೀಘ್ರದಲ್ಲೆ ಬೆಂಗಳೂರಿನಲ್ಲಿ ಆರ್ಯವೈಶ್ಯ ಸಮಾಜ ನಡೆಸುವ ವಿಶ್ವಮಟ್ಟದ ಉದ್ಯೋಗದಿಂದ ಉದ್ಯಮದೆಡೆ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಿ, ಈ ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿಗಳು, ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ . 3ದಿನಗಳ ಕಾಲ ಉದ್ಯಮ ಸೃಷ್ಠಿಗೆ ಪೂರಕ ಕಾರ್ಯಕ್ರಮ ಇದಾಗಿದೆ.

- ಆರ್. ಪಿ. ರವಿಶಂಕರ್, ಅರ್ಯ ವೈಶ್ಯ ಸಂಘದ ರಾಜ್ಯಾಧ್ಯಕ್ಷ

-----------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನ ಸಮಸ್ಯೆ ಪರಿಹಾರಕ್ಕೆ ಡಿಸಿ ಸೂಚನೆ
ತರಳಬಾಳು ಸಂಸ್ಥೆಯಲ್ಲಿ ಸಮಗ್ರ ಬದುಕು ರೂಪಿಸುವ ಶಿಕ್ಷಣ: ಬಸವ ಮರುಳಸಿದ್ಧ ಸ್ವಾಮೀಜಿ